ಇದ್ದಕ್ಕಿದ್ದ ಹಾಗೆ ಒಮ್ಮೆಲೇ ಹತ್ತು ವಯಾಗ್ರ ಮಾತ್ರೆಗಳನ್ನು ಸೇವಿಸಿದ 25 ವರ್ಷದ ಹುಡುಗ, ಆದರೆ ನಂತರ ನಡೆದ್ದದೇನು ಗೊತ್ತೇ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನೀವೆಲ್ಲರೂ ವಯಾಗ್ರ ಎನ್ನುವ ಹೆಸರನ್ನು ಕೇಳಿಯೇ ಕೇಳಿರುತ್ತೀರಿ. ವಯಾಗ್ರವನ್ನು ಮೊದಲು ಹೈ ಬ್ಲಡ್ ಪ್ರೆಶರ್ ಗಾಗಿ ಬಳಸುತ್ತಿದ್ದರು ಆದರೆ ಈಗ ಇದರ ಬಳಕೆಯ ಕಾರಣವೇ ಬದಲಾಗಿಬಿ ಟ್ಟಿದೆ. ಈಗ ವಯಾಗ್ರವನ್ನು ಎರೆಕ್ಟೈಲ್ ಡಿಸ್ಫಂಕ್ಷನ್ ಸಮಸ್ಯೆಯನ್ನು ದೂರ ಮಾಡಲು ಬಳಸುತ್ತಾರೆ. ಅಂದರೆ ಸಂಬಂಧವನ್ನು ಬೆಳೆಸುವ ಕ್ರಿಯೆಯ ಸಂದರ್ಭದಲ್ಲಿ ಉತ್ತಮ ಪರ್ಫಾರ್ಮೆನ್ಸ್ ಗಾಗಿ ಈ ಮಾತ್ರೆಯನ್ನು ಬಳಸುತ್ತಾರೆ. ಇದು ನೀಲಿ ಬಣ್ಣದಲ್ಲಿ ಹರಳಿನಂತೆ ಕಂಡುಬರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಇದನ್ನು ಕ್ರಿಯೆ ಸಂದರ್ಭದಲ್ಲಿ ಉತ್ತಮ ಪರ್ಫಾರ್ಮೆನ್ಸ್ ಗಾಗಿ ಬಳಸುತ್ತಾರೆ. ಈಗ ಇದರ ಬಳಕೆಯ ಒಳಾರ್ಥ ನಿಮಗೆ ಸಂಪೂರ್ಣವಾಗಿ ತಿಳಿದಿರಬಹುದು.

ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಇದೇ ವಯಾಗ್ರದ ವಿಚಾರದ ಕುರಿತಂತೆ. ಇದು ನಡೆದಿರುವುದು ನಮ್ಮ ಭಾರತ ದೇಶದ ಮಧ್ಯ ಪ್ರದೇಶದಲ್ಲಿ. ಈ ವಿಚಿತ್ರವಾದ ವಿಚಾರವನ್ನು ಕೇಳಿದರೆ ನೀವು ಕೂಡ ಬೆಸ್ತು ಬೀಳೋದು ಗ್ಯಾರಂಟಿ. ಯಾಕೆಂದರೆ ಬಾಬು ಎನ್ನುವ 25 ವರ್ಷದ ವ್ಯಕ್ತಿಯೊಬ್ಬ 10 ವಯಾಗ್ರದ ಮಾತ್ರೆಗಳನ್ನು ಒಂದೇ ಬಾರಿ ತಿನ್ನುತ್ತಾನೆ. ನಂತರ ಈತನ ಆರೋಗ್ಯದಲ್ಲಿ ಗಂಭೀರವಾದ ಏರುಪೇರುಗಳು ಉಂಟಾಗಿ ಇತರನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಆದರೆ ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ಈತ ಆಸ್ಪತ್ರೆಯಲ್ಲೇ ಮರಣವನ್ನು ಹೊಂದಿದ್ದಾನೆ. 10 ವಯಾಗ್ರ ಮಾತ್ರೆ ಗಳನ್ನು ತಿಂದ ತಪ್ಪಿಗಾಗಿ ತನ್ನ ಜೀವವನ್ನೇ ಕೊಡಬೇಕಾದಂತಹ ಪರಿಸ್ಥಿತಿ ಈತನಿಗೆ ಒದಗಿಬಂದಿದ್ದು ವಿಷಾದನೀಯ.

ಇರುವರಿಗೂ ಆ ಹುಡುಗ ಅಷ್ಟೊಂದು ವಯಾಗ್ರದ ಮಾತ್ರೆಗಳನ್ನು ಯಾಕೆ ತಿಂದ ಎನ್ನುವುದಕ್ಕೆ ವಿವರಣೆಗಳು ಇನ್ನು ಸಿಕ್ಕಿಲ್ಲ. ಇದರ ಕುರಿತಂತೆ ಇನ್ನೂ ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವೈದ್ಯರ ಪ್ರಕಾರ ಆತ ಆಸ್ಪತ್ರೆಗೆ ಮಿತಿಮೀರಿದ ವಯಾಗ್ರದ ಮಾತ್ರೆಗಳನ್ನು ತಿಂದಿದ್ದ ಎನ್ನುವುದಕ್ಕಾಗಿ ದಾಖಲಾಗಿದ್ದ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಆತನ ದೇಹದಲ್ಲಿ ಓವರ್ಡೋಸ್ ಆಗಿರುವ ಕಾರಣದಿಂದಾಗಿ ಮರಣ ಸಂಭವಿಸಿದೆ ಎಂಬುದನ್ನು ತಿಳಿದುಬಂದಿದೆ. ಆತನ ದೇಹದಲ್ಲಿ ಸಸ್ಪೆಕ್ಟೆಡ್ ವಿ’ಷಾಂಶ ಗಳು ಕೂಡ ಕಂಡುಬಂದಿವೆ.

ಪೊಲೀಸರ ಪ್ರಕಾರ ಆತ ತನ್ನ ಜೀವನವನ್ನು ಕೊನೆಗಾಣಿಸಿ ಕೊಳ್ಳುವುದಕ್ಕಾಗಿ ಇಷ್ಟೊಂದು ವಯಾಗ್ರ ಮಾತ್ರೆಗಳು ತಿಂದಿದ್ದಾನೆ ಎಂಬುದಾಗಿ ಅನುಮಾನ ಮೂಡಿದೆ. ಇದರ ಕುರಿತಂತೆ ಆ ಹುಡುಗ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ವೈದ್ಯರಿಗೆ ಯಾವುದೇ ಮಾಹಿತಿಗಳನ್ನು ನೀಡಿಲ್ಲ. ಮನೆಯಲ್ಲಿ ಹುಡುಕಿದಾಗ ಯಾವುದೇ ಮರಣದ ಪತ್ರಗಳು ಕೂಡ ದೊರಕಿಲ್ಲ. ಇನ್ನು ಈತ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಈತನಿಗೆ ಮೂರು ಜನ ತಮ್ಮಂದಿರು ಕೂಡ ಇದ್ದಾರೆ. ಇವರ್ಯಾರಿಗೂ ಮದುವೆ ಕೂಡ ಆಗಿಲ್ಲ. ಹೀಗಾಗಿ ಯಾವುದೇ ಆಂಗಲ್ ನಲ್ಲಿ ವಿಚಾರಣೆ ಮಾಡಿದರು ಕೂಡ ಆ ಹುಡುಗ ಯಾಕೆ ಈ ಮಾತ್ರೆಗಳನ್ನು ತೆಗೆದುಕೊಂಡ ಎನ್ನುವುದಕ್ಕೆ ಸುಳಿವು ಸಿಗುತ್ತಿಲ್ಲ.

ಅದೇನೇ ಇರಲಿ ವಯಾಗ್ರಾ ಮಾತ್ರೆ ಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ಪರಿಸ್ಥಿತಿಯಲ್ಲಿ ತಿನ್ನಬೇಕು ಇಲ್ಲದಿದ್ದರೆ ಈ ಹುಡುಗನಿಗೆ ಆದಂತಹ ಪರಿಸ್ಥಿತಿಯೇ ನಿಮಗೂ ಕೂಡ ಆಗಬಹುದು. ಕೆಲವೊಮ್ಮೆ ಇದರ ಸೇವನೆಯಿಂದಾಗಿ ಆರೋಗ್ಯದಲ್ಲಿ ವೈಪರಿತ್ಯ ಪರಿಣಾಮಗಳುಂಟಾಗುತ್ತವೆ. ಹೀಗಾಗಿ ಇದನ್ನು ಸೇವಿಸುವ ಮುನ್ನ ವೈದ್ಯರ ಬಳಿ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.

ಒಂದು ವೇಳೆ ನೀವು ಮುಂದೊಮ್ಮೆ ವಯಾಗ್ರವನ್ನು ಪ್ರಯತ್ನಿಸಲು ಹೊರಟರೆ ತಪ್ಪದೇ ವೈದ್ಯರ ಬಳಿ ಸಲಹೆಯನ್ನು ಕೇಳಿ. ಯಾಕೆಂದರೆ ನಿಮ್ಮ ಒಂದು ತಪ್ಪಿನ ಹೆಜ್ಜೆ ನಿಮ್ಮ ಜೀವನವನ್ನು ಆಹುತಿ ತೆಗೆದುಕೊಳ್ಳಬಹುದು. ನಿಮ್ಮ ಜೀವದ ಜವಾಬ್ದಾರಿ ನೀವೇ ಆಗಿರುವುದರಿಂದ ಎಲ್ಲಾ ರೀತಿಯಲ್ಲಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸೇವಿಸಿ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.