ಇದೇ ಮೊದಲ ಬಾರಿಗೆ ತಮ್ಮ ಮಗನನ್ನು ತೋರಿಸಿದ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ! ಹೇಗಿದೆ ನೋಡಿ

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರ್ ರವರು ನಿಮಗೆಲ್ಲ ತಿಳಿದಿರುವಂತೆ ರಾಜಕೀಯ ಹಾಗೂ ಸಿನಿಮಾರಂಗ ಗಳನ್ನು ಎರಡನ್ನು ಕೂಡ ಸಮತೋಲನವಾಗಿ ನಿಭಾಯಿಸಿಕೊಂಡು ಬಂದವರು. ಮೊದಲಿಗೆ ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ನಿಖಿಲ್ ಕುಮಾರ್ ರವರು ನಂತರ ರಾಜಕೀಯ ಕ್ಷೇತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ.

ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ರವರ ವಿರುದ್ಧ ಸೋತ ನಂತರ ಮತ್ತೊಮ್ಮೆ ಚಿತ್ರರಂಗದ ಕಡೆಗೆ ಮುಖ ಮಾಡುತ್ತಾರೆ ನಿಖಿಲ್ ಕುಮಾರ್ ರವರು. ಈಗ ರಾಜ್ಯ ಜೆಡಿಎಸ್ ಯುವ ಅಧ್ಯಕ್ಷನಾಗಿ ಪಕ್ಷದ ಕಾರ್ಯಗಳಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಇನ್ನು ಸದ್ಯಕ್ಕೆ ಪ್ರಸ್ತುತ ಪರಿಸ್ಥಿತಿಯಲ್ಲಿ ರೈಡರ್ ಚಿತ್ರದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ನಿಖಿಲ್ ಕುಮಾರ್ ರವರ ಪತ್ನಿ ರೇವತಿ ಅವರು ಇತ್ತೀಚೆಗಷ್ಟೆ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದರು. ಹೀಗಾಗಿ ನಿಖಿಲ್ ಕುಮಾರ್ ರವರಿಗೆ ತಂದೆಯಾಗಿರುವ ಖುಷಿ ಹಾಗೂ ಜವಾಬ್ದಾರಿ ಎರಡು ಕೂಡ ಇದೆ. ಇನ್ನು ಇತ್ತೀಚಿಗಷ್ಟೇ ದೀಪಾವಳಿ ಹಬ್ಬದ ವಿಶೇಷಗಳನ್ನು ಕೋರುವ ಸಂದರ್ಭದಲ್ಲಿ ತಮ್ಮ ಮಗುವಿನ ಫೋಟೋ ಕೂಡ ಬಿಡುಗಡೆ ಮಾಡಿದ್ದಾರೆ.

ಹೌದು ಗೆಳೆಯರೇ ನಿಖಿಲ್ ಕುಮಾರ್ ರವರು ತಮ್ಮ ಹಾಗೂ ಪತ್ನಿ ರೇವತಿಯ ಹಾಗೂ ಮಗುವಿನ ಕೈಯಲ್ಲಿ ಹೂವನ್ನು ಹಿಡಿದುಕೊಂಡು ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹೀಗಾಗಿ ಮಗುವಿನ ಕೈ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಇದೇ ಡಿಸೆಂಬರ್ನಲ್ಲಿ ನಿಖಿಲ್ ಕುಮಾರ್ ಅವರ ಪುತ್ರನಿಗೆ ನಾಮಕರಣ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.