ಧೀಡೀರ್ ಅಂತ ಪಬ್ಲಿಕ್ ಟಿವಿ ರಂಗಣ್ಣನವರಿಗೆ ಶಾಕ್ ಕೊಟ್ಟ ಡಿಂಪಲ್ ದಿವ್ಯ ಜ್ಯೋತಿ – ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಪಬ್ಲಿಕ್ ಟಿವಿ ಕನ್ನಡದ ಫೇಮಸ್ ನ್ಯೂಸ್ ಚಾನೆಲ್ ಗಳಲ್ಲೊಂದು. ಅಲ್ಲಿನ ಪ್ರಧಾನ ಸಂಪಾದಕ ಹೆಚ್.ಆರ್.ರಂಗನಾಥ್ ನಡೆಸಿಕೊಡುವ ಬಿಗ್ ಬುಲೆಟಿನ್ ಕಾರ್ಯಕ್ರಮವಂತೂ ಅತಿ ಹೆಚ್ಚು ಪ್ರೇಕ್ಷಕರನ್ನು ದಿನೇ ದಿನೇ ಸೆಳೆಯುತ್ತಿದೆ. ಇನ್ನು ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ರಂಗಣ್ಣ ಹಾರಿಸುವ ಹಾಸ್ಯ ಚಟಾಕಿಗಳು, ರೋಷಾವೇಶದ ಮಾತುಗಳು, ಕಾರ್ಯಕ್ರಮದಲ್ಲಿ ತಮ್ಮ ಸಹೋದ್ಯೋಗಿಗಳಾದ ಅರುಣ್ ಬಡಿಗೇರ್ ಹಾಗೂ ಡಿಂಪಲ್ ದಿವ್ಯಜ್ಯೋತಿಯವರಿಗೆ ಕ್ಷಣಾರ್ಧದಲ್ಲಿ ಕೊಡುವ ಕೌಂಟರ್ ಗಳು ಇವೆಲ್ಲವೂ, ಟ್ರೋಲ್ ಪೇಜ್ ಗಳಿಗೆ ಭರ್ಜರಿ ಆಹಾರವಾಗುವುದಂತೂ ಸತ್ಯ.
ಇನ್ನು ಪಬ್ಲಿಕ್ ಟಿವಿಯ ಮಹಿಳಾ ನಿರೂಪಕಿಯಾಗಿರುವ ದಿವ್ಯಜ್ಯೋತಿ ರವರಿಗೂ ಸಹ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಡಿಂಪಲ್ ದಿವ್ಯಜ್ಯೋತಿ ಎಂದೇ ಹೆಸರು ಮಾಡಿದ್ದಾರೆ. ಮೊದಮೊದಲು ಉದಯ ಮ್ಯೂಸಿಕ್ ಚಾನೆಲ್ ನಲ್ಲಿ ನಿರೂಪಕಿಯಾಗಿ ಕೆಲಸ ಆರಂಭಿಸಿದ ದಿವ್ಯಜ್ಯೋತಿ ರವರು ನಂತರದ ದಿನಗಳಲ್ಲಿ ಪಬ್ಲಿಕ್ ಟಿವಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.

ಮೊದಲು ಪಬ್ಲಿಕ್ ಟಿವಿಯಲ್ಲಿ ಸಿನಿಮಾ ಹಾಗೂ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತಿದ್ದ, ದಿವ್ಯಜ್ಯೋತಿ ರವರು ನಂತರ ದಿನಗಳಲ್ಲಿ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಜನಪ್ರಿಯರಾದರು. ರಂಗಣ್ಣರವರ ಜೊತೆ ನಿರೂಪಣೆ ಮಾಡಿದ್ದು ದಿವ್ಯಜ್ಯೋತಿ ರವರಿಗೆ ಒಂದು ರೀತಿಯ ವರವಾಗಿದೆ. ಮೊದಮೊದಲು ಏಪಿಸೋಡ್ ಒಂದಕ್ಕೆ ಮೂರು ಸಾವಿರದಂತೆ ತಿಂಗಳಿಗೆ ತೊಂಬತ್ತು ಸಾವಿರ ಸಂಬಳ ಪಡೆಯುತ್ತಿದ್ದ ದಿವ್ಯಜ್ಯೋತಿ ರವರು ಈಗ ಧೀಢೀರ್ ಎಂದು ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ. ಪ್ರಸ್ತುತ ಏಪಿಸೋಡ್ ಗೆ ಐದರಂತೆ ಒಟ್ಟು ತಿಂಗಳಿಗೆ ಒಂದುವರೆ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆಂದು ಪಬ್ಲಿಕ್ ಟಿವಿಯ ಮೂಲಗಳು ತಿಳಿಸಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.