ಬೇರೆ ಎಷ್ಟೋ ವಿಷಯಗಳು ಬೇಡವೇ ಬೇಡ, ಪುನೀತ್ ಮಾಡಿರುವ ಇದೊಂದು ಕೆಲಸ ದೇವರಿಗೆ ಕಾಣಿಸಿದ್ದರೇ ಅಪ್ಪು ಗೆ ಹೀಗೆ ಆಗುತ್ತಿರಲಿಲ್ಲ.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಕಳಶದಂತಿದ್ದ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಕನ್ನಡ ಚಿತ್ರರಂಗವನ್ನು ತಬ್ಬಲಿಯನ್ನಾಗಿ ಮಾಡಿ ಹೊರಟು ಬಿಟ್ಟಿದ್ದಾರೆ. ಕೇವಲ 46 ವಯಸ್ಸಿಗೆ ಹೋಗುವಂತಹ ಆರೋಗ್ಯವೂ ಕೂಡ ಪುನೀತ್ ರಾಜಕುಮಾರ್ ಅವರದ್ದು ಆಗಿರಲಿಲ್ಲ ಆದರೆ ಕಾಲನಿಗೆ ಪುನೀತ್ ರಾಜಕುಮಾರ್ ರವರ ಮೇಲೆ ಅದೇನು ಆಸೆ ಇತ್ತು ಅಂತ ಕಾಣಿಸುತ್ತದೆ ಅದಕ್ಕಾಗಿ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆ.

ಕೇವಲ 10 ವರ್ಷದವರಿಗೆ ಬೇಕಾದರೆ ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಂತಹ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಹುಟ್ಟಿದ ಆರೇ ತಿಂಗಳಿಗೆ ತಂದೆ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಧ್ರುವತಾರೆ. ಅವರ ಕುರಿತಂತೆ ಯಾವುದೇ ಪದಗಳಲ್ಲಿ ವರ್ಣಿಸಿದರು ಕೂಡ ಪದಪುಂಜಗಳು ಕಡಿಮೆಯಾಗುತ್ತವೆಯೇ ಹೊರತು ಅವರ ವರ್ಣನೆಯಲ್ಲ. ಇನ್ನು ಕೇವಲ ಸಿನಿಮಾದಲ್ಲಿ ಮಾಡಿದ ಸಾಧನೆಯಿಂದ ಮಾತ್ರವಲ್ಲದೆ ಸಮಾಜ ಕಾರ್ಯಗಳ ಮೂಲಕವೂ ಕೂಡ ಪುನೀತ್ ರಾಜಕುಮಾರ್ ಅವರು ಬಂಗಾರದ ಮನುಷ್ಯ ಎಂದು ಎನಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ರವರು ಮಾಡಿರುವ ಸಮಾಜ ಕಾರ್ಯಗಳ ಕುರಿತಂತೆ ನಾವು ನಿಮಗೆ ಹೇಳಲಿದ್ದೇವೆ.

ಇಲ್ಲಿಯವರೆಗೆ ಅಪ್ಪು ರವರು 26 ಅನಾಥಾಶ್ರಮಗಳು, 46 ಉಚಿತ ಶಾಲೆಗಳು 16 ವೃದ್ಧಾಶ್ರಮಗಳು 19 ಗೋಶಾಲೆಗಳು 1800ಕ್ಕೂ ಹೆಚ್ಚಿನ ಮಕ್ಕಳ ಶಿಕ್ಷಣ ಜವಾಬ್ದಾರಿ ಹಾಗೂ ಮೈಸೂರಿನ ಹೆಣ್ಣುಮಕ್ಕಳಿಗಾಗಿ ಉಚಿತವಾದ ವಸತಿ ಹಾಗೂ ಶಿಕ್ಷಣವನ್ನು ನೋಡಿಕೊಳ್ಳುತ್ತಿರುವ ಶಕ್ತಿಧಾಮ ವನ್ನು ಕೂಡ ನಡೆಸುತ್ತಿದ್ದಾರೆ. ಅಪ್ಪು ಅವರ ಹೆಸರಿನಲ್ಲಿ ದಿನಕ್ಕೆ ಸಾವಿರಾರು ಜನರು ಅವರ ಹೆಸರು ಹೇಳಿ ಊಟ ಮಾಡುತ್ತಾರೆ. ಇಷ್ಟೊಂದೆಲ್ಲಾ ಒಳ್ಳೆಯ ಕಾರ್ಯಗಳನ್ನು ಮಾಡಿದ್ದರು ಕೂಡ ಎಲ್ಲಿಯೂ ಅದನ್ನು ಬಿಚ್ಚಿಡದೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಇದು ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Get real time updates directly on you device, subscribe now.