ಲಕ್ನೋ, ಅಹಮದಾಬಾದ್ ತಂಡಗಳು ಖರೀದಿ ಮಾಡುವ ಅವಕಾಶವಿದ್ದರೂ ಕೂಡ ದಡ್ಡರಂತೆ ಮಿಸ್ ಮಾಡಿಕೊಡ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇನ್ನೇನು ಈ ಬಾರಿಯ ಐಪಿಎಲ್ ನ ಮೆಗಾ ಹರಾಜು ಎನ್ನುವುದು ಇದೇ ಫೆಬ್ರವರಿಯ 12 ಹಾಗೂ 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಾರಿ ಹರಾಜಿನಲ್ಲಿ ಸಾವಿರಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳಲಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳು ಪಾಲ್ಗೊಂಡಿವೆ. ಅವೇ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು. ಈಗಾಗಲೇ ಈ ಎರಡು ತಂಡಗಳು ಕೂಡ ತಲಾ ಮೂರು ಆಟಗಾರರನ್ನು ಮೊದಲ ಆಯ್ಕೆ ಗಳನ್ನಾಗಿ ಮಾಡಿಕೊಂಡಿದೆ. ಆದರೆ ಈ ಎರಡು ತಂಡಗಳು ಕೂಡ 5 ಅದ್ಭುತ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಎಡವಿದೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಆ 5 ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಶಿಖರ್ ಧವನ್; ಭಾರತೀಯ ತಂಡದ ಅತ್ಯುತ್ತಮ ಆರಂಭಿಕ ಆಟಗಾರ ಆಗಿರುವ ಶಿಖರ್ ಧವನ್ ರವರು ಐಪಿಎಲ್ ನಲ್ಲಿ ಕೂಡ ತಮ್ಮ ಜಲ್ವಾವನ್ನು ತೋರಿಸಿದ್ದಾರೆ. ಈವರೆಗೂ ಪ್ರಾರಂಭಿಕ ಐಪಿಎಲ್ ನಿಂದ ಹಿಡಿದು ಇಲ್ಲಿಯವರೆಗೆ ಶಿಖರ್ ಧವನ್ ರವರು ಡೆಲ್ಲಿ ಡೇರ್ ಡೆವಿಲ್ಸ್ ಮುಂಬೈ ಇಂಡಿಯನ್ಸ್ ಡೆಕ್ಕನ್ ಚಾರ್ಜರ್ಸ್ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿದ್ದಾರೆ. ಇನ್ನೊಂದು ಪ್ರಮುಖವಾದ ವಿಷಯವೆಂದರೆ ಶಿಖರ್ ಧವನ್ ರವರು 192 ಪಂದ್ಯಗಳಲ್ಲಿ 5784 ರನ್ಗಳನ್ನು ಬಾರಿಸುವ ಮೂಲಕ ಐಪಿಎಲ್ ನಲ್ಲಿ ಎರಡನೇ ಅತ್ಯಂತ ಹೆಚ್ಚು ರನ್ ಸ್ಕೋರರ್ ಆಗಿ ಕಾಣಿಸಿಕೊಂಡಿದ್ದಾರೆ. ಗಬ್ಬರ್ ಐಪಿಎಲ್ನಲ್ಲಿ ಕನ್ಸಿಸ್ಟೆಂಟ್ ಆಗಿ ಆರಂಭಿಕ ಬ್ಯಾಟ್ಸ್ಮನ್ ಸ್ಥಾನದಲ್ಲಿ ಪ್ರದರ್ಶನವನ್ನು ನೀಡಿದ್ದಾರೆ. ಇಂತಹ ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಎರಡು ಹೊಸ ತಂಡಗಳು ಕೂಡ ಎಡವಿವೆ. ಹೀಗಾಗಿ ಗಬ್ಬರ್ ಬಾರಿಯ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಶಾನ್ ಕಿಶನ್; ಮಹೇಂದ್ರ ಸಿಂಗ್ ಧೋನಿ ರವರ ನಂತರ ಮತ್ತೊಬ್ಬ ಜಾರ್ಖಂಡ್ ಪ್ರತಿಭೆ ಐಪಿಎಲ್ನಲ್ಲಿ ಹಾಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ದೊಡ್ಡಮಟ್ಟದ ಮ್ಯಾಜಿಕ್ ಮೋಡಿ ಮಾಡಿದ್ದಾರೆ. 2016 ರಲ್ಲಿ ಗುಜರಾತ್ ಲಯನ್ಸ್ ತಂಡದ ಪರವಾಗಿ ಆಡುವ ಮೂಲಕ ಐಪಿಎಲ್ ಕರಿಯರ್ ನ್ನು ಪ್ರಾರಂಭಿಸಿದ ಇಶಾನ್ ಕಿಶನ್ ನಂತರ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನವನ್ನು ಪಡೆಯುತ್ತಾರೆ. 61 ಐಪಿಎಲ್ ಪಂದ್ಯಗಳನ್ನು ಆಡಿರುವ ಈತ 1452 ರನ್ನುಗಳನ್ನು ಬಾರಿಸಿದ್ದಾರೆ. ಎರಡು ಹೊಸ ತಂಡಗಳು ಕೂಡ ಇಶಾನ್ ಕಿಶನ್ ರವರನ್ನು ಖರೀದಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದೊಡ್ಡ ಮೊತ್ತಕ್ಕೆ ಸೇಲ್ ಆಗೋದು ಗ್ಯಾರಂಟಿ.

ಯಜುವೇಂದ್ರ ಚಹಲ್; 2011 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಐಪಿಎಲ್ ಪಂದ್ಯಗಳನ್ನು ಹಾಡಲು ಪ್ರಾರಂಭಿಸಿದ ಚಹಾಲ್ ನಂತರ 2014 ರಲ್ಲಿ ಬೆಂಗಳೂರು ತಂಡದ ಪಾಲಾಗುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಗಳಲ್ಲಿ ಚಹಾಲ್ ಅವರು ಅಗ್ರಗಣ್ಯನಾಗಿ ಕಾಣಿಸಿಕೊಳ್ಳುತ್ತಾರೆ. 114 ಪಂದ್ಯಗಳಿಂದ 139 ವಿಕೆಟ್ಗಳನ್ನು ಹಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಣಾಮಕಾರಿ ಬೌಲರ್ ಈ ಬಾರಿ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿದ್ದಾರೆ. ಹೊಸ ತಂಡಗಳು ಕೂಡ ಇವರನ್ನು ಮೊದಲ ಪಿಕ್ ಆಗಿ ಆಯ್ಕೆ ಮಾಡಲು ಕೂಡ ವಿಫಲವಾಗಿವೆ. ಹೀಗಾಗಿ ಈ ಬಾರಿಯ ಮೆಗಾ ಹರಾಜಿನಲ್ಲಿ ಚಹಲ್ ರವರು ಪ್ರಮುಖ ಆಕರ್ಷಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಶ್ರೇಯಸ್ ಅಯ್ಯರ್; ಶ್ರೇಯಸ್ ಅಯ್ಯರ್ ರವರು ಮೊದಲಿನಿಂದಲೂ ಕೂಡ ಡೆಲ್ಲಿ ತಂಡದ ಭಾಗವಾಗಿದ್ದರು. ಕೇವಲ ಬ್ಯಾಟ್ಸ್ಮನ್ ಆಗಿ ಮಾತ್ರವಲ್ಲದೆ ತಂಡವನ್ನು ಮುನ್ನಡೆಸಬಲ್ಲಂತಹ ಸಮರ್ಥ ನಾಯಕನಾಗಿ ಕೂಡ ಕಾಣಿಸಿಕೊಂಡಿದ್ದಾರೆ. 2015 ಹಾಗೂ 2018 ರಲ್ಲಿ ಉದಯೋನ್ಮುಖ ಆಟಗಾರ ಎಂಬ ಹಣೆಪಟ್ಟಿಗೆ ಕೂಡ ಮಾನ್ಯ ರಾಗಿದ್ದಾರೆ. ಡೆಲ್ಲಿ ತಂಡದ ನಾಯಕನಾಗಿ 2019 ರಲ್ಲಿ ಪ್ಲೇಆಫ್ ವರೆಗೆ ಹಾಗೂ 2020 ರಲ್ಲಿ ಫೈನಲ್ ವರೆಗೂ ಮುನ್ನಡೆಸಿದ್ದಾರೆ. ಈ ಬಾರಿ ಎರಡು ತಂಡಗಳು ಕೂಡ ಇವರನ್ನು ಖರೀದಿಸುವಲ್ಲಿ ಆಸಕ್ತಿ ತೋರಿಸಿಲ್ಲ ಹೀಗಾಗಿ ಮೆಗಾ ಹರಾಜಿನಲ್ಲಿ ಇವರ ಹರಾಜು ಮೊತ್ತ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಾಣಲಿವೆ.

ಡೇವಿಡ್ ವಾರ್ನರ್; ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಅವರು 2009 ರಲ್ಲಿ ಡೆಲ್ಲಿ ತಂಡದ ಪರವಾಗಿ ಪಾದರ್ಪಣೆ ಮಾಡುತ್ತಾರೆ. ನಂತರ 2014 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ವರ್ಗಾವಣೆಯಾಗುತ್ತಾರೆ. ಹೈದರಾಬಾದ್ ತಂಡದ ನಾಯಕರಾಗಿ 2016 ರಲ್ಲಿ ಐಪಿಎಲ್ ಕಪ್ ಗೆಲ್ಲಲು ಯಶಸ್ವಿಯಾಗುತ್ತಾರೆ. ಐಪಿಎಲ್ ನಲ್ಲಿ ಅತ್ಯಂತ ಯಶಸ್ವಿ ವಿದೇಶಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಎರಡು ಬಾರಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದಾರೆ. ಇದು ಐಪಿಎಲ್ನಲ್ಲಿ ಅತ್ಯಂತ ಅಧಿಕ ಎಂದು ಹೇಳಲಾಗುತ್ತಿದೆ. ಇನ್ನು ಹೈದರಾಬಾದ್ ತಂಡದಿಂದ ಇವರು ಹೊರಬಂದಿದ್ದು ಈ ಬಾರಿಯ ಮೆಗಾ ಹರಾಜಿನಲ್ಲಿ ಅತ್ಯಂತ ಹೆಚ್ಚು ಬೆಲೆಗೆ ಮಾರಾಟವಾಗುವುದನ್ನು ಗ್ಯಾರಂಟಿ. ಇದಕ್ಕೆ ಪ್ರಮುಖ ಕಾರಣವೆಂದರೆ ಡೇವಿಡ್ ವಾರ್ನರ್ ಅವರ ನಾಯಕತ್ವದ ಶೈಲಿ ಹಾಗೂ ಇವರು ತಂಡದಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಆಗಿ ಮಿಂಚ ಬಲ್ಲರು. ಈ 5 ಆಟಗಾರರನ್ನು ಎರಡು ಹೊಸ ತಂಡಗಳು ಖರೀದಿಸುವ ಅವಕಾಶವಿದ್ದರೂ ಕೂಡ ಅವಕಾಶವನ್ನು ಕೈಚೆಲ್ಲಿದ್ದು ಈ ಬಾರಿಯ ಹರಾಜಿನಲ್ಲಿ ಇವರು ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಭರವಸೆಯನ್ನು ಮೂಡಿಸಿದ್ದಾರೆ.

Get real time updates directly on you device, subscribe now.