ಇಡೀ ಜಗತ್ತಿಗೆ ಗೊತ್ತಾಗಿದೆ ಅಪ್ಪು ರವರ ಸುದ್ದಿ, ಆದರೆ ಇವರೊಬ್ಬರಿಗೆ ಮಾತ್ರ ಇನ್ನು ತಿಳಿದಿಲ್ಲ, ತಿಳಿಸೋದು ಇಲ್ಲ.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸವ್ಯ ಸಾಚಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಸ್ತಂಗತರಾಗಿದ್ದಾರೆ. ಕೇವಲ 46ನೇ ವಯಸ್ಸಿಗೆ ಅಪ್ಪು ನಮ್ಮನ್ನೆಲ್ಲ ಬಿಟ್ಟು ತಂದೆ ತಾಯಿಯ ಪಾದಕ್ಕೆ ಬೆಟ್ಟದಹೂವು ಆಗಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಿನ್ನೆ ಸುಸ್ತಾಗುತ್ತಿದೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ ಅಲ್ಲಿ ಹೋದ ನಂತರ ಹೃದಯಾಘಾತದ ವಿಷಯ ಅರಿವಾಗಿದ್ದು ಅವರನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನವನ್ನು ಕೂಡ ಕೊನೆಕ್ಷಣದವರೆಗೂ ವೈದ್ಯರು ನಡೆಸಿದ್ದಾರೆ.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಕರ್ನಾಟಕದ ಅದೆಷ್ಟು ಮನೆಗಳಲ್ಲಿ ಬೆಳಗಿದ್ದರು ಕೂಡ ಕತ್ತಲು ಅಂದಕಾರವಾಗಿ ಆವರಿಸಿಕೊಂಡಿದೆ. ತಮ್ಮ ಸಂಬಂಧಿಕ ಅಲ್ಲದಿದ್ದರೂ ಕೂಡ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದೇವೆ ಎಂಬ ಭಾವ ಎಲ್ಲರಲ್ಲಿ ಮನೆಮಾಡಿದೆ. ಇನ್ನು ಇಡೀ ಪ್ರಪಂಚಕ್ಕೆ ಅಪ್ಪು ರವರು ನಿಧನರಾಗಿರುವ ಸುದ್ದಿ ತಿಳಿದಿದ್ದರೂ ಕೂಡ ಅವರೊಬ್ಬರಿಗೆ ಇನ್ನೂ ಕೂಡ ತಿಳಿದಿಲ್ಲ. ಹಾಗಿದ್ದರೆ ಅವರು ಯಾರು ಹಾಗೂ ಯಾಕೆ ತಿಳಿದಿಲ್ಲ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ತಂದೆ ಅಣ್ಣಾವ್ರ ತಂಗಿ ಆಗಿರುವ ನಾಗಮ್ಮನವರಿಗೆ ಇನ್ನು ಕೂಡ ಅಪ್ಪು ಅಗಲಿರುವ ಸುದ್ದಿಯನ್ನು ಹೇಳಿಲ್ಲ. ಯಾಕೆಂದರೆ ಅವರಿಗೆ ಈಗಾಗಲೇ 90 ವಯಸ್ಸಾಗಿದ್ದು ವಯೋಸಹಜ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಅಪ್ಪುವಿನ ಮೇಲೆ ಎಲ್ಲಿಲ್ಲದ ಪ್ರೀತಿಯನ್ನು ನಾಗಮ್ಮನವರು ಇಟ್ಟುಕೊಂಡಿದ್ದರು. ಪುನೀತ್ ರವರಿಗೂ ಕೂಡ ನಾಗಮ್ಮ ಅತ್ತೆ ಎಂದರೆ ತುಂಬಾನೇ ಅಚ್ಚುಮೆಚ್ಚು. ಹೀಗಾಗಿ ಅಪ್ಪು ಅವರ ನಿಧನದ ಸುದ್ದಿಯನ್ನು ತಡೆದುಕೊಳ್ಳಲು ನಾಗಮ್ಮ ಅವರಿಗೆ ಸಾಧ್ಯವಿಲ್ಲ ಎಂಬುದಾಗಿ ತಿಳಿಸಿಲ್ಲ ಇನ್ನು. ಇನ್ನು ಅವರ ಮನೆಯವರೆಲ್ಲ ಈಗಾಗಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಅಪ್ಪುವಿನ ಕೊನೆಯ ದರ್ಶನ ಮಾಡಲು ಬಂದಿದ್ದಾರೆ. ಗಾಜನೂರಿನ ಮನೆಯಲ್ಲಿ ನೀರವ ಮೌನ ಆವರಿಸಿದೆ.

Get real time updates directly on you device, subscribe now.