ಪೇಟ ಸುತ್ತಿಕೊಂಡು ಸ್ನೇಹಿತನ ಮದುವೆಯಲ್ಲಿ ಪವರ್ ಸ್ಟಾರ್ ಡಾನ್ಸ್ ವಿಡಿಯೋ ಹೇಗಿದೆ ಗೊತ್ತೇ?? ಮತ್ತೊಮ್ಮೆ ವೈರಲ್ ಆದ ವಿಡಿಯೋ ನೋಡಿ.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ 46ನೇ ವಯಸ್ಸಿಗೆ ಅಕಾಲಿಕ ನಿಧನವನ್ನು ಹೊಂದಿರುವುದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಭಾರತ ದೇಶಕ್ಕೆ ಶಾಕ್ ನೀಡಿದೆ. ಅತ್ಯಂತ ಫಿಟ್ ಹಾಗೂ ಆರೋಗ್ಯದ ದೇಹದಾರ್ಡ್ಯತೆ ಹೊಂದಿದ್ದ ನಟನೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಅವರಿಗೆ ಇಂತಹ ಪರಿಸ್ಥಿತಿ ಬಂದರೆ ಖಂಡಿತವಾಗಿಯೂ ಎಲ್ಲರಿಗೂ ತಮ್ಮ ದಿನನಿತ್ಯದ ಆರೋಗ್ಯ ಹಾಗೂ ಆಹಾರಕ್ರಮದ ಕುರಿತಂತೆ ಅನುಮಾನ ಮೂಡುವುದು ಖಂಡಿತ.

ಬೇರೆಲ್ಲ ನಟರು ತಾವು ಸ್ಟಾರ್ ಗಳೆಂಬ ಹಮ್ಮು-ಬಿಮ್ಮು ತೋರಿಸಿದರೆ ಪವರ್ ಸ್ಟಾರ್ ಮಾತ್ರ ಅವರಂತಲ್ಲ. ಎಂದಿಗೂ ಕೂಡ ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ವರ್ತಿಸುತ್ತಿದ್ದರು. ಅಣ್ಣಾವ್ರ ಮಗ ಹಾಗೂ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂಬ ಯಾವುದೇ ಗರ್ವವನ್ನು ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಎಲ್ಲರೊಂದಿಗೆ ಸರಳವಾಗಿ ವರ್ತಿಸುತ್ತಿದ್ದರು. ಇದಕ್ಕಾಗಿಯೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಎಂದರೆ ಹೆಚ್ಚಿನ ಜನರಿಗೆ ಪ್ರೀತಿ. ಕರ್ನಾಟಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ದ್ವೇಷಿಸುವ ಒಬ್ಬೇ ಒಬ್ಬನನ್ನು ಹುಡುಕುವುದು ತುಂಬಾ ಕಷ್ಟಕರ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಕರೆಯುತ್ತಾರೆ.

ಇನ್ನು ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಂತೆ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಇಂದು ನಾವು ಹೇಳಲು ಹೊರಟಿರುವುದು ಅವರು ತಮ್ಮ ಸ್ನೇಹಿತನ ಮದುವೆಯಲ್ಲಿ ಕುಣಿದಿರುವ ವಿಡಿಯೋ ಕುರಿತಂತೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಮ್ಮ ಗೆಳೆಯನ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾದ ಸುವ್ವಿ ಸುವ್ವಾಲಿ ಸಾಂಗಿಗೆ ಹಾಕಿಕೊಂಡು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪೇಟ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.

Get real time updates directly on you device, subscribe now.