ಸತ್ಯವಾಗಲು ನನಗೆ ಆ ವಿಷಯ ಗೊತ್ತೇ ಇರಲಿಲ್ಲ, ಅಪ್ಪು ಬಗ್ಗೆ ಶಿವಣ್ಣ ಹೇಳಿದ್ದು ಕೇಳಿ ಕಣ್ಣೀರಿಟ್ಟ ಅಶ್ವಿನಿ

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಅಜಾತಶತ್ರು ಇನ್ನಿಲ್ಲ ಎಂಬುದನ್ನು ನೆನಸಿಕೊಳ್ಳಲು ಕೂಡ ಮನಸ್ಸು ಒಪ್ಪುತ್ತಿಲ್ಲ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸದಾ ಹಸನ್ಮುಖಿಯಾಗಿದ್ದ ಇಂದು ಅವರ ನಗುವನ್ನು ಕಾಣಲಾಗದೆ ಮನಸ್ಸು ಸಾಕಷ್ಟು ಒದ್ದಾಡುತ್ತಿದೆ. ಎಂತಹ ಕಲ್ಲು ಮನಸ್ಸಿನವರು ಕೂಡ ಅವರ ನಗುಮುಖದ ಎದುರು ಕರಗಿ ನೀರಾಗುತ್ತಿದ್ದರು.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕ್ಟೋಬರ್ 27 ರಂದು ತಮ್ಮಣ್ಣ ಶಿವಣ್ಣನವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿವಣ್ಣ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರೊಂದಿಗೆ ವೇದಿಕೆ ಮೇಲೆ ಸ್ಟೆಪ್ ಕೂಡ ಹಾಕಿದ್ದರು. ಇದಾದ ನಂತರ ನಿಧನರಾಗುವ ಮುನ್ನಾ ದಿನ ರಾತ್ರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆಯಲ್ಲಿ ಅವರ ಜನ್ಮದಿನಾಚರಣೆ ಸಂಭ್ರಮದಲ್ಲಿ ಕೂಡ ಭಾಗಿಯಾಗಿ ರಾತ್ರಿ ಹನ್ನೆರಡು ಗಂಟೆಯವರೆಗೂ ಕೂಡ ಅಲ್ಲೇ ಇದ್ದರು.

ಆದರೆ ಮಾರನೇ ದಿನ ಬೆಳಿಗ್ಗೆ ಚೆನ್ನಾಗಿದ್ದ ನಮ್ಮೆಲ್ಲರ ನೆಚ್ಚಿನ ಅಪ್ಪು ಒಂದೇ ಸಮನೆ ಹೃದಯಾಘಾತಕ್ಕೆ ಒಳಗಾಗಿರುವುದು ಖಂಡಿತವಾಗಿಯೂ ದೇವರ ಮೇಲೆ ನಂಬಿಕೆ ಹೊರಟು ಹೋಗುವಂತೆ ಮಾಡುತ್ತದೆ. ಅಪ್ಪು ಅವರು ಬದುಕಿದ್ದಾಗ ಏನು ಸಂಪಾದಿಸಿದ್ದರು ಎಂದರೆ ಖಂಡಿತವಾಗಿಯೂ ಅವರನ್ನು ಕೊನೆಯ ದರ್ಶನ ಮಾಡಲು ಬಂದಂತಹ ಅಭಿಮಾನಿಗಳ ಸಂಖ್ಯೆಯನ್ನು ನೋಡಿ ನೀವು ಅರ್ಥೈಸಿಕೊಳ್ಳಬಹುದಾಗಿದೆ.

ಹೌದು ಗೆಳೆಯರೇ ಎರಡು ದಿನಗಳ ಅವಧಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತಿಮದರ್ಶನಕ್ಕೆ 25 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ಕಾರ್ಯಕ್ರಮವನ್ನು ಕೂಡ ಮಾಡಲಾಯಿತು. ಇನ್ನೂ ಒಂದು ವಿಷಯ ಕೊನೆಯವರೆಗೂ ಕೂಡ ಶಿವಣ್ಣನವರಿಗೆ ಗೊತ್ತಿರಲಿಲ್ಲ ಅದರ ಕುರಿತಂತೆ ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಗೋಶಾಲೆ ಅನಾಥಾಶ್ರಮ ವೃದ್ಧಾಶ್ರಮ ಹಾಗೂ 1800 ಮಕ್ಕಳ ಉಚಿತ ಶಿಕ್ಷಣದ ಜವಾಬ್ದಾರಿ ಹೀಗೆ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದ್ದ ಅಪ್ಪು ಈ ಕುರಿತಂತೆ ತಮ್ಮ ಸಹೋದರರಿಗೂ ಕೂಡ ಹೇಳಿ ಇರಲಿಲ್ಲವಂತೆ. ಇದನ್ನು ಕೇಳಿದ ಮೇಲೆ ಶಿವಣ್ಣನವರು ಕೂಡ ಆಶ್ಚರ್ಯಚಕಿತರಾಗಿದ್ದಾರೆ ಮಾತ್ರವಲ್ಲದೆ ಈ ಸಂದರ್ಭದಲ್ಲಿ ಅವರ ಅಪ್ಪಾಜಿ ಹೇಳಿದ ಬಲಗೈಗೆ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಮಾತನ್ನು ಕೂಡ ನೆನಪಿಸಿಕೊಳ್ಳುತ್ತಾರೆ.

ಇನ್ನು ತಮಿಳು ನಟ ವಿಶಾಲ್ ರವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಉಚಿತ ಶಿಕ್ಷಣದ ಜವಾಬ್ದಾರಿಯನ್ನು ಮುಂದಿನ ವರ್ಷದಿಂದ ನಾನು ನೋಡಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇನ್ನು ಈ ಮಾತನ್ನು ಕೇಳಿ ಬೆಂಗಳೂರಿನಲ್ಲಿರುವ ಅವರ ತಂದೆ ಕೂಡ ಅವರನ್ನು ಮೆಚ್ಚಿಕೊಂಡಿದ್ದಾರೆ. ಇಂತಹ ಒಳ್ಳೆಯ ಕೆಲಸಗಳ ಮೂಲಕ ಮತ್ತೊಮ್ಮೆ ನಾವು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪಿಸಿಕೊಳ್ಳೋಣ. ಇನ್ನು ಕೊನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕಣ್ಣುಗಳಿಂದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳಿಂದ ಆಗಿ ನಾಲ್ಕು ಜನರಿಗೆ ದೃಷ್ಟಿ ನೀಡುವಂತೆ ಮಾಡಲಾಗಿದೆ. ಕೊನೆಯಲ್ಲಿ ಕೂಡ ನಾಲ್ಕು ಜನರ ಅಂಧಕಾರವನ್ನು ದೂರಮಾಡಿದ ಪುನೀತ್ ರಾಜಕುಮಾರ್ ಅವರು ಖಂಡಿತವಾಗಿ ದಿವ್ಯ ಚೇತನ.

Get real time updates directly on you device, subscribe now.