ಕನ್ನಡದ ಸಿನೆಮಾಗಳಲ್ಲಿ ಪುನೀತ್ ರವರು ಯಾಕೆ ಹಾಡನ್ನು ಹಾಡುತ್ತಿದ್ದರು ಗೊತ್ತೇ?? ಅಂದು ಪಾರ್ವತಮ್ಮ ಏನು ಹೇಳಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಪ್ಪು, ಕರ್ನಾಟಕದ ರಾಜರತ್ನ ನಮ್ಮನಗಲಿ ಮೂರು ತಿಂಗಳಾಗುತ್ತ ಬಂದಿದೆ. ಆದರೇ ಅಪ್ಪು ಅವರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಈ ನಡುವೆ ಪುನೀತ್ ರಾಜಕುಮಾರ್ ರವರ ಬಗ್ಗೆ ಮಾತನಾಡುತ್ತಾ, ಕನ್ನಡದ ಚಿತ್ರ ನಟ ರಿಷಿಯವರು, ಕೆಲವು ವರ್ಷಗಳ ಹಿಂದೆ, ಪುನೀತ್ ರವರ ತಾಯಿ, ಪಾರ್ವತಮ್ಮ ರಾಜ್ ಕುಮಾರ್ ರವರು, ಪುನೀತ್ ಯಾವ ಕಾರಣಕ್ಕಾಗಿ ಸಿನಿಮಾಗಳಲ್ಲಿ ಹಾಡುತ್ತಾರೆಂಬುದನ್ನ ರಿಷಿಯವರಿಗೆ ಹೇಳಿದ್ದರಂತೆ. ಅದನ್ನ ರಿಷಿಯವರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ದೊಡ್ಮನೆಯ ಗುಣವೇ ಹಾಗೆ. ಡಾಕ್ಟರ್ ರಾಜ್ ಕುಮಾರ್ ಕಾಲದಿಂದಲೂ ಆ ಕುಟುಂಬದಲ್ಲಿ ಗೀತ ಗಾಯನ, ಹಿನ್ನಲೆ ಗಾಯನದಿಂದ ಬಂದಂತಹ ಸಂಭಾವನೆಯನ್ನು ಅವರು ಸ್ವಂತಕ್ಕೆ ಉಪಯೋಗಿಸಿಕೊಳ್ಳದೇ, ಅನಾಥಾಶ್ರಮ, ಬಡವರಿಗಾಗಿ ಖರ್ಚು ಮಾಡಲಾಗುತ್ತಿತ್ತಂತೆ. ಅದನ್ನೇ ಪುನೀತ್ ರಾಜ್ ಕುಮಾರ್ ಸಹ ಮಾಡುತ್ತಿದ್ದರು. ಪುನೀತ್ ರಾಜ್ ಕುಮಾರ್ ರವರ ಹಿನ್ನಲೆ ಗಾಯನಕ್ಕೆ ವ್ಯಾಪಕ ಬೇಡಿಕೆಯಿತ್ತು.
ಎಲ್ಲಾ ನಿರ್ದೇಶಕರು, ಪುನೀತ್ ತಮ್ಮ ಚಿತ್ರದಲ್ಲಿ ಟೈಟಲ್ ಸಾಂಗ್ ಹಾಡಿದರೇ ಸಾಕು, ಸಿನಿಮಾ ಹಿಟ್ ಆಗುತ್ತದೆ ಎಂಬ ನಂಬಿಕೆ ಇತ್ತಂತೆ. ಹಾಗಾಗಿ ಪುನೀತ್ ರಾಜ್ ಕುಮಾರ್ ಹಾಡುಗಳಿಗಾಗಿ ಬೇಡಿಕೆಯಿತ್ತು. ಆದರೇ ಕೇಳಿಕೊಂಡು ಬಂದ ನಿರ್ದೇಶಕರಿಗೆ ಪುನೀತ್ ರಾಜ್ ಕುಮಾರ್ ಯಾರಿಗೂ ಬೇಸರ ಮಾಡುತ್ತಿರಲಿಲ್ಲ. ಆದರೇ ಹಿನ್ನಲೆ ಗಾಯನದಿಂದ ಬಂದ ಸಂಪೂರ್ಣ ಸಂಭಾವನೆಯನ್ನು ಅನಾಥಾಶ್ರಮ, ಮಹಿಳೆಯರ ಆಶ್ರಮಗಳಿಗೆ ನೀಡುತ್ತಿದ್ದರಂತೆ. ಇದು ಪುನೀತ್ ರಾಜ್ ಕುಮಾರ್ ರವರ ದೊಡ್ಡ ಗುಣವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.