ಪುರುಷರು ನಿಂತು ಮೂತ್ರ ವಿಸರ್ಜನೆ ಮಾಡಿದರೆ ಒಳ್ಳೆಯದಾ ಇಲ್ಲ ಕುಳಿತು ಮೂತ್ರ ವಿಸರ್ಜನೆ ಮಾಡಿದರೆ ಒಳ್ಳೆಯದಾ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವ ವಿಚಾರ ಕೊಂಚಮಟ್ಟಿಗೆ ನಿಮಗೆ ಕಸಿವಿಸಿಯಾದರೂ ಕೂಡ ಇದು ಕೂಡ ನಿಮ್ಮ ದಿನನಿತ್ಯದ ಕ್ರಿಯೆಯಲ್ಲಿ ಒಂದಾಗಿರುವುದರಿಂದ ಆಗಿ ನೀವು ತಿಳಿದುಕೊಳ್ಳಬೇಕಾದ ಅವಶ್ಯಕತೆ ಖಂಡಿತವಾಗಿ ಇದೆ. ಹೌದು ಗೆಳೆಯರೆ ನಾವು ಮಾತನಾಡಲು ಹೊರಟಿರುವುದು ಮೂತ್ರವಿಸರ್ಜನೆಯ ಸ್ಥಿತಿಯ ಕುರಿತಂತೆ. ನಿಮಗೆ ತಿಳಿದಿರುವಂತೆ ಗಂಡಸರು ನಿಂತು ಮೂತ್ರ ವಿಸರ್ಜನೆ ಮಾಡಿದರೆ ಮಹಿಳೆಯರು ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ.

ಇದು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಂತಹ ಪ್ರಕ್ರಿಯೆಯಾಗಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಗಂಡಸರ ಮೂತ್ರ ವಿಸರ್ಜನೆಯ ಸ್ಥಿತಿಯ ಕುರಿತಂತೆ. ಯಾಕೆಂದರೆ ಗಂಡಸರಲ್ಲಿ ಕೂಡ ಕೆಲವರು ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡಿದರೆ ಇನ್ನು ಕೆಲವರು ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ. ಕೆಲವರು ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ ಯಾಕೆಂದರೆ ಮೂತ್ರ ಕಾಲಿಗೆ ಬಿದ್ದು ಗಲೀಜು ಆಗದೇ ಇರಲಿ ಎಂಬ ಕಾರಣಕ್ಕಾಗಿ ಎಂದು ಹೇಳುತ್ತಾರೆ.

ಇನ್ನು ಬಹುತೇಕ ಎಲ್ಲ ಮಂದಿ ಪುರುಷರು ಕೂಡ ನಿಂತುಕೊಂಡೇ ಮೂತ್ರ ವಿಸರ್ಜನೆ ಮಾಡುತ್ತಾರೆ ಇದಕ್ಕೆ ಕಾರಣ ಅತ್ಯಂತ ವೇಗವಾಗಿ ಮೂತ್ರ ವಿಸರ್ಜನೆಯನ್ನು ಮುಗಿಸಬಹುದಾಗಿರುತ್ತದೆ. ಈ ಕಾರಣದಿಂದಾಗಿ ನೀವು ನೋಡಿರಬಹುದು ಪುರುಷ ಶೌಚಾಲಯದಲ್ಲಿ ಸಾಲುಗಳು ಕಂಡುಬರುವುದಿಲ್ಲ. ಇನ್ನೂ ಏನಾದರೂ ಸಮಸ್ಯೆ ಇದ್ದಲ್ಲಿ ಮಾತ್ರ ಕೆಲವರು ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ ಹೀಗಾಗಿ ಅವರಿಗೆ ಆ ಸ್ಥಿತಿ ಸುಲಭವಾಗಿರುತ್ತದೆ. ಇನ್ನು ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುವುದರಿಂದ ಆಗಿ ಗಲೀಜು ಕಡಿಮೆಯಾಗಿರುತ್ತದೆ. ಇನ್ನು ಸ್ವಾಸ್ಥ್ಯ ಆರೋಗ್ಯ ಉಳ್ಳಂತಹ ಮನುಷ್ಯ ಎರಡು ರೀತಿಯ ಸ್ಥಿತಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.