ತಿಂಗಳ ಪೂಜೆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಸಮಾಧಿಯ ಬಳಿ ನಡೆದ ಪವಾಡ ನೋಡಿ ಎಲ್ಲರೂ ಆಶ್ಚರ್ಯ. ಸಿನೆಮಾದಂತೆ ಇಲ್ಲೂ ಕೂಡ ನಡೆದ್ದದೇನು ಗೊತ್ತೆ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಬರೋಬ್ಬರಿ ಒಂದು ಮಾಸ ಅಂದರೆ ತಿಂಗಳು ಕಳೆದು ಹೋಗಿದೆ. ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇಂದಿಗೂ ಕೂಡ ನಮ್ಮ ಮನಸ್ಸಿನಲ್ಲಿ ಅವರು ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಅವರನ್ನು ಪ್ರೀತಿಸುತ್ತಿದ್ದರು.

ಅವರ ನಿಷ್ಕಲ್ಮಶ ನಗು ಇಂದಿಗೂ ಕೂಡ ಎಲ್ಲರ ಮನಸ್ಸಿನಲ್ಲಿ ಅವರ ನೆನಪನ್ನು ಕಾಡುವಂತೆ ಮಾಡುತ್ತಿದೆ. ಪುನೀತ್ ರಾಜಕುಮಾರ್ ರವರು ಮಾಡಿರುವ ಸಾಮಾಜಿಕ ಕೆಲಸಗಳಿಂದ ಹಾಗೂ ಅವರು ಸಮಾಜದಲ್ಲಿ ಹಾಡಿರುವ ಉತ್ತಮ ಸಂದೇಶಗಳಿಂದ ಇನ್ನೂ ಕೂಡ ಎಲ್ಲರ ಹೃದಯಾಂತರಾಳದಲ್ಲಿ ಅವರು ಜೀವಂತವಾಗಿದ್ದಾರೆ. ಇನ್ನು ನೆನ್ನೆ ತಿಂಗಳ ಪೂಜೆಯನ್ನು ನೆರವೇರಿಸುವ ಸಲುವಾಗಿ ದೊಡ್ಡಮನೆ ಕುಟುಂಬಸ್ಥರು ಕೂಡ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಅವರ ಸಮಾಧಿ ಬಳಿಗೆ ಹೋಗಿದ್ದರು. ಇನ್ನು ನಿನ್ನೆಯಷ್ಟೇ ಸೆಕ್ಯೂರಿಟಿ ಗಾರ್ಡ್ ಗಳ ಹಾಗೂ ಅಭಿಮಾನಿಗಳ ಎದುರುಗಡೆ ಕಂಠೀರವ ಸ್ಟುಡಿಯೋದಲ್ಲಿ ಒಂದು ಪವಾಡ ನಡೆದಿದೆ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಪವಾಡದ ಕುರಿತಂತೆ ನಾವು ನಿಮಗೆ ಹೇಳಲಿದ್ದೇವೆ. ಅದೇನೆಂದರೆ ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಹೆಗಲ ಮೇಲೆ ಬಂದು ಕುಳಿತುಕೊಳ್ಳುವ ಪಾರಿವಾಳದಂತೆ ಪುನೀತ್ ರಾಜಕುಮಾರ್ ಅವರ ಸಮಾಧಿಯ ಮೇಲೆ ಕೂಡ ಒಂದು ಪಾರಿವಾಳ ಬಂದು ಕೂತುಕೊಂಡು ಅವರ ಫೋಟೋವನ್ನು ಕುಟುಕುತ್ತಿಂತೆ. ಇದರ ಕುರಿತಂತೆ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಹಾಗೂ ಅಭಿಮಾನಿಗಳೆಲ್ಲರೂ ಕೂಡ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.