ಪುನೀತ್ ರವರ ಘಟನೆ ಕುರಿತು ಸೆಹ್ವಾಗ್, ಕುಂಬ್ಳೆ ಹರ್ಭಜನ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಸಂತಾಪ ಸೂಚಿಸಿ ಏನು ಹೇಳಿದ್ದಾರೆ ಗೊತ್ತೇ?? ನಿಜಕ್ಕೂ ಕಣ್ಣೀರು ಬರುತ್ತದೆ.

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಟ ಪುನೀತ್ ರಾಜಕುಮಾರ್ ಅವರು ಹೃದಯ ಆಘಾತ ದಿಂದಾಗಿ ಇಂದು ಮಧ್ಯಾಹ್ನ 11.45 ಕೊನೆಯುಸಿರೆಳೆದಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅಗಲಿರುವುದಕ್ಕೆ ಗಣ್ಯಾತಿಗಣ್ಯರ ಸಂತಾಪ ಹರಿದುಬಂದಿದೆ. ಹೌದು ಗೆಳೆಯರೇ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಬೇರೆಬೇರೆ ಕ್ಷೇತ್ರದಲ್ಲಿ ಕೂಡ ಗೆಳೆಯರನ್ನು ಸಂಪಾದಿಸಿದ್ದರು.

ಕ್ರಿಕೆಟ್ ಕ್ಷೇತ್ರದಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಹರಿದುಬಂದಿದೆ. ಹರ್ಭಜನ್ ಸಿಂಗ್ ರವರು ಬದುಕು ಎನ್ನುವುದು ಅನಿರೀಕ್ಷಿತ ನಿಮ್ಮನ್ನು ಆಗಲಿರುವ ಸುದ್ದಿ ಕೇಳಿ ಬಹಳಷ್ಟು ದುಃಖವಾಗಿದೆ ಎಂಬುದಾಗಿ ಹೇಳಿದ್ದಾರೆ. ವೀರೇಂದ್ರ ಸೆಹ್ವಾಗ್ ರವರು ಕೂಡ ನೀವು ಆಗಲಿರುವುದು ಬಹಳಷ್ಟು ದುಃಖಕರ ವಾಗಿದೆ ಭಾರತ ಚಿತ್ರರಂಗ ನೀವಿಲ್ಲದೆ ಸಾಕಷ್ಟು ನಷ್ಟವನ್ನು ಅನುಭವಿಸಲಿದೆ ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂಬುದಾಗಿ ಹೇಳಿದ್ದಾರೆ.

ಇನ್ನು ಕನ್ನಡಿಗ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕೂಡ ನಾನು ಭೇಟಿಯಾಗಿರುವ ಮೇರು ವ್ಯಕ್ತಿತ್ವ ಹೊಂದಿರುವ ವ್ಯಕ್ತಿತ್ವಗಳಲ್ಲಿ ನೀವು ಕೂಡ ಒಬ್ಬರು ನಿಮ್ಮನ್ನು ಕಳೆದುಕೊಂಡಿರುವ ದುಃಖ ನಮಗಿದೆ ಎಂಬುದಾಗಿ ಹಂಚಿಕೊಂಡಿದ್ದಾರೆ. ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ರವರು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖ ನಮಗಿದೆ. ಈ ಕುರಿತಂತೆ ಅಭಿಮಾನಿಗಳು ಕೂಡ ಶಾಂತ ರೀತಿಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ಪುನೀತ್ ರಾಜಕುಮಾರ್ ರವರ ಆತ್ಮಕ್ಕೆ ಸದ್ಗತಿ ದೊರೆಯುವಂತೆ ಪ್ರಾರ್ಥನೆ ಮಾಡಿ ಎಂಬುದಾಗಿ ಕೋರಿದ್ದಾರೆ. ಇಷ್ಟು ಮಾತ್ರವಲ್ಲದೆ ಸುರೇಶ್ ರೈನ ದೇವದತ್ ಪಡಿಕ್ಕಲ್ ರಾಬಿನ್ ಉತ್ತಪ್ಪ ಮನೀಶ್ ಪಾಂಡೆ ಹೀಗೆ ಹಲವಾರು ಕ್ರಿಕೆಟಿಗರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಶ್ರದ್ಧಾಂಜಲಿಯನ್ನು ಕೋರಿದ್ದಾರೆ.

Get real time updates directly on you device, subscribe now.