ಜೂನಿಯರ್ ಚಿರು ಸರ್ಜಾ ರವರ ದೀಪಾವಳಿ ಹಬ್ಬದ ಸೆಲೆಬ್ರೇಷನ್ ವಿಡಿಯೋ ಹೇಗಿದೆ ಗೊತ್ತಾ?? ಸುಂದರ ಕ್ಷಣಗಳನ್ನು ನೋಡಿ.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗ ಸೆಲೆಬ್ರಿಟಿ ಮಗುವಾಗಿ ಎಲ್ಲರ ಪ್ರೀತಿಯನ್ನು ಗಳಿಸುತ್ತಿರುವ ಮಗುವೆಂದರೆ ಖಂಡಿತವಾಗಿಯೂ ಮೇಘನಾ ರಾಜ್ ಅವರ ಸುಪುತ್ರ ರಾಯನ್ ರಾಜ್ ಸರ್ಜಾ. ಹೌದು ಗೆಳೆಯರೇ ಮೇಘನರಾಜ ರವರ ಮಗ ಜೂನಿಯರ್ ಚಿರು ಸರ್ಜಾ ಈಗಾಗಲೇ ಸರ್ಜಾ ಹಾಗೂ ಸುಂದರರಾಜ ಕುಟುಂಬಗಳಿಗೆ ಚಿರು ಸರ್ಜಾ ರವರನ್ನು ಕಳೆದುಕೊಂಡಿರುವ ದುಃಖದಿಂದ ಎಲ್ಲರ ಮುಖದಲ್ಲೂ ನಗುವನ್ನು ಮೂಡಿಸಿದ್ದಾರೆ.
ಜೂನಿಯರ್ ಚಿರು ಸರ್ಜಾ ಬಂದಮೇಲೆ ಎಲ್ಲರೂ ಕೂಡ ದುಃಖವನ್ನು ಮರೆತು ಆತನ ಆಟಾಟೋಪಗಳನ್ನು ನೋಡಲು ನಗುಮುಖದಿಂದ ಕಾಯುತ್ತಿರುತ್ತಾರೆ. ಇನ್ನು ಇತ್ತೀಚೆಗೆ ಖಾಸಗಿ ಹೋಟೆಲೊಂದರಲ್ಲಿ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮವನ್ನು ಮೇಘನರಾಜ ರವರು ಅದ್ದೂರಿಯಾಗಿ ನಡೆಸಿದ್ದರು. ಇಷ್ಟು ಮಾತ್ರವಲ್ಲದೆ ಇತ್ತೀಚೆಗಷ್ಟೇ ಮೊದಲ ವರ್ಷದ ಜನ್ಮದಿನಾಚರಣೆಯನ್ನು ಕೂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಲ್ಲರೂ ನೆನಪಿಟ್ಟುಕೊಳ್ಳುವ ಹಾಗೆ ಮಾಡಿದ್ದರು. ಒಬ್ಬ ತಾಯಿಯಾಗಿ ಮೇಘನಾ ರಾಜ್ ರವರು ತಮ್ಮ ಮಗನಿಗೆ ಎಲ್ಲಾ ಸಂತೋಷಗಳನ್ನು ಕೂಡ ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಇಷ್ಟು ಮಾತ್ರವಲ್ಲದೆ ಮಗನೊಂದಿಗೆ ಈ ಬಾರಿಯ ದೀಪಾವಳಿ ಹಬ್ಬವನ್ನು ಕೂಡ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಜೂನಿಯರ್ ಚಿರುಸರ್ಜ ರವರು ತಮ್ಮ ಅಮ್ಮನೊಂದಿಗೆ ಮೊದಲ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಈಗಾಗಲೇ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ನೀವು ಕೂಡ ಆ ವಿಡಿಯೋವನ್ನು ಈ ಕೆಳಗಡೆ ನೋಡಬಹುದಾಗಿದೆ. ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನೀವು ಕೂಡ ಜೂನಿಯರ್ ಚಿರು ಸರ್ಜಾ ರವರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಬಹುದು.