ನೀವು ಮನೆಯಲ್ಲಿಯೇ ಕೂತು ನೋಡಬಹುದು ಕೋಟಿಗೊಬ್ಬ 3, ಮುಹೂರ್ತ ಕೂಡ ಫಿಕ್ಸ್, ಯಾವಾಗ ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ 3 ಅಕ್ಟೋಬರ್ 14 ರಂದು ಬಿಡುಗಡೆ ಆಗಬೇಕಾಗಿತ್ತು ಆದರೆ ಹಲವಾರು ಅಡೆತಡೆಗಳಿಂದಾಗಿ ಒಂದು ದಿನ ತಡವಾಗಿ ಅಂದರೆ ಅಕ್ಟೋಬರ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇನ್ನೂ ತಡವಾಗಿ ಬಿಡುಗಡೆಯಾದರೂ ಕೂಡ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಂಡು ಬಾಕ್ಸಾಫೀಸ್ ನಲ್ಲಿ ಕೂಡ ರೆಕಾರ್ಡ್ ಕಲೆಕ್ಷನ್ ಮಾಡಿತ್ತು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ದ್ವಿಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹೊಸ ನಿರ್ದೇಶಕ ನಿರ್ದೇಶನವನ್ನೂ ಮಾಡಿದ್ದರು ಕೂಡ ಕಿಚ್ಚ ಸುದೀಪ್ ರವರನ್ನು ನೋಡಲು ಅಭಿಮಾನಿಗಳು ಥಿಯೇಟರಿನತ್ತ ಗುಂಪುಗುಂಪಾಗಿ ಬಂದಿದ್ದರು. ಇನ್ನು ಚಿತ್ರತಂಡವೇ ಹೇಳಿರುವಂತೆ ಬಾಕ್ಸಾಫೀಸ್ ನಲ್ಲಿ ನಾಲ್ಕು ದಿನಕ್ಕೆ 40.5 ಕೋಟಿಯಷ್ಟು ಗಳಿಕೆಯನ್ನು ಕೋಟಿಗೊಬ್ಬ 3 ಚಿತ್ರ ಮಾಡಿತ್ತಂತೆ. ಇನ್ನು ಕೆಲವರು ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹೋಗಿ ವೀಕ್ಷಿಸಿದ್ದರು ಇನ್ನು ಕೆಲವರು ಎರಡೆರಡು ಬಾರಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿದ್ದರು.

ಆದರೆ ಕೆಲವು ಜನರು ಈ ಮಹಾಮಾರಿಯ ಭಯದಿಂದಾಗಿ ಮನೆಯಲ್ಲಿ ಕುಳಿತುಕೊಂಡಿದ್ದರು. ಅಂತವರಿಗೆ ಈಗ ಅಮೆಜಾನ್ ಪ್ರೈಮ್ ನಿಂದ ಒಂದು ಸಂತೋಷದ ಸುದ್ದಿ ಹೊರಬಂದಿದೆ. ಹೌದು ಗೆಳೆಯರೆ ಕೋಟಿಗೊಬ್ಬ 3 ಚಿತ್ರ ಇದೇ ನವೆಂಬರ್ 23ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ಅಮೆಜಾನ್ ಹೆಲ್ಪ್ ಡೆಸ್ಕ್ ಅಭಿಮಾನಿ ಒಬ್ಬರಿಗೆ ರಿಪ್ಲೇ ಮಾಡಿದೆ. ಕೋಟಿಗೊಬ್ಬ 3 ಚಿತ್ರವನ್ನು ಮನೆಯಲ್ಲಿ ಕೂಡ ಈಗ ಕೂತು ನೋಡಬಹುದಾಗಿದೆ. ಆದರೂ ಕೂಡ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ಕೂಡ ಸಾಕಷ್ಟು ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ.

Get real time updates directly on you device, subscribe now.