ಯಾರಿಗೂ ತಿಳಿಯದಂತೆ ಯಶ್ ಮಾಡಿದ್ದ ಕೆಲಸಕ್ಕೆ ಕಣ್ಣೀರಿಟ್ಟು ಕೃತಜ್ಞತೆ ತಿಳಿಸಿದ ಅಪ್ಪು ಪತ್ನಿ ಅಶ್ವಿನಿ. ಕಾರಣವೇನು ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮನಸ್ಸಿಗೆ ಎಷ್ಟೇ ಬೇಡವೆಂದರೂ ಕೂಡ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ನೆನಪು ಮತ್ತೆ ಮತ್ತೆ ಮರುಕಳಿಸಿ ಬರುತ್ತಿದೆ. ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವ ಕಟುಸತ್ಯವನ್ನು ಕೆಟ್ಟ ಕನಸಾಗಿ ಮತ್ತೆ ಪುನೀತ್ ಅವರು ವಾಪಸ್ಸು ಬರಲಿ ಎಂದು ಮನಸ್ಸು ಹೇಳುತ್ತದೆ.

ಇನ್ನು ಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ರವರ ಪುನೀತ್ ನಮನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಸಾವಿರಾರು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ನಡೆಸಿದೆ. ಈ ಸಂದರ್ಭದಲ್ಲಿ ಹಲವಾರು ಪರಭಾಷೆಯ ನಟರು ಕೂಡ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಈ ಸಂದರ್ಭದಲ್ಲಿ ಶಿವಣ್ಣ ಹಾಗೂ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಯಶ್ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದಕ್ಕೆ ಒಂದು ಕಾರಣ ಕೂಡ ಇದೆ. ಅದೇನೆಂದರೆ ಯಶ್ ರವರು ಪುನೀತ್ ರಾಜಕುಮಾರ್ ರವರ ನಿಧನಾನಂತರ ಬಹುತೇಕ ಎಲ್ಲಾ ಕಾರ್ಯಗಳನ್ನು ಕೂಡ ಮನೆ ಮಗನಾಗಿ ನಿಂತು ನಡೆಸಿ ಕೊಟ್ಟಿದ್ದರಂತೆ.

ಶಿವಣ್ಣ ನಿದ್ದೆಯಿಲ್ಲದೆ ಕುಳಿತಿದ್ದಾಗ ನೀವು ನಿದ್ದೆ ಮಾಡಿ ನಾನು ಇದ್ದೇನಲ್ಲ ಎಂಬುದಾಗಿ ಶಿವಣ್ಣನನ್ನು ನಿದ್ದೆ ಮಾಡಲು ಕಳಿಸಿದ್ದರಂತೆ. ಇಷ್ಟು ಮಾತ್ರವಲ್ಲದೆ ಪುನೀತ್ ರಾಜಕುಮಾರ್ ರವರ ದೊಡ್ಡ ಮಗಳಾಗಿರುವ ದೃತಿ ಅವರನ್ನು ಅಮೆರಿಕದಿಂದ ಭಾರತಕ್ಕೆ ಬಂದು ಅಂತಿ ದರ್ಶನ ಮಾಡಿ ವಾಪಸು ಹೋಗುವ ಕಾರ್ಯದ ಎಲ್ಲಾ ಮೇಲ್ವಿಚಾರಣೆಯನ್ನು ಕೂಡ ಅವರ ವಹಿಸಿಕೊಂಡಿದ್ದ ರಂತೆ. ಅಮೆರಿಕದಿಂದ ಭಾರತಕ್ಕೆ ದಕ್ಷಿಣ ಬರುವುದು ಅಷ್ಟೊಂದು ಸುಲಭದ ಮಾತಲ್ಲ ಆದರೂ ಯಶ್ ರವರು ಯಾರ ಜೊತೆಗೆ ಮಾತಾಡಬೇಕು ಅವರೊಂದಿಗೆ ಮಾತನಾಡಿ ಎಲ್ಲಾ ಅಧಿಕಾರಿಗಳ ಒಪ್ಪಿಗೆ ನಂತರ ಆದಷ್ಟು ಶೀಘ್ರವಾಗಿ ಅವರನ್ನು ಬೆಂಗಳೂರಿಗೆ ಕರೆತರುವ ಕೆಲಸವನ್ನು ಮಾಡಿದ್ದರು. ಕಷ್ಟದ ಸಮಯದಲ್ಲಿ ಕುಟುಂಬದ ಹಿಂದೆ ನಿಂತಿದ್ದಕ್ಕಾಗಿ ಅಶ್ವಿನಿ ಅವರು ಕೂಡ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಯಶ್ ರವರು ಮಾಡಿರುವ ಒಳ್ಳೆ ಕೆಲಸವನ್ನು ನೋಡಿದರೆ ಖಂಡಿತವಾಗಿಯೂ ಕನ್ನಡ ಚಿತ್ರರಂಗ ಒಂದು ಕುಟುಂಬ ಎಂಬ ಮಾತು 100% ಸತ್ಯ ಎಂದನಿಸುತ್ತದೆ.

Get real time updates directly on you device, subscribe now.