ಪುನೀತ್ ರವರು ಸಾಕುತ್ತಿದ್ದ 1800 ಅನಾಥ ಮಕ್ಕಳ ಜವಾಬ್ದಾರಿಯನ್ನು ಹೊತ್ತ ತಮಿಳಿನ ಸ್ಟಾರ್ ನಟ.

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಮಾನವೀಯತೆ ಮೇಲಿನ ನಂಬಿಕೆಯು ಕೂಡ ಕನಲಿ ಹೋಗಿದೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಾವು ಬದುಕಿದಷ್ಟು ದಿನ ಎಲ್ಲರಿಗೂ ಸಹಾಯ ಮಾಡಿ ಪ್ರತಿನಿತ್ಯವೂ ದಿನವನ್ನು ಕಳೆಯುತ್ತಿದ್ದರು ಎಂದು ತಪ್ಪಾಗಲಾರದು.

ಪ್ರತಿನಿತ್ಯವು ಕೂಡ ಅವರ ಮನೆಗಳಿಗೆ ಯಾರೇ ಬಂದರು ಅವರನ್ನು ಬರಿಗೈಯಲ್ಲಿ ಹಿಂದಿರುಗಿಸಿ ರಲಿಲ್ಲ. ದೊಡ್ಡಮನೆಯ ಹೆಸರನ್ನು ತಾವು ಇದ್ದಷ್ಟು ದಿನ ಜೋಪಾನವಾಗಿ ಕಾಪಾಡಿಕೊಂಡು ಬಂದವರು. ಸಿನಿಮಾಗಳಲ್ಲಿ ಪ್ರತಿಭಾನ್ವಿತ ನಟರಿಗೆ ಅವಕಾಶ ನೀಡುವುದರಿಂದ ಹಿಡಿದು ಅಶಕ್ತರ ಬಾಳಿಗೆ ಆರ್ಥಿಕವಾಗಿ ಹಾಗೂ ನೈತಿಕವಾಗಿ ಸಹಾಯ ಮಾಡುವುದರ ವರೆಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸದಾ ಮುಂದಿದ್ದರು. ಇನ್ನು ನಿಮಗೆಲ್ಲ ತಿಳಿದಿರುವಂತೆ 1800ಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಹಾಗೂ ವಸತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೋಡಿಕೊಂಡು ಬಂದಿದ್ದರು. ಇನ್ನು ಈಗ ಅದನ್ನು ಯಾರೂ ಮುಂದೆ ನಡೆಸಿಕೊಂಡು ಹೋಗುತ್ತಾರೆ ಎಂಬ ಕುರಿತಂತೆ ಎಲ್ಲರಿಗೂ ಕುತೂಹಲವಿತ್ತು.

ಇನ್ನು ಇದಕ್ಕೆ ಈಗ ಎಲ್ಲರೂ ಕಾಯುತ್ತಿದ್ದ ಉತ್ತರ ಸಿಕ್ಕಿದೆ. ಹೌದು ಗೆಳೆಯರೇ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಪುನೀತ್ ರಾಜಕುಮಾರ್ ರವರ ಸ್ನೇಹಿತರು ಕೂಡ ಹೌದು. ಇಂದು ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಡೆಸಿಕೊಂಡು ಹೋಗುತ್ತಿದ್ದಂತಹ 1800 ಮಕ್ಕಳ ಜವಾಬ್ದಾರಿಯನ್ನು ಮುಂದಿನ ವರ್ಷದಿಂದ ನಾನು ನಡೆಸಿಕೊಂಡು ಹೋಗುತ್ತೇನೆ ಇದೇ ನಾನು ನಿಮ್ಮ ಸ್ನೇಹಕ್ಕೆ ಕೊಡುವ ಗೌರವ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದನ್ನು ನೋಡಿದ ಹಾಗೂ ಕೇಳಿದ ಪ್ರತಿಯೊಬ್ಬರ ಕಣ್ಣಿನಲ್ಲೂ ಕೂಡ ಭಾವನಾತ್ಮಕ ಅಶ್ರುತರ್ಪಣ ಆಗಿದ್ದಂತೂ ಸುಳ್ಳಲ್ಲ .

Get real time updates directly on you device, subscribe now.