ದಕ್ಷಿಣ ಭಾರತದ ಖ್ಯಾತ ವಿಲ್ಲನ್ ಹೆಂಡತಿ ಯಾರು ಗೊತ್ತೇ?? ಈಕೆ ಕೂಡ ಫುಲ್ ಫೇಮಸ್. ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ಸ್ಪರ್ದಿ.

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರತಿಭೆ ಒಂದಿದ್ದರೆ ಸಾಕು ಪಾತ್ರ ಯಾವುದಾದರೂ ಕೂಡ ಪ್ರೇಕ್ಷಕರು ಖಂಡಿತವಾಗಿಯೂ ಕಲಾವಿದರಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಿ ಆತನನ್ನು ಸೂಪರ್ ಸ್ಟಾರ್ ಆಗುವಂತೆ ಮಾಡಿಯೇ ಮಾಡುತ್ತಾರೆ ಎಂಬುದು ಈಗಾಗಲೇ ಹಲವಾರು ಬಾರಿ ಚಿತ್ರರಂಗದಲ್ಲಿ ಸಾಬೀತಾಗಿದೆ. ದೊಡ್ಡ ನಟನಾಗಲು ಆತನ ಕಲರ್ ಅಥವಾ ಆತನ ಹಿನ್ನೆಲೆ ಬೇಕಾಗುವುದಿಲ್ಲ ಬದಲಾಗಿ ಆತನ ಪ್ರತಿಭೆ ಕೇವಲ ಮಾನ್ಯತೆ ಪಡೆಯುತ್ತದೆ.

ಇನ್ನು ಇಂದು ನಾವು ಮಾತನಾಡಲು ಹೊರಟಿರುವ ವ್ಯಕ್ತಿ ಕೂಡ ನಾಯಕನಟನಾಗಿ ಅಲ್ಲದಿದ್ದರೂ ಕೂಡ ಖಳನಾಯಕನಾಗಿ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಹೌದು ನಾವು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದ ಯಶಸ್ವಿ ಖಳನಾಯಕ ಅಜಯ್ ರವರ ಕುರಿತಂತೆ. 2000 ಇಸವಿಯಲ್ಲಿ ತೆಲುಗಿನ ಕೌರವುಡು ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಮೊದಮೊದಲಿಗೆ ನಟ ಅಜಯ್ ರವರು ಖಳನಾಯಕನಾಗಿ ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರ ನಟಿಸುತ್ತಾರೆ. ಬಹುತೇಕ ಚಿತ್ರಗಳಲ್ಲಿ ಅಜಯ್ ರವರು ನಟಿಸಿ ಪ್ರೇಕ್ಷಕರ ಮನ ಗೆಲ್ಲುವುದಕ್ಕೆ ಯಶಸ್ವಿಯಾಗುತ್ತಾರೆ.

ಇನ್ನು ನಟ ಅಜಯ್ ರವರು 2008 ರಲ್ಲಿ ಸಿಟಿಜನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅಜಯ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಾರಥಿ ಬೃಂದಾವನ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಠಾರಿವೀರ ಸುರಸುಂದರಾಂಗಿ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಅಜಯ್ ರವರ ವೈವಾಹಿಕ ಜೀವನದ ಬಗ್ಗೆ ಬರುವುದಾದರೆ 2005 ರಲ್ಲಿ ಇವರು ಮದುವೆಯಾಗುತ್ತಾರೆ. ಇನ್ನು ಅಜಯ್ ರವರು ಮದುವೆಯಾಗಿರುವುದು ಶ್ವೇತಾ ರವುರಿ ಎಂಬುವವರನ್ನು. ಇನ್ನು ಶ್ವೇತಾ ರವರು ಮಿಸಸ್ ಇಂಡಿಯಾ ವರ್ಲ್ಡ್ ವೈಡ್ ಫೈನಲಿಸ್ಟ್ ಗೆ ಆಯ್ಕೆಯಾಗಿದ್ದರು. ಈಗಲೂ ಕೂಡ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಜಯ್ ರವರು ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಅಜಯ್ ರವರ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.