ಕುಮಾರ್ ಬಂಗಾರಪ್ಪ ಅವರ ಮಗಳ ಮದುವೆಯಲ್ಲಿ ಭಾಗಿಯಾದ ನಟಿ ಶ್ರುತಿ ಹಾಗೂ ಮಗಳು ಗೌರಿ ಶ್ರುತಿ, ಹೇಗಿದೆ ಗೊತ್ತಾ ಸಂಭ್ರಮ??
ನಮಸ್ಕಾರ ಸ್ನೇಹಿತರೇ ನಟ ಕುಮಾರ್ ಬಂಗಾರಪ್ಪ ರವರ ಕುರಿತಂತೆ ನಿಮಗೆಲ್ಲಾ ಗೊತ್ತೇ ಇದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಸುಪುತ್ರ ರಾಗಿರುವ ಕುಮಾರ್ ಬಂಗಾರಪ್ಪ ರವರು ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಕೂಡ ಕಾಣಿಸಿಕೊಂಡಿದ್ದರು. ಅಂದಿನ ಕಾಲದಲ್ಲೇ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟನಾಗಿ ಯಶಸ್ಸನ್ನು ಕೂಡ ಕಂಡಿದ್ದರು. ಇನ್ನು ಇದಾದ ನಂತರ ಹಲವಾರು ಚಿತ್ರಗಳ ನಿರ್ಮಾಪಕನಾಗಿ ಕೂಡ ಕಾಣಿಸಿಕೊಂಡಿದ್ದರು.
ಇನ್ನು ಇವರ ಸಂಬಂಧದಲ್ಲಿ ಶಿವರಾಜ್ ಕುಮಾರ್ ರವರಿಗೆ ಬಾಮೈದ ಆಗಬೇಕು. ಇವರ ಸಹೋದರಿ ಆಗಿರುವ ಗೀತಾ ರವರನ್ನು ನಟ ಶಿವರಾಜ್ ಕುಮಾರ್ ಅವರಿಗೆ ಮದುವೆ ಮಾಡಿಕೊಟ್ಟಿದ್ದು. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜಕೀಯ ರಂಗದಲ್ಲಿ ಕೂಡ ಸಾಕಷ್ಟು ಸಕ್ರಿಯರಾಗಿದ್ದಾರೆ. ಇನ್ನು ಕುಮಾರ್ ಬಂಗಾರಪ್ಪ ಅವರು ತಮ್ಮ ಮಗಳಾದ ಲಾವಣ್ಯ ಅವರನ್ನು ವಿಕ್ರಮಾದಿತ್ಯ ಎಂಬುವವರ ಜೊತೆಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಇನ್ನು ಅವರೇ ಹೇಳಿರುವಂತೆ ಪುನೀತ್ ರಾಜಕುಮಾರ್ ಅವರು ಇದ್ದಿದ್ದರೆ ಈ ಮದುವೆ ಸಮಾರಂಭಕ್ಕೆ ಇನ್ನಷ್ಟು ಕಳೆ ಸಿಗುತ್ತಿತ್ತು.
ಪುನೀತ್ ರಾಜಕುಮಾರ್ ಅವರು ಕೂಡ ಕುಮಾರ್ ಬಂಗಾರಪ್ಪ ರವರ ಮಗಳ ಮದುವೆಗೆ ಭಾಗಿಯಾಗಲು ಉತ್ಸುಕರಾಗಿದ್ದರು. ಆದರೆ ಈ ಸಂತೋಷದ ಸಮಯವನ್ನು ಕಾಣುವ ಮೊದಲೇ ಅವರು ಬಾರದೂರಿಗೆ ಪಯಣವನ್ನು ಬೆಳೆಸಿದ್ದಾರೆ. ಇನ್ನು ಅವರ ಸವಿನೆನಪಿನಲ್ಲಿ ಮದುವೆ ಸಾಂಗವಾಗಿ ನೆರವೇರಿತು. ಇನ್ನು ಕುಮಾರ್ ಬಂಗಾರಪ್ಪ ರವರ ಮಗಳ ಮದುವೆಗೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಭಾಗಿಯಾಗಿದ್ದಾರೆ. ಇನ್ನು ನಟಿ ಶ್ರುತಿ ಹಾಗೂ ಅವರ ಮಗಳಾಗಿರುವ ಗೌರಿ ಶೃತಿಯವರು ಮದುವೆಯಲ್ಲಿ ಪಾಲ್ಗೊಂಡು ವಧು-ವರರಿಗೆ ಶುಭಹಾರೈಸಿದ್ದಾರೆ. ನೀವು ಕೂಡ ಈ ಸುಂದರ ವಿಡಿಯೋವನ್ನು ಈ ಕೆಳಗಡೆ ನೋಡಬಹುದಾಗಿದೆ.