ಪುನೀತ್ ರವರ ಜೊತೆ ಮಿಲನ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಪಾರ್ವತಿ ರವರು ಈಗ ಹೇಗಿದ್ದಾರೆ ಗೊತ್ತೇ?? ಏನು ಮಾಡುತ್ತಿದ್ದಾರೆ ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ದೈಹಿಕವಾಗಿ ಕಳೆದುಕೊಂಡಿದೆ. ಇನ್ನು ಇಂದು ನಾವು ಮಾತನಾಡುತ್ತಿರುವುದು ಅವರದೇ ಚಿತ್ರದಲ್ಲಿ ನಟಿಸಿರುವ ಒಬ್ಬ ಖ್ಯಾತ ನಟಿಯೊಬ್ಬರ ಕುರಿತಂತೆ. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಪಾರ್ವತಿ ಮೆನನ್ ರವರ ಕುರಿತಂತೆ.

ಪಾರ್ವತಿ ಮೆನನ್ ರವರು ಮಿಲನಾ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅವರ ಸರಿಸಮನಾಗಿ ನಟಿಸಿದ್ದರು ಕೂಡ. ನಟಿ ಪಾರ್ವತಿ ಮೂಲತಹ ಕೇರಳದ ತಿರುವನಂತಪುರಂ ನವರು. ಮೊದಲು ಮಲಯಾಳಂನ ಕಿರುತೆರೆಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ನಂತರ ಮಲಯಾಳಂ ಚಿತ್ರರಂಗದ ಔಟ್ ಆಫ್ ಸಿಲಬಸ್ ಎಂಬ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪಾದರ್ಪಣೆ ಮಾಡುತ್ತಾರೆ.

2007 ರಲ್ಲಿ ಮಿಲನ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಿ ಅವರ ಮನಸ್ಸಿಗೆ ಹತ್ತಿರವಾಗುತ್ತಾರೆ. ಇಂದಿಗೂ ಕೂಡ ಮಿಲನ ಚಿತ್ರದಲ್ಲಿ ಪಾರ್ವತಿ ಮೆನನ್ ಅವರ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಮಿಲನ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಪೃಥ್ವಿ ಮಳೆ ಬರಲಿ ಮಂಜು ಇರಲಿ ಅಂದರ್ಬಹಾರ್ ಹೀಗೆ ಹಲವಾರು ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ತಾವೇ ಡಬ್ ಮಾಡಿ ಕನ್ನಡವನ್ನು ಕಲಿತು ಕನ್ನಡತಿಯಾಗಿ ಕನ್ನಡ ಚಿತ್ರರಂಗದಲ್ಲಿ ಇದ್ದರು. ಇನ್ನು ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವಾರು ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಕಮರ್ಷಿಯಲ್ ಮಹಿಳಾ ಪ್ರಧಾನ ಹೀಗೆ ಹಲವಾರು ಮಾದರಿಯ ಚಿತ್ರಗಳಲ್ಲಿ ಕನ್ನಡ ಹಾಗೂ ತಮಿಳು ಮಲಯಾಳಂ ಚಿತ್ರರಂಗದಲ್ಲಿ ನಟಿಸಿ ಹಲವಾರು ಪ್ರತಿಷ್ಠಿತ ಅವರುಗಳನ್ನು ಕೂಡ ಪಡೆದುಕೊಂಡಿರುವ ಮಹಾನ್ ಕಲಾವಿದೆ. 2017 ರಲ್ಲಿ ಪಾರ್ವತಿ ನಟಿಸಿದ ಟೇಕ್ ಆಫ್ ಎಂಬ ಮಲಯಾಳಂ ಸಿನಿಮಾದ ನಟನೆಗೆ ವಿಮರ್ಶಕರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು, ಜೊತೆಗೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸಿಲ್ವರ್ ಪೀಕಾಕ್ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದರು.

ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಪಾರ್ವತಿ ಮೆನನ್ ರವರು ಸುಮಾರು 25 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅಪ್ಪು ಹಾಗೂ ಶಿವಣ್ಣ ಇಬ್ಬರೊಡನೆ ಕೂಡ ನಟಿಸಿದ್ದಾರೆ. ನಂತರದ ದಿನಗಳಲ್ಲಿ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ ನಮ್ಮ ಪಾರ್ವತಿ ಮೆನನ್. ಅದರಲ್ಲೂ ಕಳೆದ ಐದು ವರ್ಷಗಳಿಂದ ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರ ನಟಿಸುತ್ತಿದ್ದಾರೆ.

ಇನ್ನು ಪಾರ್ವತಿ ಮೆನನ್ ರವರು ಕನ್ನಡ ಚಿತ್ರರಂಗದಲ್ಲಿ ನಟಿಸದಿರಲು ಕಾರಣ ಎರಡು ಇದೆ. ಮೊದಲನೆಯದು ಕನ್ನಡ ಚಿತ್ರರಂಗದಲ್ಲಿ ಅವರಿಗೆ ಚಾಲೆಂಜಿಂಗ್ ಎನಿಸುವಂತಹ ಯಾವುದೇ ಪಾತ್ರಗಳು ಸಿಗುತ್ತಿಲ್ಲ. ಇನ್ನೊಂದು ಮುಖ್ಯವಾಗಿ ಪಾರ್ವತಿ ಮೆನನ್ ರವರಿಗೆ ತಕ್ಕನಾದ ಸಂಭಾವನೆ ಕೂಡ ದೊರೆಯುತ್ತಿಲ್ಲ. ಸದ್ಯಕ್ಕೆ ಮಲಯಾಳಂ ಚಿತ್ರರಂಗದಲ್ಲಿ ವೆಬ್ಸೇರೀಸ್ ಸೇರಿದಂತೆ ಹಲವಾರು ಚಿತ್ರಗಳ ಅವಕಾಶ ಅವರ ಕೈಯಲ್ಲಿದೆ. ಆದರೆ ಕನ್ನಡ ಪ್ರೇಕ್ಷಕರಿಗೆ ಇಂದಿಗೂ ಕೂಡ ಪಾರ್ವತಿ ಮೆನನ್ ರವರು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಬಂದು ನಟಿಸಲಿ ಎಂಬ ಕಾತರತೆ ಇದೆ.

Get real time updates directly on you device, subscribe now.