ಅಪ್ಪು ಅಂತಿಮ ದರ್ಶನಕ್ಕೆ ಬರದೇ ಇದೀಗ ತನ್ನ ಲಾಭಕ್ಕಾಗಿ ದೊಡ್ಮನೆ ಬಾಗಿಲಿಗೆ ಬಂದರೇ ಈ ಮಹಾಶಯ, ಅಭಿಮಾನಿಗಳು ಫುಲ್ ರೊಚ್ಚಿಗೆದ್ದದ್ದು ಯಾಕೆ ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಾಗಲೆಲ್ಲ ಪ್ರತಿಯೊಬ್ಬರ ಕಣ್ಣಿನಲ್ಲಿ ಭಾವನಾತ್ಮಕವಾಗಿ ಕಣ್ಣೀರು ಗ್ಯಾರಂಟಿ. ಅವರನ್ನು ಕಳೆದುಕೊಂಡು ಒಂದು ತಿಂಗಳು ಕಳೆಯುತ್ತ ಬಂದರೂ ಕೂಡ ನಮ್ಮ ಮನೆ ಮಗನೇ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂಬ ಅನುಭವ ಇಂದಿಗೂ ಕೂಡ ಕಾಡುತ್ತಿದೆ.

ಇನ್ನು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಾಗ ಭಾರತೀಯ ಚಿತ್ರರಂಗದ ಹಾಗೂ ರಾಜಕೀಯ ಕ್ಷೇತ್ರದ ಮತ್ತು ಇನ್ನೂ ಹಲವಾರು ಕ್ಷೇತ್ರಗಳ ಗಣ್ಯಾತಿಗಣ್ಯರು ಅವರ ಕೊನೆಯ ದರ್ಶನವನ್ನು ನೋಡಲು ಬಂದಿದ್ದರು. ಇನ್ನು ಕೆಲವರು ಅವರ 11ನೇ ಹಾಗೂ 12ನೇ ದಿನದ ಕಾರ್ಯಕ್ರಮದಲ್ಲಿ ಕೂಡ ಬಂದಿದ್ದರು ಇಷ್ಟು ಮಾತ್ರವಲ್ಲದೆ ಇತ್ತೀಚೆಗಷ್ಟೆ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಾಯೋಜಕತ್ವದಲ್ಲಿ ಪುನೀತ್ ನಮನ ಕಾರ್ಯಕ್ರಮದಲ್ಲಿ ಕೂಡ ಹಲವಾರು ಮಂದಿ ಸೆಲೆಬ್ರಿಟಿಗಳು ಆಗಮಿಸಿದ್ದರು. ಆದರೆ ಇಲ್ಲೊಬ್ಬ ಪುಣ್ಯಾತ್ಮ ಅಪ್ಪು ಅವರನ್ನು ಕಳೆದುಕೊಂಡ ಒಂದು ತಿಂಗಳ ನಂತರ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಬಂದಿದ್ದಾರೆ.

ಅದು ಕೂಡ ಅವರು ಬೆಂಗಳೂರಿಗೆ ಬಂದಿದ್ದು ಬರೀ ಇದೇ ಕೆಲಸಕ್ಕಾಗಿ ಮಾತ್ರವಲ್ಲ. ತಮ್ಮ ಕೆಲಸವನ್ನು ಮುಗಿಸಿಕೊಂಡು ನಂತರ ಇಲ್ಲಿಗೆ ಬಂದು ಮಾತನಾಡಿಸಿಕೊಂಡು ಹೋಗಿರುವುದು ಈಗಾಗಲೇ ಹಲವಾರು ಜನರು ಅವರನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾಡಿದೆ. ಆ ಮಹಾಶಯ ಇನ್ಯಾರು ಅಲ್ಲ ಭಾರತೀಯ ಚಿತ್ರರಂಗದ ಶ್ರೇಷ್ಠ ನಿರ್ದೇಶಕ ಎಂದು ಖ್ಯಾತರಾಗಿರುವ ರಾಜಮೌಳಿ ಅವರು. ಹೌದು ಮೂಲತಹ ಕರ್ನಾಟಕದವರೇ ಆಗಿರುವ ರಾಜಮೌಳಿಯವರು ಕನ್ನಡದ ಕಣ್ಮಣಿ ಎಂದು ಬಿಂಬಿತವಾಗಿರುವ ಪುನೀತ್ ರಾಜಕುಮಾರ್ ರವರ ಅಂತಿಮ ದರ್ಶನಕ್ಕೆ ಕೂಡ ಆಗಮಿಸಿರಲಿಲ್ಲ 11ನೇ ದಿನದ ಕಾರ್ಯಕ್ರಮ ಕೂಡ ಬಂದಿರಲಿಲ್ಲ. ಆದರೆ ಈಗ ಬೆಂಗಳೂರಿನಲ್ಲಿ ನಡೆದಿರುವ ಆರ್ ಆರ್ ಆರ್ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕಾಗಿ ಬಂದು ಅಲ್ಲಿಂದ ಅಶ್ವಿನಿಯವರ ಮನೆಗೆ ಭೇಟಿ ನೀಡಿರುವ ಸ್ವಾರ್ಥದ ಭೇಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

Get real time updates directly on you device, subscribe now.