ಕೇವಲ 161 ಕೋಟಿ ಬಂಡವಾಳ ಹಾಕಿ ನಿರ್ಮಿಸಿದ ಸ್ಕ್ವಿಡ್ ಗೇಮ್ ಇಂದಿನ ಮೂಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ?? ಯಪ್ಪಾ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನೂರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ ಸಿನಿಮಾ ತಯಾರು ಮಾಡಲಾಗುತ್ತದೆ. ಆದರೆ ಅವುಗಳಲ್ಲಿ ಕೆಲವು ಸಿನಿಮಾಗಳು ಹಾಕಿದ ಬಂಡವಾಳ ತೆಗೆಯುವುದರ ಜೊತೆಗೆ ತಕ್ಕ ಮಟ್ಟಿಗೆ ಲಾಭವನ್ನು ಕೂಡ ಮಾಡುತ್ತವೆ. ಆದರೆ ಅನೇಕ ಬಿಗ್ ಬಜೆಟ್ ಸಿನಿಮಾಗಳು ಮಕಾಡೆ ಮಲಗಿ ನೂರಾರು ಕೋಟಿ ನಷ್ಟ ಅನುಭವಿಸುವಂತಾಗುತ್ತದೆ.

ಆದರೆ ಇಲ್ಲೊಂದು ಸೌತ್ ಕೊರಿಯಾ ದೇಶದ ವೆಬ್ ಸೀರೀಸ್ ಕೇವಲ 21.4 ಮಿಲಿಯನ್ ಡಾಲರ್ ಅಂದರೆ ಭಾರತದ ರುಪಾಯಿ ಮೌಲ್ಯ 161 ಕೋಟಿ ರೂ ಬಂಡವಾಳ ಹೂಡಿಕೆ ಮಾಡಿ ಬರೋಬ್ಬರಿ 900 ಮಿಲಿಯನ್ ಡಾಲರ್ ಸರಿ ಸುಮಾರು 6750 ಕೋಟಿ ಗಳಿಕೆ ಮಾಡುವ ಮೂಲಕ ಜಗತ್ತಿನಾದ್ಯಂತ ಭಾರಿ ಗಮನ ಸೆಳೆದಿದೆ. ಕಳೆದ ಎರಡು ವರ್ಷಗಳಿಂದ ಜಗತ್ತಿನೆಲ್ಲೆಡೆ ಕೊರೋನ ವೈರಸ್ ಆರ್ಭಟಕ್ಕೆ ಎಲ್ಲೆಡೆ ಆತಂಕದ ವಾತಾವರಣ ಜೊತೆಗೆ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದವು಼.
ಅಂತೆಯೇ ಸಿನಿಮಾ ಜಗತ್ತು ಕೂಡ ಹೇಳ ತೀರದಂತಹ ಅಪಾರ ನಷ್ಟವನ್ನು ಅನುಭವಿಸ ಬೇಕಾಯಿತು.ಕೋವಿಡ್ ಲಾಕ್ ಡೌನ್ ಪರಿಣಾಮ ಚಿತ್ರ ಮಂದಿರಗಳು ಸಂಪೂರ್ಣ ಸ್ಥಗಿತಗೊಂಡಾಗ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯ ಹೊಸ್ತಿಲಲ್ಲಿದ್ದ ಸಿನಿಮಾಗಳಿಗೆ ಆಶಾದಾಯಕವಾಗಿ ಕಂಡದ್ದು ಅಮೇಜಾ಼ನ್ ನೆಟ್ ಫ್ಲೆಕ್ಸ್ ಅಂತಹ ಈ ಓಟಿಟಿ ಪ್ಲಾಟ್ ಫಾರ್ಮ್ ಗಳು. ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಕೇವಲ ಸಿನಿಮಾಗಳು ಮಾತ್ರ ಅಲ್ಲ ವೆಬ್ ಸೀರೀಸ್ ಕೂಡ ರಿಲೀಸ್ ಆದವು. ಅಂತಹ ವೆಬ್ ಸೀರೀಸ್ ಗಳಲ್ಲಿ ಸೌತ್ ಕೊರಿಯಾ ದೇಶದ ಸ್ಕ್ವಿಡ್ ಗೇಮ್ ಎಂಬ ವೆಬ್ ಸೀರೀಸ್ ಕೂಡ ಒಂದು.
ಜೀವನದಲ್ಲಿ ವಿವಿಧ ಕಾರಣಗಳಿಗೆ ಸೋತು ಸುಣ್ಣವಾಗುವ ವ್ಯಕ್ತಿಗೆ ಇದ್ದಕಿದ್ದಂತೆ ಬದುಕಿನಲ್ಲಿ ಅಚ್ಚರಿಯ ತಿರುವುವೊಂದು ಗತಿಸಿದಾಗ ಯಾವೆಲ್ಲಾ ಪರಿಣಾಮ ಎದುರಾಗುತ್ತದೆ ಎಂಬ ಕಥಾಹಂದರ ಹೊಂದಿರುವ ಈ ಸ್ಕ್ವಿಡ್ ಗೇಮ್ ವೆಬ್ ಸೀರೀಸ್ ಜಗತ್ತಿನಾದ್ಯಂತ ಅಪಾರ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದೆ. ನೆಟ್ ಫ್ಲೆಕ್ಸ್ ನಲ್ಲಿ ಈ ವೆಬ್ ಸೀರಿಸ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಒಂಬತ್ತು ಎಪಿಸೋಡ್ ಗಳನ್ನು ಹೊಂದಿರುವ ಸ್ಕ್ವಿಡ್ ಗೇಮ್ ವೆಬ್ ಸೀರಿಸ್ ಇಡೀ ಜಗತ್ತಿನಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದೆ.ಈ ವೆಬ್ ಸೀರಿಸ್ ಮತ್ತೊಂದು ದೃಷ್ಟಿಕೋನದ ಕಥಾ ಹಂದರ ಅಂದರೆ ಈ ಸ್ಕ್ವಿಡ್ ಗೇಮ್ ಆಟ ಆಡಿಸಿ ಸೋತವರನ್ನು ಸಾಯಿಸಿ, ಗೆದ್ದವರಿಗೆ ಕೋಟ್ಯಾಂತರ ರೂ ಬಹುಮಾನ ನೀಡುವ ಕಥಾಹಂದರವನ್ನು ಕಾಣಬಹುದ್ದಾಗಿದೆ.
ಭಾರತ ದೇಶದಲ್ಲಿ ನೆಟ್ ಫ್ಲೆಕ್ಸ್ ಓಟಿಟಿ ಪ್ಲಾಟ್ ಫಾರ್ಮ್ 800 ರೂ.ಗಳನ್ನು ಪಾವತಿ ಮಾಡಿ ತಮಗೆ ಇಷ್ಟ ಬಂದಂತಹ ವೆಬ್ ಸೀರಿಸ್ ಮತ್ತು ಸಿನಿಮಾಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇನ್ನು ಈ ಸ್ಕ್ವಿಡ್ ಗೇಮ್ ವೆಬ್ ಸೀರಿಸ್ ಸೆಪ್ಟೆಂಬರ್ 17 ರಂದು ರಿಲೀಸ್ ಆಗಿದ್ದು,ಕೊರಿಯನ್ ,ಇಂಗ್ಲೀಷ್, ಉರ್ದು ಭಾಷೆಯಲ್ಲಿ ಬಿಡುಗಡೆ ಆಗಿದೆ.