ಭಾರತ ದೇಶ ಪಾಕಿಸ್ತಾನದ ವಿರುದ್ಧ ಸೋಲನ್ನು ಕಾಣಲು ಈ ಮಾಜಿ ಆಟಗಾರನೇ ಕಾರಣವಂತೆ. ಯಾರು ಗೊತ್ತೇ?? ಸಾಕು ಬಾಯಿ ಮುಚ್ಚಿ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಯಾವುದೇ ವಿಷಯಗಳಿದ್ದರೂ ಕೂಡ ಅದು ದೊಡ್ಡದಾಗಿ ಸದ್ದು ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಭಾರತ ಹಾಗು ಪಾಕಿಸ್ತಾನದ ಕ್ರಿಕೆಟ್ ಪಂದ್ಯಾವಳಿಗಳನ್ನು ಖಂಡಿತವಾಗಿ ಸಾಕಷ್ಟು ದೊಡ್ಡಮಟ್ಟದಲ್ಲಿ ಜಾಗತಿಕವಾಗಿ ಸದ್ದು ಮಾಡುತ್ತದೆ. ಅದೇ ರೀತಿ ಮೊನ್ನೆಯಷ್ಟೇ ನಡೆದಿರುವ t20 ವರ್ಲ್ಡ್ ಕಪ್ ನ ಮೊದಲ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಇತ್ತು.
ಈಗಾಗಲೇ ವಲ್ಡ್ ಕಪ್ ನಲ್ಲಿ ನಾವು 12-0 ಅಂತರದಲ್ಲಿ ಪಾಕಿಸ್ತಾನವನ್ನು ಗೆದ್ದುಕೊಂಡು ಬಂದಿದ್ದೇವೆ. ಆದರೆ ಮೊನ್ನೆ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನದ ಎದುರು ಸೋತು ಶರಣಾಗಿತ್ತು. ಈ ಪಂದ್ಯದ ನಂತರ ಹಲವಾರು ಅಭಿಮಾನಿಗಳು ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಸಾಕಷ್ಟು ಬೇಸರವನ್ನು ಹೊರಹಾಕಿದ್ದಾರೆ. ಇಷ್ಟು ಮಾತ್ರವಲ್ಲದೆ ಮೊಹಮ್ಮದ್ ಶಮಿ ಅವರ ದುಬಾರಿ ಓವರ್ ಕುರಿತಂತೆ ಕೂಡ ಹೀಯಾಳಿಸಿದ್ದು ಅವರ ವಿರುದ್ಧ ಕೆಟ್ಟಪದಗಳನ್ನು ಕೂಡ ಪ್ರಯೋಗ ಮಾಡಿದ್ದಾರೆ. ಇನ್ನು ಈಗ ಇದಕ್ಕೆ ಹೊಸಸುದ್ದಿ ಜೊತೆಯಾಗಿದ್ದು ಭಾರತ ಸೋಲುವುದಕ್ಕೆ ಇನ್ನೊಬ್ಬರು ಕಾರಣ ಎಂಬುದಾಗಿ ಕೂಡ ನೆಟ್ಟಿಗರು ಹೇಳುತ್ತಿದ್ದಾರೆ.

ಹೌದು ಗೆಳೆಯರೇ ಅದು ಇನ್ಯಾರು ಅಲ್ಲ ಗೌತಮ್ ಗಂಭೀರ್. ಹೌದು ಗೆಳೆಯರೇ ಈ ಹಿಂದೆ ಗೌತಮ್ ಗಂಭೀರ್ ಹೇಳಿದವರೆಲ್ಲ ಸೋಲುತ್ತಾ ಬಂದಿದ್ದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಇಂಡಿಯಾ ಮ್ಯಾಚ್ ಪ್ರಾರಂಭವಾಗುವುದಕ್ಕಿಂತ ಮುಂಚೆ ಕೂಡ ಭಾರತ ಕ್ರಿಕೆಟ್ ತಂಡ ಗೆಲ್ಲಲು ಸವಾಲಾಗಿದೆ ಖಂಡಿತವಾಗಿಯೂ ಭಾರತ ಕ್ರಿಕೆಟ್ ತಂಡದ ಗೆಲ್ಲುವುದು ಎಂಬುದಾಗಿ ಹೇಳಿದರು. ಈ ಹಿಂದಿನಂತೆ ಈ ಬಾರಿಯೂ ಕೂಡ ಗೌತಮ್ ಗಂಭೀರ್ ಹೇಳಿರುವ ಭಾರತ ಕ್ರಿಕೆಟ್ ತಂಡ ಸೋತಿದೆ. ಹೀಗಾಗಿ ಎಲ್ಲರೂ ಭಾರತ ಸೋಲುವುದಕ್ಕೆ ಗೌತಮ್ ಗಂಭೀರ್ ಕಾರಣ ಎಂಬುದಾಗಿ ಹಾಸ್ಯಾಸ್ಪದವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಡಿಕೊಳ್ಳುತ್ತಿದ್ದಾರೆ.