ಯಪ್ಪಾ, ಅಂತಿಂತ ಪ್ಲಾನ್ ಅಲ್ಲಾ ಇದು, ಪ್ರಿಯಕರನಿಗಾಗಿ ಈ ಹೆಣ್ಣು ಎಂತಹ ಮಾಸ್ಟರ್ ಪ್ಲಾನ್ ಮಾಡಿ, ಸಮಾಜವನ್ನು ಯಾಮಾರಿಸಲು ಮುಂದಾಗಿದ್ದಾರೆ ಗೊತ್ತಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಮದುವೆಗಳು ಹಾಗೂ ಅದರ ಕೊನೆಗೆ ನಡೆಯುವ ಘಟನೆಗಳು ಮದುವೆ ಮೇಲಿರುವ ನಂಬಿಕೆಯನ್ನು ಹಾಳುಮಾಡಿ ಬಿಟ್ಟಿವೆ. ಇಂದು ನಾವು ಹೇಳುತ್ತಿರುವ ನೈಜ ಘಟನೆ ಕೂಡ ಇದಕ್ಕೆ ಹೊರತಾಗಿಲ್ಲ.

ಆಂಧ್ರಪ್ರದೇಶದಲ್ಲಿ ಸುಧಾಕರ್ ಹಾಗೂ ಸ್ವಾತಿ ಎಂಬ ಇಬ್ಬರು ದಂಪತಿಗಳಿದ್ದರು ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದರು. ಸುಧಾಕರ್ ಕೂಡ ಕ್ರಷರ್ ವ್ಯಾಪಾರಿಯಾಗಿ ತುಂಬಾ ಸ್ಥಿತಿವಂತರಾಗಿದ್ದರು. ಒಮ್ಮೆ ಸ್ವಾತಿಗೆ ಸೊಂಟನೋವು ಎಂದು ರಾಜೇಶ್ ಎಂಬ ತೆರಪಿಸ್ಟ್ ಬೆಳಿಗ್ಗೆ ಸುಧಾಕರ್ ಕರೆದುಕೊಂಡು ಹೋಗುತ್ತಾನೆ. ಆದರೆ ತೆರಪಿಸ್ಟ್ ಗೆ ಹೋಗಿ ಬಂದ ಮೇಲೆ ರಾಜೇಶ್ ಹಾಗೂ ಸ್ವಾತಿಯ ನಡುವೆ ಬೇಡದ ಸಂಬಂಧ ಉದ್ಭವವಾಗುತ್ತದೆ. ರಾಜೇಶ್ ಇಲ್ಲದ ಸಂದರ್ಭದಲ್ಲಿ ಇಲ್ಲದ ನೆಪ ಹೇಳಿ ರಾಜೇಶ್ ಬಳಿಗೆ ಪ್ರಣಯ ಸಲ್ಲಾಪವನ್ನು ನಡೆಸಲು ಸ್ವಾತಿ ಹೋಗುತ್ತಿದ್ದಳು.

ಇನ್ನು ಇದಕ್ಕೆ ತೊಂದರೆಯಾಗಬಾರದೆಂದು ತನ್ನ ಮಕ್ಕಳನ್ನು ತವರುಮನೆಗೆ ಕಳುಹಿಸಿದಳು. ಇದು ಹೀಗೆ ನಡೆಯುತ್ತಾ ಹೋಗುತ್ತಿತ್ತು. ಆದರೆ ಕೆಲವೇ ಸಮಯದಲ್ಲಿ ಇದರ ಕುರಿತಂತೆ ಸುಧಾಕರ್ ಗೆ ಅನುಮಾನ ಬಂದು ದಿನಾಲು ಮನೆಗೆ ಕುಡಿದುಕೊಂಡು ಬಂದು ಜಗಳವಾಡುತ್ತಿದ್ದ. ಆದರೆ ಸ್ವಾತಿ ಮಾತ್ರ ಹೇಗೋ ತನ್ನ ಗಂಡನನ್ನು ನಾನು ಹಾಗೆ ಮಾಡುತ್ತೇನಾ ನಿಮಗೆ ಗೊತ್ತಿಲ್ವಾ ಎಂದು ಇಲ್ಲಸಲ್ಲದ ಕಥೆಗಳನ್ನು ಕಟ್ಟಿ ಸಮಾಧಾನ ಮಾಡುತ್ತಿದ್ದಳು ನಂತರ ಆತ ಕುಡಿದ ಮತ್ತಿನಲ್ಲಿ ಮಲಗಿ ಬೆಳಗ್ಗೆ ಎದ್ದು ತನ್ನ ಕೃಷರ್ ವ್ಯಾಪಾರಕ್ಕೆ ಹೋಗುತ್ತಿದ್ದ.

ಇದು ಹೀಗೆ ನಡೆಯುತ್ತಲೇ ಇತ್ತು. ಒಮ್ಮೆ ಸ್ವಾತಿಗೆ ನನ್ನ ಹಾಗೂ ರಾಜೇಶ್ ನಡುವೆ ಸುಧಾಕರ್ ಮುಳ್ಳಾಗಿದ್ದಾನೆ ಆತನನ್ನು ಮುಗಿಸಬೇಕೆಂಬ ನಿರ್ಧಾರವನ್ನು ಕೈಗೊಂಡು ಇದನ್ನು ರಾಜೇಶ್ ಗು ತಿಳಿಸುತ್ತಾಳೆ. ನಂತರ ಒಂದು ದಿನ ಸುಧಾಕರ್ ಕುಡಿದು ಬಂದು ಜಗಳ ಮಾಡಿದ ನಂತರ ಆತನಿಗೆ ರಾ’ಡ್ ನಿಂದ ಹೊ’ಡೆದು ಮುಗಿಸುತ್ತಾಳೆ. ಆತನ ಮುಖ ಚರ್ಯೆಯನ್ನು ತೆಗೆದು ಆತನ ದೇಹವನ್ನು ಎಸೆದುಬಿಡುತ್ತಾರೆ. ಸುಧಾಕರನಿಗೆ ಮುಖದ ಮೇಲೆ ಬೆಂಕಿಬಿದ್ದು ಸುಟ್ಟುಹೋಗಿದ್ದು ಆತನ ಹೆಸರಿನಲ್ಲಿ ರಾಜೇಶ್ ನನ್ನು ಆಸ್ಪತ್ರೆಗೆ ಸೇರಿಸಿ ನಂತರ ರಾಜೇಶನ ಮುಖವನ್ನು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಸುಧಾಕರನ ಮುಖದಂತೆ ಮಾಡುವ ಪ್ಲಾನ್ ಸ್ವಾತಿಯದ್ದಾಗಿತ್ತು.

ಆಸ್ಪತ್ರೆಗೆ ಹೋದ ನಂತರ ಸುಧಾಕರನ ತಂದೆ ಹಾಗೂ ತಾಯಿಯವರಿಗೆ ಕರೆಮಾಡಿ ಹೀಗಾಗಿದೆ ಎಂದು ತಿಳಿಸುತ್ತಾಳೆ. ಅವರು ಕೂಡ ಆಸ್ಪತ್ರೆಗೆ ಬರುತ್ತಾರೆ. ಇನ್ನು ಆಸ್ಪತ್ರೆಯಲ್ಲಿ ವೈದ್ಯರ ಬಳಿ ತನ್ನ ಗಂಡನ ಮುಖವನ್ನು ಹೇಗಾದರೂ ಮೊದಲಿನಂತೆ ಮಾಡಿ ಎಂದು ಗೋಗರೆಯುತ್ತಾಳೆ. ಇವಳ ಗೋಳಾಟವನ್ನು ತಾಳಲಾರದೆ ವೈದ್ಯರು ಆಯಿತೆಂದು ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಇನ್ನು ಮುಖದ ಚರ್ಮ ಸರಿಹೋಗಲು ನರ್ಸ್ ಲೆಗ್ ಸೂಪ್ ನ್ನು ಕುಡಿಸಲು ಬಂದಾಗ ರಾಜೇಶ್ ನಾನು ಕುಡಿಯುವುದಿಲ್ಲ ಎಂಬುದಾಗಿ ನಿರಾಕರಿಸುತ್ತಾನೆ.

ಇದನ್ನು ನೋಡಿ ಸುಧಾಕರನ ತಂದೆ-ತಾಯಿಯವರಿಗೆ ಅನುಮಾನ ಬರುತ್ತದೆ ಯಾಕೆಂದರೆ ಸುಧಾಕರ್ ಅಪ್ಪಟ ಮಾಂಸಹಾರ ಪ್ರಿಯನಾಗಿದ್ದ. ಆದರೆ ಇಲ್ಲಿ ಈತ ತಾನು ಮಾಂಸಾಹಾರ ಸೇವಿಸುವುದಿಲ್ಲ ಎಂಬುದಾಗಿ ಹೇಳುತ್ತಿದ್ದ. ಇದರ ಕುರಿತಂತೆ ಪೊಲೀಸರಿಗೆ ತಿಳಿಸಿದಾಗ ಸಮಗ್ರವಾಗಿ ವಿಚಾರಣೆ ನಡೆಸಿದ ನಂತರ ಸತ್ಯ ಹೊರಬರುತ್ತದೆ. ಈಗ ಅವರಿಬ್ಬರು ಜೈಲುಪಾಲಾಗಿದ್ದಾರೆ ಸುಧಾಕರ ಸ್ವರ್ಗಸ್ಥ ನಾಗಿದ್ದಾನೆ. ಆದರೆ ಆ ಇಬ್ಬರು ಮಕ್ಕಳು ಏನು ತಪ್ಪು ಮಾಡಿದೆ ಅನಾಥರಾಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.