ಕೊನೆಗೂ ಸಿಕ್ತು ಉತ್ತರ, ಸದಾ ಅಪ್ಪು ಫ್ಯಾನ್ ಅಂತ ಹೇಳಿಕೊಳ್ಳುವ ಅನುಶ್ರೀ ರವರು ಅಪ್ಪುವಿನ ಅಂತಿಮ ದರ್ಶನಕ್ಕೆ ಬರಲಿಲ್ಲ ಯಾಕೆ ಗೊತ್ತೇ??

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಯುವರತ್ನ ಎಂದೇ ಖ್ಯಾತವಾಗಿರುವ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ದಿನಗಳು ಕಳೆದರೂ ಕೂಡ ಅವರು ಇನ್ನೂ ಕೂಡ ತಮ್ಮ ಚಿತ್ರಗಳ ಮೂಲಕ ಜೀವಂತವಾಗಿದ್ದಾರೆ ಎಂಬ ಅನುಭವ ಸದಾಕಾಲ ನಮಗೆ ಬರುತ್ತಿರುತ್ತದೆ. ಯಾಕೆಂದರೆ ಅವರು ಒಬ್ಬ ನಟನಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ವ್ಯಕ್ತಿತ್ವ ಹಾಗೂ ವ್ಯಕ್ತಿಯಾಗಿ ನಮ್ಮೆಲ್ಲರ ಮನಗೆದ್ದಿದ್ದಾರೆ.

ಹೀಗಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ದುಃಖ ಇನ್ನೂ ಕೂಡ ಯಾರಲ್ಲೂ ಕಡಿಮೆಯಾಗಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮರಣದ ದುಃಖವನ್ನು ತಗ್ಗಿಸಲು ಇನ್ನು ಕೂಡ ವರ್ಷಗಳ ಕಾಲ ಸಮಯ ಬೇಕಾಗುತ್ತದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನವನ್ನು ಪಡೆಯಲು 25 ಲಕ್ಷಕ್ಕೂ ಅಧಿಕ ಮಂದಿ ಕಂಠೀರವ ಸ್ಟೇಡಿಯಂಗೆ ಬಂದಿದ್ದರು. ಮಹಾತ್ಮ ಗಾಂಧೀಜಿಯವರ ಅಂತಿಮ ದರ್ಶನ ಬಿಟ್ಟರೆ ಅತ್ಯಂತ ಹೆಚ್ಚು ಜನರನ್ನು ಒಳಗೊಂಡಂತಹ ಅಂತಿಮ ದರ್ಶನವೆಂದರೆ ಇದೆ.

ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನನ್ನ ನೆಚ್ಚಿನ ನಟ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಆಂಕರ್ ಅನುಶ್ರೀ ಅವರು ಯಾಕೆ ಬಂದಿಲ್ಲ ಎಂದು ಅಭಿಮಾನಿಗಳು ಪ್ರಶ್ನೆಗಳ ಪುಂಖಾನುಪುಂಕವಾಗಿ ಕೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ನಿರೂಪಕಿ ಅನುಶ್ರೀ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನನ್ನ ನೆಚ್ಚಿನ ನಟ ಅವರ ನಗು ಮುಖವನ್ನು ನಾನು ಯಾವತ್ತು ಇಷ್ಟಪಡುತ್ತಿದ್ದೆ. ಆದರೆ ಅವರ ಆ ಮುಖವನ್ನು ನನಗೆ ನೋಡಲು ಇಷ್ಟವಿರಲಿಲ್ಲ ಹೀಗಾಗಿ ನನ್ನ ಮನಸ್ಸಿನಲ್ಲಿ ಅವರ ನಗು ಮುಖವೇ ಸದಾಕಾಲ ಉಳಿಯಲಿ ಎಂದು ಬರಲಿಲ್ಲ ಎಂದು ಹೇಳಿದ್ದಾರೆ.

Get real time updates directly on you device, subscribe now.