ಬಿಡುಗಡೆಯಾದ ಮೊದಲ ದಿನವೇ ದಾಖಲೆ ಕಲೆಕ್ಷನ್ ಮಾಡಿದ ಮದಗಜ, ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡು ಕಲೆಕ್ಷನ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಮದಗಜ ಚಿತ್ರ ಅದ್ದೂರಿಯಾಗಿ ಬಿಡುಗಡೆ ಕಂಡಿದೆ. ರಾಜ್ಯದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಮದಗಜ ಚಿತ್ರಕ್ಕೆ ಜೈಕಾರ ಹಾಕಿದ್ದಾರೆ. ರಾಬರ್ಟ್ ಚಿತ್ರದ ನಂತರ ಉಮಾಪತಿ ಶ್ರೀನಿವಾಸಗೌಡ ನಿರ್ಮಾಣದ ಮದಗಜ ಚಿತ್ರ ಅದೇ ಮಟ್ಟದ ಯಶಸ್ಸನ್ನು ಕಂಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ರೋರಿಂಗ್ ಸ್ಟಾರ್ ಶ್ರೀ ಮುರಳಿ ಉಗ್ರಂ ಚಿತ್ರದ ನಂತರ ಮತ್ತೊಮ್ಮೆ ಮದಗಜ ಚಿತ್ರದಲ್ಲಿ ಅದೇ ಮಟ್ಟದ ಮಾಸ್ ಅವತಾರವನ್ನು ಪ್ರೇಕ್ಷಕರಿಗೆ ತೋರ್ಪಡಿಸಿದರು. ಅಯೋಗ್ಯ ಚಿತ್ರದ ನಂತರ ಮತ್ತೊಮ್ಮೆ ಎಸ್ ಮಹೇಶ್ ಕುಮಾರ್ ರವರು ನಿರ್ದೇಶನದಲ್ಲಿ ತಮ್ಮ ಚಾಕಚಕ್ಯತೆಯನ್ನು ಪ್ರೇಕ್ಷಕರಿಗೆ ತೋರ್ಪಡಿಸಿದ್ದಾರೆ. ಖಳನಾಯಕರಾಗಿ ಜಗಪತಿಬಾಬು ಹಾಗೂ ಗರುಡ ರಾಮ್ ರವರು ತಮ್ಮ ಪಾತ್ರಕ್ಕೆ 100% ನ್ಯಾಯವನ್ನು ಅಚ್ಚುಕಟ್ಟಾಗಿ ಒದಗಿಸಿದ್ದಾರೆ. ಇನ್ನು ನಾಯಕ ನಟಿಯಾಗಿ ಆಶಿಕ ರಂಗನಾಥ್ ರವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಮದಗಜ ಚಿತ್ರದ ಓವರಾಲ್ ರಿವ್ಯೂ ಹೇಳುವುದಾದರೆ ಇದು ಪಕ್ಕಾ ಮಾಸ್ ಅಂಡ್ ಕಮರ್ಷಿಯಲ್ ಚಿತ್ರ. ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಂಬಂಧಗಳ ಮೌಲ್ಯವನ್ನು ಪ್ರೇಕ್ಷಕರಿಗೆ ಪೂರಣದ ಮಧ್ಯದಲ್ಲಿ ಸಿಹಿಯನ್ನು ತುಂಬಿದಂತೆ ನೀಡಿದ್ದಾರೆ. ಒಟ್ಟಾರೆಯಾಗಿ ಕೊಟ್ಟ ಕಾಸಿಗೆ ಪಕ್ಕಾ ಮನರಂಜನೆ ನೀಡುವ ಚಿತ್ರವಾಗಿದೆ. ಇನ್ನು ಇಂದು ಬಿಡುಗಡೆಯಾಗಿರುವ ಮದಗಜ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಬರೋಬ್ಬರಿ ಮೊದಲ ದಿನವೇ ಏಳರಿಂದ ಒಂಬತ್ತು ಕೋಟಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಕೇಳಿ ಬಂದಿದೆ. ನೀವು ಕೂಡ ಮದಗಜ ಚಿತ್ರವನ್ನು ವೀಕ್ಷಿಸಿದ್ದರೆ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.