ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮದುವೆಯ ಅಪರೂಪದ ಕ್ಷಣಗಳು ನೋಡಿದ್ದೀರಾ?? ಹಳೆಯ ನೆನಪುಗಳನ್ನು ಮರೆಯಲು ಸಾಧ್ಯವೇ??

47

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಟಸಾರ್ವಭೌಮನ ಕಿರಿಯ ಪುತ್ರ ತನ್ನ ತಂದೆಯನ್ನು ನೋಡಲು ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿ ಸ್ವರ್ಗಸ್ಥ ರಾಗಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಿಧನದ ಸುದ್ದಿ ಎಲ್ಲರನ್ನೂ ಕೂಡ ಮತ್ತೊಮ್ಮೆ ಅರಗಿಸಿಕೊಳ್ಳಲಾಗದಂಥ ದುಃಖದ ಪಾತಾಳಕ್ಕೆ ತಳ್ಳಿದೆ.

ಹೌದು ಗೆಳೆಯರೇ ಇಂದು ನಾವು ಅವರು ಜೀವನವನ್ನು ನಡೆಸಿದಂತಹ ಹಾದಿಯತ್ತ ಕಿರು ಬೆಳಕನ್ನು ಚೆಲ್ಲೋಣ. ಹುಟ್ಟಿದ ಆರನೇ ತಿಂಗಳಿಗೆ ಬಾಲನಟನಾಗಿ ತಮ್ಮ ತಂದೆ ಜೊತೆಗೆ ನಟಿಸಿದ ಹುಟ್ಟು ಕಲಾವಿದ. ತಂದೆಯ ಗುಣಗಳನ್ನು ರಕ್ತಗತವಾಗಿ ಎರವಲು ಪಡೆದುಕೊಂಡಂತಹ ಅಣ್ಣಾವ್ರ ಮಗ. ಹತ್ತನೇ ವರ್ಷದಲ್ಲಿಯೇ ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡು ಬಂದಂತಹ ಕನ್ನಡದ ಕಣ್ಮಣಿ. ಇನ್ನು ಅಣ್ಣಾವ್ರ ಐದು ಮಕ್ಕಳಲ್ಲಿ ಪುನೀತ್ ರಾಜಕುಮಾರ್ ರವರ ಕೊನೆಯವರು. ನಿಮಗೆ ಇನ್ನೊಂದು ವಿಷಯ ತಿಳಿದಿರಲಿ ಸ್ನೇಹಿತರೆ ಶಿವಣ್ಣ ಅವರಿಗಿಂತ ವಯಸ್ಸಿನಲ್ಲಿ ಪುನೀತ್ ರಾಜಕುಮಾರ್ ಅವರು 13 ವರ್ಷ ಚಿಕ್ಕವರು. 2002 ರಲ್ಲಿ ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾದಾರ್ಪಣೆ ಮಾಡಿ ಯಶಸ್ವಿಯಾಗುತ್ತಾರೆ. ಇದುವರೆಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು 29 ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಅಪ್ಪು ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಪುನೀತ್ ರಾಜಕುಮಾರ್ ರವರು ಅಶ್ವಿನಿ ಅವರನ್ನು ಕಾಮನ್ ಫ್ರೆಂಡ್ ಮೂಲಕ ಪರಿಚಿತರಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗುತ್ತಾರೆ. ಇನ್ನು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸದಾಕಾಲ ಹಸನ್ಮುಖಿಯಾಗಿ ಇದ್ದಂತಹ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇನ್ನು ಕೇವಲ ಫೋಟೋಗಳಲ್ಲಿ ಮಾತ್ರ ನಮಗೆ ಕಾಣಸಿಗುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮದುವೆಯ ಕೆಲವು ಭಾವಚಿತ್ರಗಳನ್ನು ನೀವು ಇಲ್ಲಿ ಈ ಕೆಳಗಿನ ವಿಡಿಯೋ ದಲ್ಲಿ ನೋಡಬಹುದಾಗಿದೆ.

Get real time updates directly on you device, subscribe now.