ನಿಮ್ಮ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿದೆಯೇ?? ಹಾಗಿದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ. ಏನು ಮಾಡ್ಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಗಂಡಾಗಲಿ, ಹಣ್ಣಾಗಲಿ ಸಾಕಷ್ಟು ಬದಲಾವಣೆಗಳನ್ನು ಜೀವನದಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಗಂಡ ಹೆಂಡತಿ ಒಟ್ಟಾಗಿ ಜೀವನ ಮಾಡಬೇಕೆಂದರೆ, ಸಂತೋಷವಾಗಿರಬೇಕೆಂದರೆ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಜೀವನ ನಡೆಸಬೇಕಾಗುತ್ತದೆ. ನಮ್ಮ ವೈವಾಹಿಕ ಜೀವನ ಎಷ್ಟು ಸಂತೋಷದಿಂದ ಕೂಡಿರುತ್ತದೆಯೋ ಅಷ್ಟು ಯಶಸ್ಸನ್ನೂ ಕೂಡ ಕಾಣಬಹುದು. ಹಾಗೆಯೇ ಮಾನಸಿಕ ನೆಮ್ಮದಿಯೂ ಕೂಡ ಸಿಗುತ್ತದೆ.

ಹಾಗಾದರೆ ವೈವಾಹಿಕ ಜೀವನದಲ್ಲಿ ಸಂತೋಷವಾದರೂ ಹೇಗೆ ಬರಬೇಕು? ಅದಕ್ಕಾಗಿ ಚಾಣಾಕ್ಯ ಕೆಲವು ಸೂತ್ರಗಳನ್ನು ಹೇಳುತ್ತಾನೆ. ಆ ಪ್ರಕಾರ ನಡೆದುಕೊಂಡಿದ್ದೇ ಆದರೆ ಜೀವನದಲ್ಲಿ ಸದಾ ಸುಖ ನೆಮ್ಮದಿ ಇರುತ್ತದೆ. ಹಾಗಾದರೆ ಆ ವಿಷಯಗಳು ಯಾವವು ಗೊತ್ತಾ? ಮೊದಲನೆಯದಾಗಿ ಪ್ರೀತಿ. ಪ್ರೀತಿ ಇರುವ ಕಡೆ ನೆಮ್ಮದಿ ಇರುತ್ತದೆ. ಪ್ರೀತಿ ವ್ಯಕ್ತಿಯನ್ನು ಉತ್ತಮಗೊಳಿಸುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಇದ್ದರೆ ಯಾವ ಸಮಸ್ಯೆಯನ್ನೂ ಕೂಡ ಒಟ್ಟಾಗಿ ನಿವಾರಿಸಿಕೊಳ್ಳಬಹುದು.
ಇನ್ನು ಜೀವನದಲ್ಲಿ ನಂಬಿಕೆ ಅತೀ ಅಗತ್ಯ. ಜೀವನದಲ್ಲಿ ಯಾವುದೇ ಸಂಬಂಧ ನಿಂತಿರುವುದೇ ನಂಬಿಕೆ ಮೇಲೆ. ಹಾಗಾಗಿ ವೈವಾಹಿಕ ಜೀವನದಲ್ಲಿ ನಂಬಿಕೆ ಇಲ್ಲದಿದ್ದರೆ ಆ ಸಂಬಂಧ ದುರ್ಬಲಗೊಳ್ಳುತ್ತದೆ. ನಂಬಿಕೆ ಇಬ್ಬರಿಗೂ ಬೇಕು. ಒಬ್ಬರನ್ನು ಒಬ್ಬರು ನಂಬುವುದನ್ನು ಬಿಡಬೇಡಿ. ಇದರಿಂದ ಹಲವು ಸಮಸ್ಯೆಗಳನ್ನೂ ಕೂಡ ನಿವಾರಿಸಿಕೊಳ್ಳಬಹುದು.
ವೈವಾಹಿಕ ಜೀವನದಲ್ಲಿ ಪರಸ್ವರ ಮಾಧುರ್ಯತೆ ಇರುವುದು ಕೂಡ ಮುಖ್ಯ. ಹಾಗಿದ್ದಾಗ ಮಾತ್ರ ಜೀವನ ಸುಖಮಯವಾಗಿರುತ್ತದೆ. ಮಾಧುರ್ಯತೆ ಇದ್ದರೆ ಪರಸ್ವರ ವಿಚಾರ ವಿನಿಮಯ ಮಾಡಿಕೊಳ್ಳಲು, ಸಂವಹನ ನಡೆಸಲು ಸುಲಭವಾಗುತ್ತದೆ. ಇನ್ನು ಸಮರ್ಪಣಾ ಭಾವ. ಒಬ್ಬರಿಗೆ ಒಬ್ಬರು ಕಾಯಾ ವಾಚಾ ಮನಸಾ ಸಮರ್ಪಿಸಿಕೊಂಡಲ್ಲಿ ಪರಸ್ವರ ಪ್ರೀತಿ ಹೆಚ್ಚಾಗುತ್ತದೆ, ನಂಬಿಕೆ ಬರುತ್ತದೆ, ಮಾಧುರ್ಯ ಮೊಳಕೆಯೊಡೆಯುತ್ತದೆ. ಇನ್ನು ಪರಸ್ವರ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು. ಒಬ್ಬರಿಗೆ ಇನ್ನೊಬ್ಬರು ಶಕ್ತಿಯಾಗಬೇಕು. ಇಬ್ಬರೂ ಒಟ್ಟಾಗಿ ಸೇರಿದರೆ ಮಾತ್ರ ಯಾವ ಸವಾಲನ್ನೂ ಕೂಡ ಎದುರಿಸಬಹುದು. ಈ ಐದು ವಿಷಯ ನಿಮ್ಮಲ್ಲಿದ್ದರೆ ಇನ್ನೊಬ್ಬರೂ ಮೆಚ್ಚಿಕೊಳ್ಳುವಂಥ ಸುಖಜೀವನ ನಿಮ್ಮದಾಗುತ್ತದೆ.