ಕನ್ನಡಿಗರ ನಿರೀಕ್ಷೆಯನ್ನು ಕಿಚ್ಚಿತ್ತು ಕಡಿಮೆಮಾಡದ ರಮೇಶ್ ಅರವಿಂದ್, 100 ಪರ್ಸೆಂಟ್ 100 ಚಿತ್ರ ಸೂಪರ್ ಹಿಟ್ ಆಗೋದು ಫಿಕ್ಸ್..!!

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕೇವಲ ಕಮರ್ಷಿಯಲ್ ಸಿನಿಮಾಗಳಿಂದ ಬೇಸತ್ತಿದ್ದ ಕನ್ನಡ ಪ್ರೇಕ್ಷಕರಿಗೆ ಹೊಸ ರೀತಿಯ ಸಿನಿಮಾ ಅನುಭವವನ್ನು ನೀಡಲಿದೆ ರಮೇಶ್ ಅರವಿಂದ್ ನಟಿಸಿ ನಿರ್ದೇಶನ ಮಾಡಿರುವ 100 ಚಿತ್ರ. ಇಂದಿನಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ 100 ಚಿತ್ರ ಈಗಾಗಲೇ ಜನರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. 100 ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ಹಾಗು ಟ್ವಿಟರ್ ಇನ್ಸ್ಟಾಗ್ರಾಮ್ ಹೀಗೆ ಹಲವಾರು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳ ಕುರಿತಂತೆ ಇರುವ ವಿಷಯವಾಗಿದೆ.

ಇಂತಹ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಕೆಲವರು ಹುಡುಗಿಯರಿಗೆ ಹತ್ತಿರವಾಗಿ ನಂತರ ಅವರ ಖಾಸಗಿ ಜೀವನದ ಕುರಿತಂತೆ ಕಳ್ಳ ಕಿಂಡಿಯಿಂದ ಇಣುಕಿ ನೋಡಲು ಪ್ರಯತ್ನಿಸುತ್ತಾರೆ. ಇಲ್ಲೂ ಕೂಡ ಅದೇ ತರಹದ ಕಥೆಯನ್ನು ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಚಿತ್ರ ಇಂದಿನ ಸಮಾಜದಲ್ಲಿ ಬೆಂಬಿಡದೆ ನಡೆಯುತ್ತಿರುವ ಕೆಲಸವಾಗಿದೆ. ಹೀಗಾಗಿ ಈ ಚಿತ್ರ ಖಂಡಿತವಾಗಿಯೂ ಒಂದೊಳ್ಳೆ ಸಂದೇಶವನ್ನು ಸಮಾಜಕ್ಕೆ ನೀಡಲು ಹೊರಟಿದೆ. ಇತ್ತೀಚಿನ ವರ್ಷಗಳಲ್ಲಿ ಕೇವಲ ಚಿತ್ರಗಳು ಮನರಂಜನೆ ಮಾತ್ರ ನೀಡುತ್ತಿದ್ದವೆ ಹೊರತು ಯಾವುದೇ ಉಪಯುಕ್ತ ಸಂದೇಶಗಳನ್ನು ನೀಡಿರಲಿಲ್ಲ.

ಆದರೆ ರಮೇಶ್ ಅರವಿಂದ್ ನಟನೆಯ 100 ಚಿತ್ರ ಮನೋರಂಜನೆ ಜೊತೆಗೆ ಜನರಿಗೆ ಮನದಟ್ಟಾಗುವಂತೆ ಸೋಶಿಯಲ್ ಮೀಡಿಯಾ ಗಳನ್ನು ಹೇಗೆ ಉಪಯೋಗಿಸಬೇಕು ಅದರ ಉಪಯೋಗ ಜಾಸ್ತಿಯಾದರೆ ಯಾವ ರೀತಿಯ ಕಂಟಕ ಎದುರಾಗುತ್ತದೆ ಎಂಬುದನ್ನು ಕೂಡ ಹೇಳಿ ಕೊಡಲಿದೆ. ಚಿತ್ರದ ಪ್ರತಿಯೊಂದು ದೃಶ್ಯಗಳು ಕೂಡ ಚಿತ್ರದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಪ್ರತಿಯೊಂದು ಪಾತ್ರಗಳು ಕೂಡ ಅಚ್ಚುಕಟ್ಟಾಗಿ ತಮ್ಮ ನಟನೆಯನ್ನು ನೀಡಿವೆ. ಪ್ರತಿಯೊಂದು ಸಂಭಾಷಣೆ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ 100 ಚಿತ್ರ ಈ ಬಾರಿ ಬಿಡುಗಡೆಯಾಗಿರುವ ಸಿನಿಮಾಗಳಲ್ಲಿ ವಿನ್ನರ್ ಎಂಬುದಾಗಿ ಕಣ್ಣುಮುಚ್ಚಿಕೊಂಡು ಹೇಳಬಹುದಾಗಿದೆ. ತಪ್ಪದೇ ಚಿತ್ರವನ್ನು ಫ್ಯಾಮಿಲಿ ಸಮೇತರಾಗಿ ವೀಕ್ಷಿಸಿ. ಎಲ್ಲರೂ ತಪ್ಪದೆ ವೀಕ್ಷಿಸಲೇ ಬೇಕಾದ ಸಿನಿಮಾ ಸೈಬರ್ ಕ್ರೈಂ ಥ್ರಿಲ್ಲರ್ 100.

Get real time updates directly on you device, subscribe now.