ಪುನೀತ್ ನಮನ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತಡೆಯಲು ಪ್ರಯತ್ನ ಪಟ್ಟಿದ್ದು ಯಾಕೆ ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಗೀತನಮನ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಚಿತ್ರನಟರು ಕನ್ನಡ ಚಿತ್ರರಂಗದ ಖ್ಯಾತ ನಟರು ರಾಜಕೀಯ ನಾಯಕರು ಎಲ್ಲರೂ ಕೂಡ ಆಗಮಿಸಿದ್ದರು.

ಎಲ್ಲರೂ ಕೂಡ ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗಿನ ತಮ್ಮ ಅನುಭವಗಳನ್ನು ಭಾವುಕರಾಗಿ ಮಾತಿನಲ್ಲಿ ಹಂಚಿಕೊಂಡು ಕಣ್ಣೀರನ್ನು ಕೂಡ ಇಟ್ಟಿದ್ದರು. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಒಳಗೆ ಬಿಡಲು ಪೊಲೀಸರು ತಡೆ ಹಾಕಿದ್ದು ಸಾಕಷ್ಟು ಸುದ್ದಿಗೆ ಒಳಗಾಗಿತ್ತು. ಇದರ ಅಸಲಿ ಕಾರಣವೇನೆಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ದರ್ಶನ್ ಅವರು ತಮ್ಮ ಸ್ನೇಹಿತ ಅಪ್ಪು ಅವರ ಪುನೀತ್ ನಮನ ಕಾರ್ಯಕ್ರಮಕ್ಕಾಗಿ ತಮ್ಮ ಗೆಳೆಯರೊಂದಿಗೆ ಕಾರು ನಿಲ್ಲಿಸಿ ಒಳಗೆ ಬರಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ಪಾಸ್ ತೋರಿಸುವಂತೆ ಕೇಳುತ್ತಾರೆ.

ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪ್ರಬುದ್ಧವಾಗಿ ನಡೆದುಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಮ್ಮ ಮೊಬೈಲ್ ನಲ್ಲಿ ಇರುವ ಪಾಸ್ ಫೋಟೋವನ್ನು ತೋರಿಸಿ ಒಳಗೆ ಹೋಗುತ್ತಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿದ್ದರು ಕೂಡ ಅವರಿಗೆ ಒಳಗೆ ಬಿಡದೆ ಇದ್ದುದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಪೊಲೀಸರ ಕರ್ತವ್ಯ ಪ್ರಜ್ಞೆ ಕುರಿತಂತೆ ನಮಗೂ ಕೂಡ ಅಭಿಮಾನವಿದೆ ಆದರೆ ಕನ್ನಡದ ಹೆಸರಾಂತ ಕಲಾವಿದರಿಗೆ ಈ ತರಹ ಮಾಡಿದ್ದು ಎಷ್ಟು ಮಟ್ಟಿಗೆ ಸರಿ ಎಂಬುದು ಅವರೇ ಉತ್ತರಿಸಬೇಕಾಗಿದೆ. ಇನ್ನು ಈ ಸಮಯದಲ್ಲಿ ದರ್ಶನ್ ರವರು ಕೂಡ ನಾನು ಸ್ಟಾರ್ ನಟ ಎಂಬುದನ್ನು ಮರೆತು ಮರು ಮಾತನಾಡದೆ ಪಾಸ್ ತೋರಿಸಿ ಒಳಗಡೆ ಹೋಗಿದ್ದನ್ನು ಎಲ್ಲರೂ ಉತ್ತಮ ನಡುವಳಿಕೆ ಎಂದು ಪ್ರಶಂಸೆ ನೀಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.