ಬಹು ನಿರೀಕ್ಷಿತ ಬಿಗ್ ಬಾಸ್ ಶೋ ಗೆ ಬದಲಾಗುತ್ತಿದ್ದಾರೆ ನಿರೂಪಕರು, ಮೊದಲ ಬಾರಿಗೆ ಮಹಿಳಾ ನಿರೂಪಕಿ. ಯಾರು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಎಲ್ಲಾ ಭಾಷೆಯಲ್ಲಿಯೂ ಬಿಗ್ ಬಾಸ್ ಶೋ ಜನಪ್ರಿಯವಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ನಾಗಾರ್ಜುನ, ಮಲಯಾಳಂನಲ್ಲಿ ಪೃಥ್ವಿರಾಜ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಈಗ ಬಿಗ್ ಬಾಸ್ ಪ್ರೇಕ್ಷಕರಿಗೆ ಆಘಾತವೊಂದು ಎದುರಾಗಿದ್ದು, ತಮಿಳಿನ ಬಿಗ್ ಬಾಸ್ ನಿರೂಪಣೆಯನ್ನ ಕಮಲ್ ಹಾಸನ್ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.

ನಟ ಕಮಲ್ ಹಾಸನ್ ಸದ್ಯ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು ಅವರು ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರು ಚೇತರಿಸಿಕೊಂಡರೂ, ಕಾರ್ಯಕ್ರಮ ನಡೆಸಿಕೊಡುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಕಮಲ್ ಹಾಸನ್ ಬದಲು ಬೇರೆಯವರನ್ನ ಎದುರು ನೋಡುತ್ತಿದ್ದಾರೆ. ಕಳೆದ ನಾಲ್ಕು ಸೀಸನ್ ಗಳಿಂದ ತಮಿಳು ಬಿಗ್ ಬಾಸ್ ಕಾರ್ಯಕ್ರಮವನ್ನ ಕಮಲ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೇ ಇದೇ ಮೊದಲ ಭಾರಿಗೆ ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಿಂದ ವಂಚಿತರಾಗುತ್ತಿದ್ದಾರೆ.

ಇನ್ನು ಕಮಲ್ ಅನುಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹೌದು ಕಮಲ್ ಸ್ಥಾನವನ್ನು ಅವರ ಪುತ್ರಿ ಶೃತಿ ಹಾಸನ್ ಯಶಸ್ವಿಯಾಗಿ ತುಂಬಲಿದ್ದಾರೆ ಎಂದು ಚಾನೆಲ್ ಮೂಲಗಳು ತಿಳಿಸಿವೆ. ಶೃತಿ ಸಹ ನಿರೂಪಣೆಗೆ ಒಪ್ಪಿದ್ದಾರೆ. ಹೀಗಾಗಿ ಬಿಗ್ ಬಾಸ್ ಸೀಸನ್ ಗಳ ಇತಿಹಾಸದಲ್ಲಿಯೇ ಇದೇ ಮೊದಲು ಎಂಬಂತೆ ಮಹಿಳಾ ನಿರೂಪಕಿಯೊಬ್ಬರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶೃತಿ ಹಾಸನ್ ಈ ಟಾಸ್ಕ್ ನಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂಬುದನ್ನ ಕಾದು ನೋಡಬೇಕು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.