ಇತ್ತೀಚಿನ ದಿನಗಳಲ್ಲಿ ಬಹಳ ಚಿಕ್ಕ ವಯಸ್ಸಿಗೆ ಇಹಲೋಕ ತ್ಯಜಿಸಿದ ಕಲಾವಿದರು ಯಾರ್ಯಾರು ಗೊತ್ತೇ?? ಇಲ್ಲಿದೆ ನೋಡಿ ಸಂಪೂರ್ಣ ಲಿಸ್ಟ್.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ಹಲವಾರು ಜನರನ್ನು ಕಳೆದುಕೊಂಡಿದೆ. ಅದರಲ್ಲಿ ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಸೇರಿಕೊಳ್ಳುತ್ತಾರೆ. ಖಂಡಿತವಾಗಿಯೂ ಕಳೆದ ಕೆಲವು ತಿಂಗಳುಗಳಿಂದ ಕನ್ನಡ ಚಿತ್ರರಂಗ ಸಾಕಷ್ಟು ಸಾಧಕರನ್ನು ಕಳೆದುಕೊಂಡು ದುಃಖದ ಕಡಲಿನಲ್ಲಿ ತೇಲಾಡುತ್ತಿದೆ.

ಕೆಲವು ತಿಂಗಳುಗಳ ಅಂತರದಲ್ಲಿ ಅತಿ ಕಡಿಮೆ ವಯಸ್ಸಿಗೆ ಸ್ವರ್ಗಸ್ಥರಾಗಿ ಇರುವ ಸೆಲೆಬ್ರಿಟಿಗಳ ಕುರಿತಂತೆ ನಿಮಗೆ ನಾವು ಹೇಳಲು ಹೊರಟಿದ್ದೇವೆ. ಪುನೀತ್ ರಾಜಕುಮಾರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ನಿಮಗೆ ಸ್ಪೆಷಲ್ ಆಗಿ ಹೇಳಬೇಕೆಂದಿಲ್ಲ. ಅವರ ನಟನೆ ಹಾಗೂ ಸಾಮಾಜಿಕ ಕಾರ್ಯಗಳಿಂದಾಗಿ ಅವರು ಕರ್ನಾಟಕ ರಾಜ್ಯದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಅವರು ಅಕ್ಟೋಬರ್ 29ರಂದು ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಲೋಕವನ್ನು ತ್ಯಜಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾದಾಗ ಅವರಿಗೆ ಕೇವಲ 46 ವರ್ಷ.

ಮೆಬಿನ ಮೈಕಲ್ ಕನ್ನಡ ರಿಯಾಲಿಟಿ ಶೋಗಳಲ್ಲಿ ಜನಪ್ರಿಯರಾಗಿದ್ದ ಇವರು ಸೋಮವಾರಪೇಟೆಯಿಂದ ಕಾರಿನಲ್ಲಿ ತಮ್ಮ ಸ್ನೇಹಿತರೊಂದಿಗೆ ಪ್ರಯಾಣ ಮಾಡುತ್ತಿದ್ದಾಗ ನಡೆದಂತಹ ಘಟನೆಯಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಇವರು ನಿಧನರಾಗಿದ್ದಾರೆ ಕೇವಲ ಇವರಿಗೆ 22 ವರ್ಷ ವಯಸ್ಸು.

ಜಯಶ್ರೀ ರಾಮಯ್ಯ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯನವರು ಹಲವಾರು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಇವರು ತಮ್ಮ ಕೈಯಾರೆ ತಾವು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮಾನಸಿಕ ಖಿನ್ನ’ತೆಯಿಂದ ಬಳಲುತ್ತಿದ್ದ ಇವರು ಮರಣ ಹೊಂದುವಾಗ ಕೇವಲ 28 ವರ್ಷ ವಯಸ್ಸು.

ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ತಮ್ಮ ಮನೆಯಿಂದ ಮಳೆ ಬರುತ್ತಿದ್ದಾಗ ನೂರು ಮೀಟರ್ ದೂರದಲ್ಲಿ ಬೈಕಿನಲ್ಲಿ ಹೋಗುತ್ತಿರಬೇಕಾದರೆ ಘಟನೆ ಸಂಭವಿಸಿ ಅಸುನೀಗಿದ್ದಾರೆ. ಇನ್ನು ಇವರ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಇನ್ನು ಇವರು ಮರಣ ಹೊಂದುವಾಗ ಕೇವಲ 37 ವರ್ಷ ವಯಸ್ಸು.

ಚಿರಂಜೀವಿ ಸರ್ಜಾ ನಟ ಚಿರಂಜೀವಿ ಸರ್ಜಾ ಒಂದೇಸಮನೆ ಕುಸಿದು ಬಿದ್ದಾಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಲಾಯಿತು ಆದರೆ ಮಾರ್ಗಮಧ್ಯದಲ್ಲೇ ಅಸುನೀಗಿದ್ದಾರೆ. ಇನ್ನು ಇವರಿಗೆ ನಿಧನ ಹೊಂದುವಾಗ ಕೇವಲ 35 ವರ್ಷವಾಗಿತ್ತು. ಕೋಟಿ ರಾಮು ಕನ್ನಡ ಚಿತ್ರರಂಗದ ಕೋಟಿ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿರುವ ಕೋಟಿ ರಾಮು ರವರಿಗೆ ಈ ಮಹಾಮಾರಿ ತಗುಲಿತ್ತು. ಇದೇ ಕಾರಣದಿಂದಲೇ ಕೋಟಿ ರಾಮು ಅವರು ಕೇವಲ 52 ವರ್ಷ ವಯಸ್ಸಿನಲ್ಲಿ ಈ ಲೋಕವನ್ನು ಬಿಡುವಂತಾಯಿತು.

ವಿಜೆ ಚಂದನ್ ನಿರೂಪಕ ಹಾಗೂ ನಟರಾಗಿ ಗುರುತಿಸಿಕೊಂಡಿದ್ದ ವಿಜೆ ಚಂದನ್ ರವರು ದಾವಣಗೆರೆಯ ಸಮೀಪದಲ್ಲಿ ಕಾರಿನಲ್ಲಿ ಹೋಗುತ್ತಿರಬೇಕಾದರೆ ಸಂಭವಿಸಿದ ಘಟನೆಯಲ್ಲಿ ಅಸುನೀಗುತ್ತಾರೆ. ಆಗಿನ್ನೂ ಅವರಿಗೆ 34 ವರ್ಷ ವಯಸ್ಸು. ಬುಲೆಟ್ ಪ್ರಕಾಶ್ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ರವರು ಮೂತ್ರಪಿಂಡ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು ಇವರು ಕೂಡ 44ನೇ ವರ್ಷಕ್ಕೆ ಈ ಲೋಕವನ್ನು ತ್ಯಜಿಸಿ ಹೋಗುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.