ಇಂದಿಗೂ ಕೂಡ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ಸುಧಾರಾಣಿ, ನಟಿ ಸುಧಾರಾಣಿ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ. ಏನು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಟಿ ಸುಧಾರಾಣಿ ಅವರು ಕನ್ನಡ ಚಿತ್ರರಂಗದ ಹಾಟ್ರಿಕ್ ಹೀರೋಯಿನ್ ಎಂದು ಖ್ಯಾತರಾದವರು. ತಮ್ಮ ನಟನೆಯ ಮೂಲಕವೇ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದವರು. ಇನ್ನು ಸುಧಾರಾಣಿ ಅವರ ವಯಸ್ಸು 48 ಆದರೂ ಕೂಡ ಇಪ್ಪತ್ತರ ಹರೆಯದ ಯುವತಿಯಂತೆ ಕಾಣುತ್ತಾರೆ. ಇಂದಿನ ಯುವ ನಟಿಯರನ್ನು ಕೂಡ ನಾಚಿಸುವಂತೆ ಲವಲವಿಕೆಯಿಂದ ನಟಿಸುತ್ತಾರೆ. ಇಂದಿಗೂ ಕೂಡ ಕನ್ನಡಚಿತ್ರರಂಗದಲ್ಲಿ ಬೇಡಿಕೆಯನ್ನು ಹೊಂದಿರುವಂತಹ ನಟಿ ಸುಧಾರಾಣಿ ಅವರೆಂದರೆ ಕಂಡಿತವಾಗಿ ತಪ್ಪಾಗಲಾರದು.

ಯಾಕೆಂದರೆ ಈಗಲೂ ಕೂಡ ಅವರ ನಟನೆಯನ್ನು ಕನ್ನಡಿಗರು ಸಾಕಷ್ಟು ಇಷ್ಟಪಡುತ್ತಾರೆ. ಈ ವಯಸ್ಸಿನಲ್ಲಿ ಕೂಡ ನಾಯಕ ನಟಿಯರಷ್ಟೇ ಬೇಡಿಕೆಯನ್ನು ಹೊಂದಿರುವ ಹಾಗೂ ಜನಪ್ರಿಯತೆಯನ್ನು ಪಡೆದಿರುವ ನಟಿಯೆಂದರೆ ಸುಧಾರಾಣಿಯವರು. ಚಿಕ್ಕವಯಸ್ಸಿನಿಂದಲೇ ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಹಾಗು ಜಾಹಿರಾತುಗಳಲ್ಲಿ ನಟಿಸಿರುವ ಪ್ರತಿಭಾವಂತೆ ಸುಧಾರಾಣಿಯವರು. ಇನ್ನು ಅಣ್ಣಾವ್ರ ಹಿರಿಯ ಮಗ ಶಿವರಾಜ್ ಕುಮಾರ್ ರವರನ್ನು ಆನಂದ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡುವಾಗ ನಾಯಕಿಯಾಗಿ ಆಯ್ಕೆಯಾಗಿದ್ದು ಇದೇ ಸುಧಾರಾಣಿ ಯವರು.

ಇನ್ನು ಚಿತ್ರರಂಗದಲ್ಲಿ 30 ವರ್ಷಗಳ ಕಾಲ ಸುದೀರ್ಘವಾಗಿ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ನಟಿ ಸುಧಾರಾಣಿ ಅವರಿಗೆ ಇಂಡಿಯನ್ ಎಂಪೈರ್ ಯೂನಿವರ್ಸಿಟಿ ಆರ್ಟ್ಸ್ ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ಇನ್ನು ಈ ಸಂತೋಷದ ಸುದ್ದಿಯನ್ನು ನಟಿ ಸುಧಾರಾಣಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ನಟಿ ಸುಧಾರಾಣಿ ಅವರು ನಟನೆಯ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಾಗಿ ಗೌರವ ಡಾಕ್ಟರೇಟ್ ಪಡೆದಿರುವ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.