ಎಲ್ಲರ ಸ್ಟೋರಿ ತಿಳಿದಿದ್ದೀರಾ, ಆದರೆ ನಮ್ಮ ಬಿಗ್ ಬಾಸ್ ಸುದೀಪ್ ರಾವವರ ಪ್ರೇಮ ಸ್ಟೋರಿ ಹೇಗಿದೆ ಗೊತ್ತೇ? ಮಲಯಾಳಂ ಕನ್ನಡ ಒಟ್ಟಿಗೆಯಾದದ್ದು ಹೇಗೆ ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಿಚ್ಚ ಸುದೀಪ್ ರವರು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಚಿಕ್ಕಮಕ್ಕಳಿಂದ ವಯಸ್ಸಾದ ವೃದ್ಧರಿಗೂ ಕೂಡ ಕಿಚ್ಚ ಸುದೀಪ್ ರವರ ನಟನೆ ಎಂದರೆ ಬಹಳ ಇಷ್ಟ. ಇನ್ನು ಇಂದಿನ ವಿಚಾರದಲ್ಲಿ ನಾವು ಕಿಚ್ಚ ಸುದೀಪ್ ರವರ ಲವ್ ಸ್ಟೋರಿ ಕುರಿತಂತೆ ಹೇಳಲು ಹೊರಟಿದ್ದೇವೆ. ನಿಮಗೆಲ್ಲ ತಿಳಿದಿರುವಂತೆ ಕಿಚ್ಚ ಸುದೀಪ್ ರವರು ಹುಟ್ಟಿದ್ದು ಶಿವಮೊಗ್ಗದ ಎನ್ಆರ್ ಪುರದಲ್ಲಿ. ಪ್ರಾರ್ಥಮಿಕ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮುಗಿಸಿ ನಂತರ ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ.

ಸುದೀಪ್ ರವರ ತಂದೆ ಸಂಜೀವ್ ರವರು ಹೋಟೆಲ್ ಉದ್ಯಮದಲ್ಲಿ ಸಾಕಷ್ಟು ದೊಡ್ಡ ಹೆಸರನ್ನು ಮಾಡಿದ್ದವರು. ಸುದೀಪ್ ರವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ರವರು ಮೂಲತಃ ಕೇರಳದವರು ಅವರ ಮಾತೃಭಾಷೆ ಮಲಯಾಳಂ. ಇನ್ನು ಇವರಿಬ್ಬರು ಪರಿಚಯವಾಗಿದ್ದು ಕೂಡ ಕಾಮನ್ ಫ್ರೆಂಡ್ ಮೂಲಕ. ಆಗಷ್ಟೇ ಸುದೀಪ್ ರವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಪಡುತ್ತಿದ್ದರು. ಸ್ಪರ್ಶ ಚಿತ್ರದ ನಂತರ ಕನ್ನಡಿಗರಿಗೆ ಸುದೀಪ್ ರವರು ಕೊಂಚಮಟ್ಟಿಗೆ ಪರಿಚಯವಾಗುತ್ತಾರೆ. ನಂತರ ಹುಚ್ಚ ಚಿತ್ರ ಚಿತ್ರ ಸುದೀಪ್ ರವರಿಗೆ ದೊಡ್ಡಮಟ್ಟದಲ್ಲಿ ಯಶಸ್ಸನ್ನು ತಂದುಕೊಡುತ್ತದೆ.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ರವರ ನಡುವಿನ ಪ್ರೇಮ ಕಹಾನಿ ಕುರಿತಂತೆ ಮನೆಯವರಿಗೆಲ್ಲ ತಿಳಿದು ಇಬ್ಬರು ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗುತ್ತಾರೆ. ಇನ್ನು ಎರಡು ವರ್ಷದ ನಂತರ ಇಬ್ಬರಿಗೂ ಕೂಡ ಸಾನ್ವಿ ಎಂಬ ಹೆಣ್ಣುಮಗಳು ಜನಿಸುತ್ತಾರೆ. ಬರೋಬ್ಬರಿ ಐದು ವರ್ಷಗಳ ಕಾಲ ಪ್ರೀತಿಸಿ ಇಬ್ಬರು ಮದುವೆಯಾಗಿರುತ್ತಾರೆ. ಕಿಚ್ಚ ಸುದೀಪ್ ರವರ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರಿಂದ ಕುಟುಂಬಕ್ಕೆ ಸಮಯ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಪ್ರಿಯಸುದೀಪ್ ರವರು ಮೊದಲಿಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಇಬ್ಬರು ಮಗಳಿಗಾಗಿ ಮತ್ತೆ ಒಂದಾಗುತ್ತಾರೆ. ಇದು ಇಡೀ ಕರ್ನಾಟಕವೇ ಮೆಚ್ಚಿಕೊಂಡ ವಿಷಯವಾಗಿತ್ತು. ಇನ್ನು ಈ ಸೂಪರ್ ಜೋಡಿ ಕ್ಯೂಟ್ ಫೋಟೋಸ್ ಅನ್ನು ನೀವು ಲೇಖನಿಯಲ್ಲಿ ನೋಡಬಹುದಾಗಿದೆ.

Get real time updates directly on you device, subscribe now.