ಕನ್ನಡ ಚಿತ್ರರಂಗವನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡಿರುವ ಈ ಸಿನೆಮಾಗಳನ್ನು ಪರಭಾಷಿಗರು ಕೂಡ ನೋಡಲೇಬೇಕು, ಯಾವ್ಯಾವು ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗವನ್ನು ಕೆಜಿಎಫ್ ನಂತರದ ಭಾಗದಲ್ಲಿ ಸಾಕಷ್ಟು ಉನ್ನತ ಹಂತವನ್ನು ಪಡೆದಿದೆ ಎಂದು ಹೇಳಬಹುದಾಗಿದೆ. ಮೊದಲಿಗೆ ಕನ್ನಡ ಚಿತ್ರರಂಗವನ್ನು ಬೇರೆ ಭಾಷಿಗರು ಕೊನೆಯ ಆಯ್ಕೆ ಯನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಕೆಜಿಎಫ್ ಚಿತ್ರದ ನಂತರ ಕನ್ನಡ ಚಿತ್ರರಂಗದ ಜನಪ್ರಿಯತೆ ದೇಶದಾದ್ಯಂತ ಹರಡಿದೆ ಎಂದರೆ ತಪ್ಪಾಗಲಾರದು. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಪರಭಾಷಿಗರು ಕೂಡ ಇಷ್ಟಪಡುವ ಹಾಗೂ ಪರಭಾಷಿಗರು ಕೂಡ ನೋಡಲೇಬೇಕಾದಂತಹ ಕನ್ನಡ ಚಿತ್ರಗಳ ಕುರಿತಂತೆ. ಈ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ.

ದಿಯಾ ಖುಷಿ ರವಿ ಹಾಗೂ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ವಿಫಲವಾಗಿತ್ತು. ಆದರೆ ಅದೇ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸನ್ನು ಪಡೆದಿತ್ತು. ಇನ್ನು ಈ ಚಿತ್ರ ಈಗಾಗಲೇ ತಮಿಳು ತೆಲುಗು ಹಿಂದಿ ಭಾಷೆಗಳಲ್ಲಿ ಕೂಡ ರಿಮೇಕ್ ಆಗುವ ಪ್ರಯತ್ನಗಳು ನಡೆಯುತ್ತಿವೆ. ಪರಭಾಷಿಗರು ಕೂಡ ನೋಡಲೇಬೇಕಾದ ಚಿತ್ರಗಳಲ್ಲಿ ಇದು ಕೂಡ ಒಂದು.

ಲೂಸಿಯಾ ಪವನ್ ಕುಮಾರ್ ಎಂಬ ಚಾಣಾಕ್ಷ ನಿರ್ದೇಶಕನ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಸತೀಶ್ ನೀನಾಸಂ ರವರು ನಾಯಕನಟನಾಗಿ ಹಾಗೂ ಶೃತಿಹರಿಹರನ್ ನಾಯಕ ನಟಿಯಾಗಿ ನಟಿಸಿದ್ದರು. ವಿಚಿತ್ರ ಕೂಡ ಕನ್ನಡ ಚಿತ್ರರಂಗದ ಹೊಸ ಪ್ರಯತ್ನಗಳಲ್ಲಿ ಒಂದಾಗಿದ್ದು ಬೆಸ್ಟ್ ಸೈಕಲಾಜಿಕಲ್ ಥ್ರಿಲ್ಲರ್ ಎಂಬುದಾಗಿ ಹೇಳಬಹುದಾಗಿದೆ. ಯಾವ ಹಾಲಿವುಡ್ ಫಿಲಂ ಗಳಿಗೂ ಕಡಿಮೆ ಇಲ್ಲದಂತೆ ಮೂಡಿಬಂದಿರುವ ಈ ಚಿತ್ರವನ್ನು ಕೂಡ ಪರಭಾಷಿಕರು ನೋಡಬಹುದಾಗಿದೆ.

ಮುಂಗಾರುಮಳೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾಗಾಂಧಿ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಈ ಚಿತ್ರ ಕನ್ನಡ ಚಿತ್ರರಂಗದ ಮೊದಲ 50 ಕೋಟಿ ಗಳಿಕೆ ಕಂಡಂತಹ ಚಿತ್ರ. ಕನ್ನಡ ಚಿತ್ರರಂಗದ ಬೆಸ್ಟ್ ರೋಮ್ಯಾಂಟಿಕ್ ಚಿತ್ರಗಳಲ್ಲಿ ಇದು ಅಗ್ರಸ್ಥಾನವನ್ನು ಕಾಣುತ್ತದೆ. ಮಠ ಗುರುದತ್ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ಪ್ರಧಾನವಾದ ಚಿತ್ರಗಳಲ್ಲಿ ಮಠ ಚಿತ್ರ ಕಂಡಿತವಾಗಿ ಅಗ್ರಪಂಕ್ತಿಯಲ್ಲಿ ಕಾಣಸಿಗುತ್ತದೆ.

ರಂಗಿತರಂಗ ಅನುಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ ಎಂಬ ಇಬ್ಬರು ಅದ್ಭುತ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಅಂತಹ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇನ್ನು ಈ ಚಿತ್ರ ಆಸ್ಕರ್ ಗೆ ಕೂಡ ನಾಮಿನೇಟ್ ಆಗಿತ್ತು. ಇದು ಕನ್ನಡಿಗರೆಲ್ಲರಿಗೂ ಹೆಮ್ಮೆಪಡಬೇಕಾದ ಅಂತ ವಿಷಯ.

ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ನಲ್ಲಿ ಮತ್ತು ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಪಕ್ಕಾ ಎಂಟರ್ಟೇನರ್. ನಾಲ್ಕು ಕೋಟಿ ಬಜೆಟ್ ನಲ್ಲಿ ನಿರ್ಮಾಣ ವಾದಂತಹ ಈ ಚಿತ್ರ ನಲವತ್ತು ಕೋಟಿಗೂ ಅಧಿಕ ಬಾಕ್ಸಾಫೀಸ್ ಗಳಿಕೆ ಕಂಡಿತ್ತು. ಇದರ ಒಂದೇ ಒಂದು ದೃಶ್ಯವೂ ಕೂಡ ಬೋರ್ ಎನಿಸದ ಹಾಗೆ ಅಷ್ಟೊಂದು ಇಂಟರೆಸ್ಟಿಂಗ್ ಆಗಿ ಮೂಡಿಬಂದಿದೆ.

ಓಂ ಉಪ್ಪಿ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಂತಹ ಈ ಚಿತ್ರ ಖಂಡಿತವಾಗಿಯೂ ಕನ್ನಡ ಚಿತ್ರರಂಗದ ಮಾಸ್ ಸಿನಿಮಾಗಳಿಗೆ ಭಗವದ್ಗೀತೆ ಎಂದು ಹೇಳಬಹುದಾಗಿದೆ. ಹಲವಾರು ಭಾಷೆಗಳಲ್ಲಿ ರಿಮೇಕ್ ಆದರೂ ಕೂಡ ಕನ್ನಡದ ಸ್ವಂತಿಕೆಯನ್ನು ಎಲ್ಲು ಕೂಡ ಪೂರೈಸಲು ಸಾಧ್ಯವಾಗಲಿಲ್ಲ. ಇಂದಿಗೂ ಕೂಡ ಈ ಚಿತ್ರವನ್ನು all-time ಇಂಡಸ್ಟ್ರಿ ಹಿಟ್ ಚಿತ್ರಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

Get real time updates directly on you device, subscribe now.