ಅಭಿಮಾನಿಗಳ ಬಹುದಿನಗಳ ಬೇಡಿಕೆ ಈಡೇರಿಸಿದ ಮೇಘನ್ ರಾಜ್, ಕರುನಾಡಿನ ಅತ್ತಿಗೆ ರವರಿಂದ ಬಂತು ಗುಡ್ ನ್ಯೂಸ್. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಿರುಸರ್ಜಾ ರವರ ಮರಣದ ನಂತರ ಮೇಘನಾರಾಜ್ ರವರು ಎಲ್ಲಾ ರೀತಿಯ ಮಾಧ್ಯಮದಿಂದ ದೂರ ಉಳಿದಿದ್ದರು. ಬೇಸರದಲ್ಲಿ ಮುಳುಗಿದ್ದಂತಹ ಮೇಘನಾ ರಾಜ್ ರವರ ಜೀವನಕ್ಕೆ ಬೆಳಕಾಗಿ ಬಂದಿದ್ದು ಅವರ ಮಗನಾಗಿರುವ ಜೂನಿಯರ್ ಚಿರುಸರ್ಜಾ ರಾಯನ್. ಜೂನಿಯರ್ ಚಿರು ಸರ್ಜಾ ಬಂದಮೇಲೆ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ರವರು ಸದಾಕಾಲ ಆಕ್ಟಿವ್ ಆಗಿದ್ದರು. ಅಭಿಮಾನಿಗಳು ಮೇಘನರಾಜ್ ರವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಕಾಣಲು ಕಾತರರಾಗಿದ್ದರು.

ಕಳೆದ ಬಾರಿ ಚಿರು ಸರ್ಜಾ ಅವರ ಜನ್ಮದಿನದ ಪ್ರಯುಕ್ತ ಕೆಲವೊಂದು ಸಿನಿಮಾಗಳಿಗೆ ಮೇಘನಾರಾಜ್ ರವರ ಸಹಿ ಹಾಕಿರುತ್ತಾರೆ. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ. ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮಕ್ಕೆ ಅತಿಥಿ ಜಡ್ಜ್ ಆಗಿ ಕೂಡ ಬರುತ್ತಾರೆ. ಪರ್ಮನೆಂಟ್ ಆಗಿ ತೀರ್ಪುಗಾರರಾಗಿರುತ್ತಾರೆ ಎಂದು ಅಭಿಮಾನಿಗಳು ಭಾವಿಸಿದರು ಆದರೆ ಅವರು ಬಂದಿದ್ದ ಕೇವಲ ಒಂದು ವಾರದ ಎಪಿಸೋಡ್ ಗಾಗಿ. ಎರಡನೇ ವಾರವೂ ಕೂಡ ಮಯೂರಿ ರವರ ಅನುಪಸ್ಥಿತಿಯಲ್ಲಿ ಮೇಘನಾರಾಜ್ ರವರು ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ವಿಜಯ್ ರಾಘವೇಂದ್ರ ರವರ ಜೊತೆಗೆ ಕಾಣಿಸಿಕೊಳ್ಳುತ್ತಾರೆ.

ಎರಡನೇ ವಾರ ಶಶಿ ಕುಮಾರ್ ರವರು ಕೂಡ ಆಗಮಿಸುತ್ತಾರೆ. ಕೇವಲ ಟೆಂಪರ್ವರಿ ಜಡ್ಜ್ ಆಗಿದ್ದ ಮೇಘನಾರಾಜ್ ರವರಿಗೆ ಅಭಿಮಾನಿಗಳು ನೀವು ಪರಮನೆಂಟ್ ಆಗಿ ತೀರ್ಪುಗಾರರಾಗಿ ಬನ್ನಿ ನಿಮ್ಮನ್ನು ಕಿರುತೆರೆಯಮೇಲೆ ನೋಡಲು ಕಾತರರಾಗಿದ್ದೇವೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಇಡುತ್ತಾರೆ. ಈ ಹಿನ್ನೆಲೆಯಲ್ಲಿ ಈಗ ಮೇಘನರಾಜ್ ರವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದರ ಮುಖಾಂತರ ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ ಪರ್ಮನೆಂಟ್ ಜಡ್ಜ್ ಆಗಿ ನಾನು ವಾಪಸಾಗಿದ್ದೇನೆ ಎಂಬುದಾಗಿ ಹಂಚಿಕೊಂಡಿದ್ದಾರೆ. ಇದು ಕಿರುತೆರೆಯ ವಾಹಿನಿಯ ಪ್ರೇಕ್ಷಕರನ್ನು ಸೇರಿದಂತೆ ಅವರ ಅಭಿಮಾನಿಗಳಿಗೆ ದೊಡ್ಡಮಟ್ಟದ ಸಂತೋಷವನ್ನುಂಟುಮಾಡಿದೆ. ಕೆಲವು ಸಮಯಗಳಿಂದ ಮತ್ತೊಬ್ಬ ತೀರ್ಪುಗಾರರಾಗಿರುವ ಮಯೂರಿ ರವರು ಕಾಣಿಸುತ್ತಿಲ್ಲ. ಇದರ ಕುರಿತಂತೆ ಇನ್ನೂ ವಾಹಿನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ