ಜೀವನದಲ್ಲಿ ಏನಾದ್ರು ಸಾಧಿಸಬೇಕು ಎಂದು ಕಷ್ಟ ಪಟ್ಟು ಓದಿದ್ದಳು, ಆದರೆ ಒತ್ತಾಯ ಮಾಡಿ ಮದುವೆ ಮಾಡಿದರು, ಮೂರೇ ದಿನಕ್ಕೆ ನಡೆದ್ದದೇನು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮೊದಲಿನಿಂದಲೂ ಕೂಡ ಹೆಣ್ಣುಮಕ್ಕಳಿಗೆ ಅವರ ಇಷ್ಟದ ಬದುಕನ್ನು ಮಾಡಲು ಈ ಸಮಾಜ ಅವಕಾಶ ನೀಡಿಲ್ಲ. ಇನ್ನು ಇತ್ತೀಚಿಗಷ್ಟೇ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ. ಒಂದು ಹೆಣ್ಣು ಕಲಿತರೆ ಇಡೀ ಊರೇ ಉದ್ದಾರವಾಗುತ್ತದೆ ಎಂಬ ಗಾದೆ ಮಾತಿದೆ. ಅದರಂತೆ ತಮಿಳುನಾಡು ಮೂಲದ ಭುವನೇಶ್ವರಿ ಎಂಬ 22 ವರ್ಷದ ಹೆಣ್ಣು ಮಗಳು ಓದಿನಲ್ಲಿ ಸಾಕಷ್ಟು ಮುಂದಿದ್ದಳು.

ನರ್ಸಿಂಗ್ ಕೋರ್ಸ್ ಮಾಡುತ್ತಿದ್ದ ಈಕೆಗೆ ಓದಿನಲ್ಲಿ ಸಾಕಷ್ಟು ಪಾಂಡಿತ್ಯ ಹಾಗೂ ಈ ಕೋರ್ಸ್ ನಲ್ಲಿ ಉನ್ನತ ವ್ಯಾಸಂಗವನ್ನು ಮಾಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಳು ಆದರೆ ಆಕೆಯ ಇಚ್ಚೆಗೆ ವಿರುದ್ಧವಾಗಿ ಅವಳನ್ನು ಬಲವಂತವಾಗಿ ಮದುವೆ ಮಾಡಿಕೊಡಲಾಗಿದೆ. ಹೌದು ಗೆಳೆಯರೇ ಭುವನೇಶ್ವರಿಯನ್ನು ಇದೇ ನವೆಂಬರ್ 15ರಂದು 27 ವರ್ಷದ ಮಣಿಕಂದನ್ ಎನ್ನುವವನ ಜೊತೆಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಡಲಾಗಿದೆ. ಇನ್ನು ಮದುವೆಯಾದ ಮೂರೇ ದಿನದಲ್ಲಿ ನಡೆದಿರುವುದನ್ನು ನೋಡಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳುತ್ತೀರಿ.

ಮದುವೆಯಾದ ಮೂರು ದಿನಗಳ ನಂತರ ಮದುವೆ ನಂತರದ ಸಮಾರಂಭಗಳಲ್ಲಿ ಭಾಗವಹಿಸಲು ಕುಟುಂಬಸ್ಥರು ಆಗಮಿಸಿದ್ದರು. ಆದರೆ ಕೊನೆಯಲ್ಲಿ ಭುವನೇಶ್ವರಿ ಕು’ತ್ತಿಗೆ ಬಿಗಿದ ಸ್ಥಿತಿಯಲ್ಲಿ ತನ್ನ ಜೀವನವನ್ನು ತಾನೇ ಮುಗಿಸಿಕೊಂಡಿದ್ದಳು. ಇನ್ನು ವೆಲ್ಲೂರು ಠಾಣೆಯ ಪೊಲೀಸ್ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇನ್ನೂ ಕೂಡ ಹೆಚ್ಚಿನ ವ್ಯಾಸಂಗವನ್ನು ಮಾಡಿ ಉದ್ಯೋಗವನ್ನು ಪಡೆದು ಕೊಳ್ಳಬೇಕೆಂದು ಕೊಂಡಿದ್ದ ಭುವನೇಶ್ವರಿಯನ್ನು ಒತ್ತಾಯ ಪೂರ್ವಕವಾಗಿ ಮದುವೆ ಮಾಡಿದ್ದೇ ಇದಕ್ಕೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಮಕ್ಕಳ ಕುರಿತಂತೆ ಮದುವೆ ಮಾಡುವ ಒಲವಿರಬೇಕು ಆದರೆ ಅವರ ಇಚ್ಛೆಯ ವಿರುದ್ಧವಾಗಿ ಯಾವ ಕೆಲಸವನ್ನು ಮಾಡಿದರೂ ಕೂಡ ಅವರನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂಬುದು ಈ ಘಟನೆ ತಿಳಿಸುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.