ಅಪ್ಪು ಜನ್ಮದಿನದಂದು ವಿಶೇಷ ಉಡುಗೊರೆ ನೀಡುವುದಾಗಿ ಘೋಷಣೆ, ಅಪ್ಪು ಸ್ವರ್ಗ ದಿಂದ ನೋಡಿ ಖುಷಿ ಪಡುವುದು ಗ್ಯಾರಂಟಿ.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಅವರ ಅಭಿಮಾನಿಗಳು ಇನ್ನು ಹೇಗೆ ನಿಮ್ಮ ಚಿತ್ರವನ್ನು ದೊಡ್ಡ ಪರದೆಯ ಮೇಲೆ ನೋಡುವುದು. ಇನ್ನು ಹೇಗೆ ನಿಮ್ಮನ್ನು ನೋಡುವುದು ನಿಮಗೆ ಜೈಕಾರ ಹಾಕುವುದು ಎಂದೆಲ್ಲ ಅಭಿಮಾನಿಗಳು ಕಂಗಾಲಾಗಿದ್ದಾರೆ.

ಕೆಲವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾ ನೋಡಿ ಅವರ ಅಭಿಮಾನಿಗಳಾಗಿದ್ದರೆ ಇನ್ನು ಕೆಲವರು ಅವರ ವ್ಯಕ್ತಿತ್ವ ಹಾಗೂ ಸಮಾಜ ಸೇವೆಗಳನ್ನು ನೋಡಿ ಅಭಿಮಾನಿಗಳು ಆಗಿರುತ್ತಾರೆ. ಅವರ ವ್ಯಕ್ತಿತ್ವವೇ ಹಾಗೆ ಕಣ್ರಿ ಅವರ ಜೊತೆಗೆ ಒಂದು ಕ್ಷಣ ಬೆರೆತರೆ ಸಾಕು ನಿಮ್ಮವರೇ ಅನ್ನೋಹಾಗೆ ಆಗಿಬಿಡುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಲವಾರು ಚಿತ್ರಗಳಲ್ಲಿ ನಟಿಸಬೇಕಿತ್ತು. ಆದರೆ ಹೃದಯಾಘಾತ ಎಂಬ ಮಹಾಮಾರಿಗೆ ಸಿಲುಕಿ ನಮ್ಮೆಲ್ಲರನ್ನು ಬಿಟ್ಟು ದೂರವಾಗಿದ್ದಾರೆ. ಇದರ ನಡುವೆಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಕೊಂಚಮಟ್ಟಿಗೆ ಸಂತಸದ ಸುದ್ದಿ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗಾಗಲೇ ನಟಿಸಿರುವ ಬಹದ್ದೂರ್ ಚೇತನ್ ನಿರ್ದೇಶನದ ಜೇಮ್ಸ್ ಚಿತ್ರದ ಬಿಡುಗಡೆ ಇದೇ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಇನ್ನು ಮುಂದೆ ದೊಡ್ಡ ಪರದೆಗಳ ಮೇಲೆ ಪುನೀತ್ ರಾಜಕುಮಾರ್ ರವರನ್ನು ನೋಡಲು ಆಗುವುದಿಲ್ಲ ಎಂಬ ದುಃಖಕ್ಕೆ ಒಳಗಾಗಿದ್ದ ಸಿನಿಮಾ ಅಭಿಮಾನಿಗಳಿಗೆ ಮತ್ತೊಮ್ಮೆ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿಗೆ ದೊಡ್ಡ ಪರದೆಯ ಮೇಲೆ ಜೇಮ್ಸ್ ಚಿತ್ರದ ಮೂಲಕ ನೋಡುವ ಸುವರ್ಣಾವಕಾಶ ಒದಗಿಬಂದಿದೆ. ಜೇಮ್ಸ್ ಚಿತ್ರವನ್ನು ಎಲ್ಲಾ ಕನ್ನಡಿಗರು ವೀಕ್ಷಿಸುವ ಮೂಲಕ ಚಿತ್ರವನ್ನು ವಿಜಯಶಾಲಿ ಯನ್ನಾಗಿ ಮಾಡಿ ಅಪ್ಪು ಅವರಿಗೆ ಕೊನೆಯ ಗೌರವನ್ನು ಸಲ್ಲಿಸುವ ತವಕದಲ್ಲಿ ಅಭಿಮಾನಿಗಳಿದ್ದಾರೆ.

Get real time updates directly on you device, subscribe now.