ಪುನೀತ್ ಜಾತಕದಲ್ಲಿ ನಿಜವಾಗಲೂ ಸಮಸ್ಯೆ ಇದೆಯೇ?? ಕೊನೆಗೂ ಬಯಲಾಯಿತು ಅಸಲಿ ಸತ್ಯ. ಜಾತಕದಲ್ಲಿ ಏನಿದೆ ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಕೇವಲ ಅವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಮಾತ್ರವಲ್ಲದೆ ಕೋಟ್ಯಾನುಕೋಟಿ ಕನ್ನಡಿಗರು ಕೂಡ ಸಾಕಷ್ಟು ದುಃಖದಲ್ಲಿದ್ದಾಗ. ರಾಜ್ಯದ ಪ್ರತಿಯೊಂದು ಬೀದಿಬೀದಿಯಲ್ಲಿ ಕೂಡ ಅವರ ಶ್ರದ್ಧಾಂಜಲಿ ಪೋಸ್ಟರುಗಳು ರಾರಾಜಿಸುತ್ತಿವೆ. ಇಂದಿಗೂ ಕೂಡ ಅವರ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ದಿನಕ್ಕೆ ಸಾವಿರಾರು ಜನರು ಅವರ ದರ್ಶನವನ್ನು ಪಡೆಯಲು ಸಾಲುಸಾಲಾಗಿ ನಿಲ್ಲುತ್ತಾರೆ.

ಇನ್ನು ಇತ್ತೀಚಿಗೆ ಮರಣೋತ್ತರವಾಗಿ ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ನೀಡಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿ ಕರ್ನಾಟಕ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದ್ದು ಇದನ್ನು ಪಡೆದಿರುವ 10ನೇ ಕನ್ನಡಿಗನಾಗಿ ಪುನೀತ್ ರಾಜಕುಮಾರ್ ಅವರು ಆಯ್ಕೆಯಾಗಿದ್ದಾರೆ. ಪುನೀತ್ ರಾಜಕುಮಾರ್ ಅವರ 11ನೇ ದಿನದ ವಿಧಿ-ವಿಧಾನಗಳನ್ನು ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ರವರು ಮಗನ ಸ್ಥಾನದಲ್ಲಿ ನಿಂತು ಮುಗಿಸಿದ್ದಾರೆ.

ಪುನೀತ್ ರಾಜಕುಮಾರ್ ರವರ ಮರಣದ ವಾರ್ತೆಯನ್ನು ಕೇಳಿ 14 ಅಭಿಮಾನಿಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಆದರೆ ಇಂದಿಗೂ ಕೂಡ ಪುನೀತ್ ರಾಜಕುಮಾರ್ ರವರ ಮರಣದ ವಾರ್ತೆಯನ್ನು ನಂಬಲು ಯಾರಿಗೂ ಕೂಡ ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ 28ರ ರಾತ್ರಿವರೆಗೂ ಕೂಡ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ಚೆನ್ನಾಗಿದ್ದ ಪುನೀತ್ ರಾಜಕುಮಾರ್ ರವರು ಅಕ್ಟೋಬರ್ 29ರಂದು ಮರಣವನ್ನು ಹೊಂದುತ್ತಾರೆ ಎಂದು ಯಾರಿಗೂ ಕೂಡ ನಂಬಲು ಸಾಧ್ಯವೇ ಇಲ್ಲ ಇದು ವೈದ್ಯಲೋಕಕ್ಕೆ ಕೂಡ ಸವಾಲೆಸೆದ ವಿಷಯ.

ಹಾಗಿದ್ದರೆ ಪುನೀತ್ ರಾಜಕುಮಾರ್ ಅವರ ಜಾತಕದಲ್ಲಿ ಏನಾದರೂ ದೋಷ ಇತ್ತಾ ಅದರ ಕುರಿತಂತೆ ಇಂದು ನಾವು ಮೊದಲ ಬಾರಿಗೆ ನಿಮ್ಮೊಂದಿಗೆ ಮಾತನಾಡಲು ಹೊರಟಿದ್ದೇವೆ ತಪ್ಪದೇ ಕೊನೆಯವರೆಗೂ ಓದಿ. ಇನ್ನು ನಿಮಗೆಲ್ಲ ತಿಳಿದಿರುವಂತೆ ಪುನೀತ್ ರಾಜಕುಮಾರ್ ರವರಿಗೆ ಬಾಲ್ಯದಲ್ಲಿ ಸತ್ಯಹರಿಶ್ಚಂದ್ರನ ಮಗನಾಗಿರುವ ಲೋಹಿತ್ ಎಂಬ ಹೆಸರನ್ನು ಇಡಲಾಗಿತ್ತು. ನಂತರ ಲೋಹಿತಾಶ್ವ ನಿಗೆ ಸತ್ಯಹರಿಶ್ಚಂದ್ರನ ಕಥೆಯಲ್ಲಿ ಆಯಸ್ಸು ಕಡಿಮೆ ಎಂದು ತಿಳಿದು ಪುನೀತ್ ಎಂಬುದಾಗಿ ಮರುನಾಮಕರಣ ವನ್ನು ಮಾಡಲಾಗಿತ್ತು. ಆದರೂ ಕೂಡ ಪುನೀತ್ ರಾಜಕುಮಾರ್ ರವರ ಆಯುಷ್ಯ ರೇಖೆಯನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ.

ಅಲ್ಪಾಯುಷಿ ಎಂದು ತಿಳಿದು ಜಾತಕದ ಪ್ರಕಾರ ಪುನೀತ್ ಎಂಬ ನಾಮಕರಣವನ್ನು ಮಾಡಿದ್ದರು ಕೂಡ ಅಲ್ಪಾಯುಷ್ಯ ದಿಂದ ಪುನೀತ್ ರಾಜಕುಮಾರ್ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಪುನೀತ್ ಅವರ ಜಾತಕ ಬಹಳಷ್ಟು ವಿಶೇಷವಾಗಿತ್ತು ಕೀರ್ತಿ ಹಾಗೂ ಹಣವನ್ನು ಬೇಗನೆ ಸಂಪಾದಿಸುತ್ತಾನೆ ಆದರೆ ಆಯುಷ್ಯ ಮಾತ್ರ ಕಡಿಮೆ ಎಂಬುದಾಗಿ ಜ್ಯೋತಿಷ್ಯದಲ್ಲಿ ನುಡಿದಿದ್ದರು. ಇದಕ್ಕಾಗಿ ಹಲವಾರು ಹೋಮ-ಹವನಗಳನ್ನು ಕೂಡ ಮಾಡಿದರು.

ಪುನೀತ್ ರಾಜಕುಮಾರ್ ರವರದ್ದು ಮಿಥುನ ರಾಶಿ ಮಿಥುನ ರಾಶಿ ಎಂದರೆ ಎದೆಯ ಭಾಗ ಎಂದರ್ಥ. ಈ ಭಾಗದಲ್ಲಿ ಶನಿ ಅಡಗಿ ಕುಳಿತಿತ್ತು. ಇನ್ನು ಪುನೀತ್ ರಾಜಕುಮಾರ್ ಅವರ ಜಾತಕದಲ್ಲಿ ಗುರುಬಲ ಚೆನ್ನಾಗಿರಲಿಲ್ಲ. ಗುರುಬಲ ಚೆನ್ನಾಗಿರಲಿಲ್ಲ ಎಂದರೆ ಖಂಡಿತವಾಗಿ ಏನಾದರೂ ಕೆಟ್ಟದ್ದು ಕಂಡಿತವಾಗಿಯೂ ನಡೆದೇ ತೀರುತ್ತದೆ. ಹೀಗಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಲ್ಪಾಯುಷ್ಯ ಸಮಸ್ಯೆಯನ್ನು ತಪ್ಪಿಸಿಕೊಳ್ಳಲು ಹಲವಾರು ಹೋಮಹವನ ಪೂಜೆಗಳನ್ನು ಮಾಡಿದರೂ ಕೂಡ ಪುನೀತ್ ರಾಜಕುಮಾರ್ ಅವರನ್ನು ಅಕಾಲಿಕವಾಗಿ ಕಳೆದುಕೊಳ್ಳುವುದನ್ನು ತಪ್ಪಿಸಲು ಯಾರಿಗೂ ಕೂಡ ಸಾಧ್ಯವಾಗಲಿಲ್ಲ.

Get real time updates directly on you device, subscribe now.