ಸಂಪ್ರದಾಯ ಮುಗಿಸಿ ಬರಲು ತವರು ಮನೆಗೆ ಹೊರಟ ಅಶ್ವಿನಿ, ಮಾಧ್ಯಮದವರ ಮುಂದೆ ಹೇಳಿದ್ದೇನು ಗೊತ್ತೇ?? ದೊಡ್ಮನೆ ಸೊಸೆಯನ್ನು ನೋಡಲಾಗುತ್ತಿಲ್ಲ ಎಂದ ಫ್ಯಾನ್ಸ್.

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ನಾವು ಅಕ್ಟೋಬರ್ 29ರಂದು ಕಳೆದುಕೊಂಡ ಮೇಲೆ ಇಂದಿನವರಿಗೂ ಕೂಡ ಅದು ಕೂಡ ಕಿಂಚಿತ್ತು ಕಡಿಮೆಯಾಗಿಲ್ಲ. ಅಭಿಮಾನಿಗಳಾದ ನಮಗೆ ಅಷ್ಟೊಂದು ಅವರ ಮರಣದ ಸುದ್ದಿ ದುಃಖವನ್ನು ನೀಡುತ್ತದೆ ಎಂದರೆ ಇನ್ನೂ ಅವರ ಪತ್ನಿ ಆಗಿರುವ ಅಶ್ವಿನಿ ಹಾಗೂ ಮಕ್ಕಳಿಗೆ ಮತ್ತು ಸಹೋದರ ಸಹೋದರಿಯರಿಗೆ ಹೇಗಾಗಿರಬೇಡ ಎಂಬುದನ್ನು ಒಮ್ಮೆ ಯೋಚಿಸಿ.

ತಾವು ಬದುಕಿದ್ದಷ್ಟು ದಿನವೂ ಕೂಡ ಪುನೀತ್ ರಾಜಕುಮಾರ್ ರವರು ಯಾರೊಬ್ಬರ ಬಗ್ಗೆಯೂ ಕೂಡ ಕೇಡನ್ನು ಬಯಸಿದವರಲ್ಲ. ಆದರೂ ಕೂಡ ಅಂತಹ ಬಂಗಾರದ ಮನಸ್ಸಿನ ಮನುಷ್ಯನನ್ನು ಆ ದೇವರು ಬಹಳ ಬೇಗನೆ ಕರೆದುಕೊಂಡು ಹೋದ ಎಂದನಿಸುತ್ತದೆ. ಪುನೀತ್ ರಾಜಕುಮಾರ್ ಅವರ ಸಿನಿಮಾಗಳ ಮೂಲಕ ಜನರಿಗೆ ಮನರಂಜನೆ ಹಾಗೂ ಸಾಮಾಜಿಕ ಸಂದೇಶವನ್ನು ಎಷ್ಟು ಮಟ್ಟಕ್ಕೆ ನೀಡುತ್ತಿದ್ದರೋ ಅದಕ್ಕಿಂತ ದುಪ್ಪಟ್ಟು ಅವರು ಸಾಮಾಜಿಕ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದ್ದರು. ಇನ್ನು ಈಗಾಗಲೇ ಬಹುತೇಕ ಎಲ್ಲಾ ಕಾರ್ಯಗಳು ಕೂಡ ಮುಗಿದಿದ್ದು ಅಶ್ವಿನಿ ಅವರು ತವರುಮನೆಗೆ ಹೊರಟಿದ್ದಾರೆ.

ಹೌದು ಗೆಳೆಯರೇ ಸಂಪ್ರದಾಯದ ಪ್ರಕಾರ ಗಂಡನನ್ನು ಕಳೆದುಕೊಂಡ ನಂತರ ಹೆಣ್ಣು ಮಗಳು ತವರು ಮನೆಗೆ ಹೋಗಿ ಬರಬೇಕಾಗಿತ್ತು ಸಂಪ್ರದಾಯದಲ್ಲಿ ಕಂಡುಬರುತ್ತದೆ. ಈ ಸಮಯದಲ್ಲಿ ಅವರು ಹೇಳಿರುವ ಮಾತು ಎಲ್ಲರ ಕಣ್ಣಲ್ಲಿ ಕೂಡ ನೀರು ತರಿಸುವಂತಿದೆ. ತವರು ಮನೆಗೆ ಕರೆದುಕೊಂಡು ಹೋಗಲು ಅಶ್ವಿನಿ ಪುನೀತ್ ರಾಜಕುಮಾರ್ ರವರ ತಮ್ಮ ವಿನಯ್ ಅವರು ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ತವರುಮನೆಗೆ ಹೋಗಬೇಕಾದರೆ ಅಶ್ವಿನಿ ಅವರು ಕಣ್ಣೀರು ಹಾಕಿ ಭಾವುಕರಾಗಿದ್ದಾರೆ. ತವರು ಮನೆಗೆ ಈ ಪರಿಸ್ಥಿತಿಯಲ್ಲಿ ಹೋಗುತ್ತೇನೆ ಎಂದು ನಾನು ಎಂದು ಕೂಡ ಭಾವಿಸಿರಲಿಲ್ಲ ಇಂತಹ ಕಷ್ಟ ಯಾರಿಗೂ ಕೂಡ ಬರದಿರಲಿ ಎಂಬುದಾಗಿ ಜೀವನದ ಕಟು ಸತ್ಯವನ್ನು ಭಾವುಕರಾಗಿ ನುಡಿದಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರ ಎಲ್ಲಾ ಜವಾಬ್ದಾರಿ ಹಾಗೂ ವ್ಯವಹಾರಗಳನ್ನು ತಾನೆ ಮುಂದುವರಿಸಿಕೊಂಡು ಹೋಗುವುದು ಕೂಡ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಹೇಳಿಕೊಂಡಿದ್ದಾರೆ.

Get real time updates directly on you device, subscribe now.