ಒಬ್ಬ ವ್ಯಕ್ತಿಯನ್ನು ನೊಡಿದ ಕೂಡಲೇ ಅವರ ಭವಿಷ್ಯ ನುಡಿತಿದ್ರಾ ರೆಬಲ್ ಸ್ಟಾರ್; ಪ್ರೇಮಂ ಪೂಜ್ಯಂ ಬಗ್ಗೆ ಅಂಬಿಅಣ್ಣ ಹೇಳಿದ್ದೇನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಕಲಾ ರತ್ನ ರೆಬಲ್ ಸ್ಟಾರ್ ಅಂಬರೀಷ್. ಅವರನ್ನ ಕಳೆದುಕೊಂಡ ನಾವು ನಿಜಕ್ಕೂ ನತದೃಷ್ಟರು. ಅಂಬರೀಷ್ ನಟ ಮಾತ್ರ ಅಲ್ಲ, ರಾಜಕೀಯ ವ್ಯಕ್ತಿ ಮಾತ್ರವಲ್ಲ, ಒಬ್ಬ ಅತ್ಯುತ್ತಮ ವ್ಯಕ್ತಿ. ದೂರದೃಷ್ಟಿತ್ವ, ಹಾಸ್ಯಪ್ರಜ್ಞೆ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದವರು ಅವರು. ಇನ್ನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಲಾವಿದರನ್ನು ಒಮ್ಮೆ ನೋಡಿದರೆ ಅವರ ಭವಿಷ್ಯವನ್ನೇ ಹೇಳಿಬಿಡುತ್ತಿದ್ದರು!

ಹೌದು ಅಂಬರೀಷ್ ಅವರ ನೆನಪಿನ ಶಕ್ತಿಯೂ ಅಪಾರ, ಒಮ್ಮೆ ನೋಡಿದ ಮುಖವನ್ನೂ ಮರೆಯುತ್ತಿರಲಿಲ್ಲ, ಕೇಳಿದ ಕಥೆಯನ್ನೂ ಮರೆಯುತ್ತಿರಲಿಲ್ಲ. ಕನ್ನಡದಲ್ಲಿ ಹಲವು ಕಲಾವಿದರಿಗೆ ಅವರ ಭವಿಷ್ಯ ನಟನೆಯಲ್ಲಿದೆ ಎಂದು ಅಂಬಿ ಹೇಳಿದ ಮಾತು ಅಕ್ಷರಶಃ ಸತ್ಯವಾಗಿದ್ದೂ ಇದಕ್ಕೆ ಜೋಗಿ ಪ್ರೇಮ್ ಅವರ ಬಗ್ಗೆ ಅಂಬಿಅಣ್ಣನ ಮಾತೇ ಸಾಕ್ಷಿ.

ಹೀಗೆ ಇಂದು ಅತ್ಯುತ್ತಮ ನಿರ್ದೇಶಕರಾಗಿ ಬೆಳೆಯುತ್ತಿರುವ ಡಾ. ರಾಘವೇಂದ್ರ ಬಿ.ಎಸ್ ಅವರನ್ನು ಅಂದೇ ಗುರುತಿಸಿ ಅವರ ಬಗ್ಗೆ ಅತ್ಯುತ್ತಮ ಮಾತನಾಡಿ ಅವರಿಗೆ ಸ್ಪೂರ್ತಿ ತುಂಬಿದ್ದವರು ಇದೇ ನಟ ಅಂಬರೀಷ್! ಹೌದು ಈ ವಾರ ಬಿಡುಗಡೆಯಾದ ’ಪ್ರೇಮಂ ಪೂಜ್ಯಂ ಚಿತ್ರದ ಕಥೆಯನ್ನು ಮೊದಲು ಕೇಳಿಸಿಕೊಂಡವರೇ ರೆಬಲ್ ಸ್ಟಾರ್ ಅಂಬರೀಷ್. ತಾವು ತಮ್ಮ ವೈದ್ಯ ವೃತ್ತಿಯನ್ನು ಮುಂದುವರೆಸುತ್ತಾ, ಅದರ ಜೊತೆಗೆ ಹೆಚ್ಚು ಹೆಚ್ಚು ಸಿನಿಮಾಗಳನ್ನು ನೊಡುತ್ತಿದ್ದರಂತೆ ಡಾ. ರಾಘವೇಂದ್ರ ಬಿ. ಎಸ್. ನಂತರ ತಾವೇ ಸ್ವತಃ ಕಥೆಯನ್ನೂ ಬರೆದು ಅದನ್ನ ಅಂಬಿಅವರ ಕಿವಿಗೆ ಹಾಕಿದ್ರು. ಆಗಲೇ ಅದನ್ನು ಮೆಚ್ಚಿ ಹಾರೈಸಿದ ಅಂಬರೀಷ್ ಸಿನಿಮಾ ಮಾಡುವಂತೆ ಹೇಳಿದ್ದರಂತೆ. ಇದೀಗ ಡಾ. ರಾಘವೇಂದ್ರ ಆವರು ನಿರ್ಮಾಪಕ, ಸಾಹಿತಿ, ನಿರ್ದೇಶಕರಾಗಿ ಬೆಳೆಯುತ್ತಾ, ಈ ಸಿನಿಮಾವನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಇಂದಿಗೂ ಅಂಬರೀಶ್ ಅವರನ್ನು ತನ್ನ ಮೊದಲ ಗುರು ಎಂದೇ ಭಾವಿಸಿದ್ದಾರೆ ರಾಘವೇಂದ್ರ ಅವರು. ಆದರೆ ಇತರನ್ನು ಬೆಳೆಸುವ ಮನೋಭಾವವಿದ್ದ ಅಂಬರೀಷ್, ಅಪುವಂಥ ಅನರ್ಘ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಇಂದು!

Get real time updates directly on you device, subscribe now.