ದಿನಕ್ಕೊಂದು ಮಹತ್ವದ ಹೆಜ್ಜೆ, ಅಪ್ಪು ಇಲ್ಲದ ನೋವಿನಲ್ಲಿಯೂ ಕೂಡ ಕರ್ತವ್ಯ ಮರೆಯದ ಅಶ್ವಿನಿ ಮೇಡಂ, ಮಾಡಲು ಹೊರಟಿರುವುದಾದ್ರು ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಚಿತ್ರರಂಗದ ಕುರಿತಂತೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದರು ಆದರೆ ಅದನ್ನು ಪೂರೈಸುವ ಮೊದಲೇ ಅರ್ಧದಾರಿಯಲ್ಲಿಯೇ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಹೌದು ಗೆಳೆಯರೇ ಪುನೀತ್ ರಾಜಕುಮಾರ್ ರವರು ಚಿತ್ರರಂಗದ ಕುರಿತಂತೆ ಈಗಾಗಲೇ ಹಲವಾರು ವಿಚಾರಗಳನ್ನು ಹೊಂದಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಇನ್ನು ಪುನೀತ್ ರಾಜಕುಮಾರ್ ರವರು ಮಾಡಿಕೊಂಡು ಬರುತ್ತಿದ್ದ ಎಲ್ಲಾ ಕಾರ್ಯಗಳನ್ನು ಕೂಡ ತಾನೇ ಜವಾಬ್ದಾರಿಯುತವಾಗಿ ನಿರ್ವಹಿಸುವುದಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗಾಗಲೇ ಪತ್ರ ಬರೆಯುವುದರ ಮೂಲಕ ಖಾತ್ರಿಪಡಿಸಿದ್ದಾರೆ. ಇನ್ನು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪುನೀತ್ ರಾಜಕುಮಾರ್ ರವರ ಕನಸಿನ ಡಾಕ್ಯುಮೆಂಟರಿ ಆಗಿರುವ ಗಂಧದಗುಡಿ ಯ ಟೀಸರ್ ನವೆಂಬರ್ 1 ರಂದು ಬಿಡುಗಡೆ ಆಗಬೇಕಾಗಿತ್ತು. ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಗಂಧದಗುಡಿಯ ಟೀಸರ್ ಬಿಡುಗಡೆ ಮಾಡಬೇಕೆಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಂದುಕೊಂಡಿದ್ದರು.

ವೈಲ್ಡ್ ಕರ್ನಾಟಕ ಎಂಬ ಡಾಕ್ಯುಮೆಂಟರಿಯನ್ನು ತೆಗೆದಿದ್ದ ಅಮೋಘವರ್ಷ ಅವರ ಜೊತೆಗೆ ಕರ್ನಾಟಕದ ಪ್ರಮುಖ ಸ್ಥಳಗಳಿಗೆ ಸುತ್ತಾಡಿ ಅವುಗಳ ಹಿರಿಮೆ ಹಾಗೂ ಇತಿಹಾಸವನ್ನು ತಿಳಿಸುವ ಗಂಧದಗುಡಿ ಎಂಬ ಡಾಕ್ಯುಮೆಂಟರಿಯನ್ನು ಚಿತ್ರೀಕರಿಸಿದರು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಈ ಡಾಕ್ಯುಮೆಂಟರಿಯಲ್ಲಿ ಅವರು ಕೂಡ ಇದ್ದಿದ್ದರು. ನವೆಂಬರ್ 1 ರಂದು ಬಿಡುಗಡೆ ಆಗಬೇಕಿದ್ದ ಗಂಧದಗುಡಿಯ ಟೀಸರ್ ಅವರ ಅಕಾಲಿಕ ಮರಣ ದಿಂದಾಗಿ ಅರ್ಧದಲ್ಲಿಯೇ ನಿಂತು ಹೋಗಿತ್ತು. ಈಗ ಪುನೀತ್ ರಾಜಕುಮಾರ್ ರವರ ಅರ್ಧದಲ್ಲಿ ನಿಂತಿರುವ ಕನಸನ್ನು ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪೂರೈಸಲು ಸಜ್ಜಾಗಿದ್ದಾರೆ. ಅತಿಶೀಘ್ರದಲ್ಲೇ ಗಂಧದಗುಡಿ ಡಾಕ್ಯುಮೆಂಟರಿಯ ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ.