ತನ್ನ ಮಗಳು ಮಾಡಿದ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಪುನೀತ್, ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡಿದ್ದ ಪುನೀತ್ ಮಗಳು.

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಾವು ಎಷ್ಟೇ ಇನ್ನೂ ಬೇಜಾರು ಮಾಡಿಕೊಂಡರು ಸಹ ಕನ್ನಡ ಚಿತ್ರರಂಗ ಕಳೆದುಕೊಂಡಿರುವ ಅನರ್ಘ್ಯರತ್ನ ಅಪ್ಪು ಅವರನ್ನು ಮತ್ತೊಮ್ಮೆ ಪಡೆದುಕೊಳ್ಳಲು ಸಾಧ್ಯವೇ ಇಲ್ಲ. ಈ ಹಿಂದೆ ಅಪ್ಪು ಅವರೊಂದಿಗೆ ಕನ್ನಡ ಚಿತ್ರರಂಗ ಹೇಗೆ ಶ್ರೀಮಂತವಾಗಿತ್ತು ಹಾಗೆಯೇ ಕನ್ನಡ ಚಿತ್ರರಂಗ ಅಪ್ಪು ಅವರನ್ನು ಕಳೆದುಕೊಂಡು ಸಂಪೂರ್ಣ ಬಡವಾಗಿದೆ ಎಂದು ಹೇಳಬಹುದಾಗಿದೆ.

ಸಂಪೂರ್ಣ ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಠಾತ್ತನೆ ವ್ಯಾಯಾಮ ಮಾಡುತ್ತಿರಬೇಕಾದರೆ ಹೃದಯಾಘಾತಕ್ಕೆ ಒಳಗಾಗಿದ್ದು ಖಂಡಿತವಾಗಿಯೂ ಎಲ್ಲರೂ ಕೂಡ ಬೆಚ್ಚಿಬೀಳುವ ಸಂಗತಿ. ಇನ್ನು ಅವರನ್ನು ಉಳಿಸಿಕೊಳ್ಳಲು ವಿಕ್ರಂ ಆಸ್ಪತ್ರೆಯಲ್ಲಿ ಶತಾಯಗತಾಯ ಸಾಕಷ್ಟು ಪ್ರಯತ್ನ ಮಾಡಿದರು ಕೂಡ ಅಪ್ಪು ಕಾಲನ ಕರೆಗೆ ಓಗೊಟ್ಟು ತಮ್ಮ ಪೋಷಕರ ಬಳಿ ಸ್ವರ್ಗಸ್ಥರಾಗಿದ್ದಾರೆ.

ಕೇವಲ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಿಂದಾಗಿ ಕೂಡ ಅಪ್ಪು ಎಲ್ಲರ ನೆಚ್ಚಿನ ಮಗನಾಗಿದ್ದರು. ಅವರ ಹಸನ್ಮುಖಿ ಆಟಿಟ್ಯೂಡ್ ಎಲ್ಲರನ್ನೂ ಕೂಡ ಗೆದ್ದಿತ್ತು. ಅವರನ್ನು ಎಲ್ಲರೂ ಕೂಡ ಇಷ್ಟಪಡುತ್ತಿದ್ದರು ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಕರೆಯುತ್ತಿದ್ದರು. ಆದರೆ ಇಂತಹ ಕನ್ನಡ ಕಂಠೀರವನ ಮಗ ಕಂಠೀರವ ಸ್ಟುಡಿಯೋದಲ್ಲಿ ತಮ್ಮ ತಂದೆ-ತಾಯಿಗಳ ಸಮಾಧಿಯ ಪಕ್ಕದಲ್ಲಿ ಬಂದು ಮಲಗುತ್ತಾರೆ ಎಂಬುದನ್ನು ಯಾರೂ ಕೂಡ ಊಹಿಸಿರಲಿಲ್ಲ.

ಕಂಠೀರವ ಸ್ಟುಡಿಯೋದಲ್ಲಿ ಸದಾಕಾಲ ಅವರ ದೇಹದ ಜೊತೆಗೆ ಪತ್ನಿ ಅಶ್ವಿನಿ ಕಿರಿಯ ಮಗಳು ಸಹೋದರರು ಕುಟುಂಬಸ್ಥರು ಎಲ್ಲರೂ ಕೂಡ ಇದ್ದರು ಆದರೆ ಅವರ ಹಿರಿಯ ಮಗಳು ದೃತಿ ಮಾತ್ರ ಮೊದಲಿಗೆ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೌದು ಗೆಳೆಯರೇ ದೃತಿ ರವರು ಅಮೆರಿಕಾದ ಯೂನಿವರ್ಸಿಟಿ ಒಂದರಲ್ಲಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದರು. ತಂದೆಯ ಸುದ್ದಿ ಕೇಳಿದೊಡನೆ ತಕ್ಷಣವೇ ವಿಮಾನವನ್ನು ಹತ್ತಿ ಬೆಂಗಳೂರಿಗೆ ಬಂದು ತಂದೆಯನ್ನು ಕೊನೆಯ ಬಾರಿಗೆ ನೋಡಿ ಕಣ್ಣೀರು ಬತ್ತಿ ಹೋಗುವಂತೆ ಅತ್ತು ಬಿಡುತ್ತಾರೆ.

ಇನ್ನು ದೃತಿ ಅವರ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ, ಅವರು ಅಮೆರಿಕದಲ್ಲಿ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ ಅವಕಾಶವನ್ನು ಪಡೆದಿರುವುದು ಸ್ಟಾರ್ ನಟನ ಮಗಳು ಎಂಬ ಕಾರಣಕ್ಕಾಗಿ ಅಲ್ಲ. ಹೌದು ಗೆಳೆಯರೇ ದೃತೀಯವರು ಚಿಕ್ಕಂದಿನಿಂದಲೂ ಕೂಡ ಓದುವುದರಲ್ಲಿ ಸದಾ ಮುಂದು. ತಾನು ಕಷ್ಟಪಟ್ಟು ಓದಿ ಬಂದಂತಹ ಸ್ಕಾಲರ್ಶಿಪ್ ನಲ್ಲಿ ಉಚಿತ ಪ್ರವೇಶವನ್ನು ಅಮೆರಿಕದ ಪ್ರತಿಷ್ಠಿತ ಯೂನಿವರ್ಸಿಟಿ ನಲ್ಲಿ ಪಡೆದುಕೊಂಡಿದ್ದರು. ಈ ಕುರಿತಂತೆ ತಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೂಡ ತಮ್ಮ ಮಗಳ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು.

ಇನ್ನು ಇತ್ತೀಚಿಗಷ್ಟೇ ತಮ್ಮ ಪತ್ನಿ ಅಶ್ವಿನಿ ಅವರ ಬಳಿ ಮಗಳನ್ನು ನೋಡ ಬೇಕೆನ್ನುವುದಾಗಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರಂತೆ. ಅದಕ್ಕೆ ಅಶ್ವಿನಿ ಅವರು ಇದೇ ಡಿಸೆಂಬರ್ ಗೆ ರಜೆಯ ಕಾರಣಕ್ಕಾಗಿ ಬರುತ್ತಾಳೆ ಆವಾಗಲೇ ನೋಡುವಿರಂತೆ ಎಂಬುದಾಗಿ ಸಮಾಧಾನ ಮಾಡುತ್ತಾರೆ. ಆದರೆ ವಿಧಿಯ ಆಟಕ್ಕೆ ಸಿಲುಕಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮಗಳನ್ನು ನೋಡದೆ ಕೇವಲ 46ನೇ ವಯಸ್ಸಿಗೆ ದೇವರ ಪಾದದ ಬೆಟ್ಟದ ಹೂವು ಆಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದಿಗೂ ಕೂಡ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬುದನ್ನು ನಂಬಲು ಹಾಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ಎಂದೆಂದಿಗೂ ಕೂಡಾ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಅಗ್ರಶ್ರೇಯಾಂಕದಲ್ಲಿರುತ್ತೀರಿ ನಮ್ಮ ನೆಚ್ಚಿನ ಅಪ್ಪು.

Get real time updates directly on you device, subscribe now.