ಗಂಡು ಮಗುವಾದ ಮೇಲೆ ತನ್ನ ಜೀವನದ ಮಹತ್ವದ ನಿರ್ಧಾರ ತೆಗೆದುಕೊಂಡ ನಿಖಿಲ್, ಕೊಟ್ಟರು ದೊಡ್ಡ ಸಿಹಿ ಸುದ್ದಿ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಕನ್ನಡ ಚಿತ್ರರಂಗದ ಯುವರಾಜ ಎಂದೇ ಖ್ಯಾತರಾಗಿರುವ ನಿಖಿಲ್ ಕುಮಾರ್ ಅವರು ಈಗಾಗಲೇ ರಾಜಕೀಯ ಹಾಗೂ ಸಿನಿಮಾರಂಗದಲ್ಲಿ ಎರಡರಲ್ಲೂ ಕೂಡ ಸಾಕಷ್ಟು ಗಮನಾರ್ಹವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಹೌದು ಗೆಳೆಯರೇ ನಿಖಿಲ್ ಕುಮಾರ್ ರವರು ಮೊದಲ ಬಾರಿಗೆ ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಾಗು ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ನೂರು ಕೋಟಿ ಬಜೆಟ್ ನಲ್ಲಿ ನಿರ್ಮಾಣ ವಾದಂತಹ ಜಾಗ್ವಾರ್ ಚಿತ್ರ ಅಂದುಕೊಳ್ಳುವಷ್ಟು ಯಶಸ್ಸು ಸಾಧಿಸಿಲ್ಲ ವಾದರೂ ಕೂಡ ಚಿತ್ರರಂಗದಲ್ಲಿ ಅವರು ಬಂದಿದ್ದಾರೆ ಎಂಬ ಸುದ್ದಿ ಹರಡಿತ್ತು.

ನಿಮಗೆಲ್ಲ ತಿಳಿದಿರುವಂತೆ ನಿಖಿಲ್ ಕುಮಾರ್ ಅವರ ತಂದೆಯಾಗಿರುವ ಕುಮಾರಸ್ವಾಮಿಯವರ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಕೂಡ. ಹೀಗಾಗಿ ಒಂದು ಲೆಕ್ಕದಲ್ಲಿ ತಂದೆಯ ಸಿನಿಮಾ ಸಂಬಂಧದಿಂದಾಗಿ ಚಿತ್ರರಂಗಕ್ಕೆ ನಿಖಿಲ್ ಕುಮಾರ್ ಅವರು ಪಾದರ್ಪಣೆ ಮಾಡುವಂತಾಗಿದೆ. ಇನ್ನು ಇದಾದನಂತರ ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಸೀತರಾಮಕಲ್ಯಾಣ ಚಿತ್ರದಲ್ಲಿ ಕೂಡ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಇದರ ನಡುವೆ ನಟ ನಿಖಿಲ್ ಕುಮಾರ್ ರವರು ರೇವತಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇತ್ತೀಚಿಗಷ್ಟೇ ಗಂಡು ಮಗುವಿನ ತಂದೆ ಕೂಡ ಆಗಿದ್ದಾರೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ನಿಖಿಲ್ ಕುಮಾರ್ ಅವರಿಗೆ ಸಾಕಷ್ಟು ಸಂತೋಷದ ದಿನಗಳು ಮೂಡಿಬಂದಿವೆ ಎಂದರೂ ಕೂಡ ತಪ್ಪಾಗಲಾರದು. ಸದ್ಯಕ್ಕೆ ನಿಖಿಲ್ ಕುಮಾರ್ ರವರ ಅಭಿಮಾನಿಗಳು ಕೆಲವು ಬೇಡಿಕೆಗಳನ್ನು ತಮ್ಮ ನೆಚ್ಚಿನ ನಾಯಕ ನಲ್ಲಿ ಇಟ್ಟಿದ್ದಾರೆ. ಅದೇನೆಂದರೆ ಸಿನಿಮಾರಂಗವನ್ನು ತೊರೆದು ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯಿರಿ ಎನ್ನುವುದಾಗಿ.

ಈ ಹಿಂದೆ ಮಂಡ್ಯ ಕ್ಷೇತ್ರದಿಂದ ಟಿಕೆಟ್ ಸಿಕ್ಕಿ ಸುಮಲತಾ ಅಂಬರೀಶ್ ರವರ ವಿರುದ್ಧ ಸೋಲನ್ನು ಕೂಡ ಕಂಡಿದ್ದರು. ಇನ್ನು ಪಕ್ಷದ ಯುವ ರಾಜ್ಯ ಅಧ್ಯಕ್ಷ ಪಟ್ಟದಲ್ಲಿರುವ ನಿಖಿಲ್ ಕುಮಾರ್ ರವರು ಸಿನಿಮಾ ಕಾರಣದಿಂದಾಗಿ ಪಕ್ಷದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರಿಸಿರುವ ನಿಖಿಲ್ ಕುಮಾರ್ ರವರು ರೈಡರ್ ಚಿತ್ರ ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು ಇದಾದ ನಂತರ ಒಂದು ಚಿತ್ರಕ್ಕೆ ಸಹಿ ಹಾಕಿದ್ದೇನೆ ಅದರ ನಂತರ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವ ಯೋಚನೆಯಲ್ಲಿದ್ದೇನೆ ಎಂಬುದಾಗಿ ಕೂಡ ಹೇಳಿದ್ದಾರೆ.
ಆದರೆ ಈವರೆಗೂ ಕಂಡುಬಂದ ರೀತಿಯಲ್ಲಿ ನಿಖಿಲ್ ಕುಮಾರ್ ಅವರು ರಾಜಕೀಯ ಕ್ಷೇತ್ರದಲ್ಲೂ ಕೂಡ 100% ಹಿಡಿತವನ್ನು ಹೊಂದಿಲ್ಲ. ಹೀಗಾಗಿ ಸಿನಿಮಾ ಕ್ಷೇತ್ರದಂತೆ ರಾಜಕೀಯ ಕ್ಷೇತ್ರದಲ್ಲೂ ಕೂಡ ಕಾಲೇಜಿನ ಪ್ರದರ್ಶನ ನೀಡುವುದಾದರೆ ಇದು ಕೂಡ ಅವರಿಗೆ ಹೇಳಿ ಮಾಡಿಸಿದ ಕ್ಷೇತ್ರವಾಗಿ ಉಳಿದುಕೊಳ್ಳುವುದಿಲ್ಲ. ಹೀಗಾಗಿ ಯಾವುದೇ ನಿರ್ಧಾರವನ್ನು ಕೂಡ ಅವರು ಯೋಚಿಸಿ ನಿರ್ಧರಿಸಬೇಕಾಗಿರುವ ಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ.

ಇನ್ನು ಸದ್ಯಕ್ಕೆ ನಿಖಿಲ್ ಕುಮಾರ್ ಅವರ ರೈಡರ್ ಚಿತ್ರದ ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ಕಾರ್ಯ ಕೂಡ ಈಗಾಗಲೇ ಪ್ರಾರಂಭವಾಗಿದ್ದು ಬಿಡುಗಡೆಗೆ ಸಜ್ಜಾಗಿದೆ. ಇನ್ನು ಅಭಿಮಾನಿಗಳಿಗೆ ನೀಡಿರುವ ಆಶ್ವಾಸನೆ ರಾಜಕೀಯ ಆಶ್ವಾಸನೆಯಂತೆ ಕ್ಷಣಿಕವೋ ಅಥವಾ ನಿಜವೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಇನ್ನು ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ಹಂಚಿಕೊಳ್ಳಿ.