ಅಕ್ಕಿನೇನಿ ನಾಗಾರ್ಜುನಗೆ ಕಿಸ್ ಮಾಡೋಕೆ ದೊಡ್ಡ ಮೊತ್ತದ ಬೇಡಿಕೆ ಇಟ್ಟ ಅಮಲಾ ಪೌಲ್. ಟಾಲಿವುಡ್ ನಲ್ಲಿ ಡಿಮ್ಯಾಂಡ್ ಗೆ ತಕ್ಕಂತೆ ಸಂಭಾವನೆ.

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಕ್ಕಿನೇನಿ ಕುಟುಂಬದಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇಧನದ ವಿಷಯ ತಾಲಿವುಡ್ ನಲ್ಲಿ ಮನೆಮನೆ ಮಾತಾಗಿತ್ತು. ಆದರೆ ಈ ಯಾವ ವಿಷಯವೂ ನಾಗ ಚೈತನ್ಯ ಅವರ ಲವ್ ಸ್ಟೋರಿ ಸಿನಿಮಾದ ಮೇಲಾಗಲಿ, ಅಥವಾ ನಾಗಾರ್ಜುನ ಅವರ ಚಿತ್ರ ನಟನೆಯ ಮೇಲಾಗಲಿ ಅಷ್ಟು ಪರಿಣಾಮ ಬೀರಿಲ್ಲ ಎನ್ನುವುದೇ ಗುಡ್ ನ್ಯೂಸ್. ವಯಸ್ಸು 60 ದಾಟಿದರೂ ನಾಗಾರ್ಜುನ ಒಬ್ಬ ಯಂಗ್ ಆಂಡ್ ಎನರ್ಜಿಟಿಕ್ ನಟ. ಇಂದಿಗೂ ಯುವ ಕಲಾವಿದರನ್ನೂ ನಾಚಿಸುವ ರೀತಿಯಲ್ಲಿ ನಟಿಸುತ್ತಾರೆ. ಅದರಲ್ಲೂ ರೊಮ್ಯಾಂಟಿಕ್ ಸೀನ್ ‘ಗೋಸ್ಟ್’ಸಿನಿಮಾ ಮತ್ತೊಮ್ಮೆ ಸಾಕ್ಷಿಯಾಗಲಿದೆ.

’ಗೋಸ್ಟ್’ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಟಿಸಬೇಕಿತ್ತು. ಆದರೆ ಅವರು ಗರ್ಭಿಣಿ ಎಂಬ ಸುದ್ದಿಯಿದೆ. ಹಾಗಾಗಿ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಕಾಜಲ್ ಅಗರ್ವಾಲ್. ಇದೀಗ ನಾಗಾರ್ಜುನ ಅವರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅಮಲಾ ಪೌಲ್. ದಕ್ಷಿಣ ಭಾರತದ ಚಿರಪರಿಚಿತ ನಟಿ ಅಮಲಾ ಪೌಲ್. ಕನ್ನಡದಲ್ಲಿಯೂ ಕೂಡ ನಟಿಸಿದ್ದು, ಕನ್ನಡಿಗರಿಗೂ ಇಷ್ಟವಾದ ನಟಿ. ಗೋಸ್ಟ್ ಚಿತ್ರದ ನಿರ್ದೇಶಕ ಪ್ರವೀಣ್ ಅವರು ಕಾಜಲ್ ಸಿನಿಮಾ ಮಾದದ ಹಿನ್ನೆಲೆಯಲ್ಲಿ ಅಮಾಲಾಗೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಆಫರ್ ನೀಡಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ನಾಯಕ ಹಾಗೂ ನಾಯಕಿ ಇರಬೇಕಾದ ಒಂದು ಸೀನ್ ಈ ಚಿತ್ರದಲ್ಲಿದೆ. ಈ ಸಂದರ್ಭದಲ್ಲಿ ಇವರ ನಡುವೆ ಪ್ರೀತಿ ಉಂಟಾಗುತ್ತೆ. ಇಲ್ಲಿಯೇ ಒಂದು ಹಾಡಿನ ಚಿತ್ರೀಕರಣವನ್ನೂ ಮಾಡಲಾಗತ್ತೆ. ಇನ್ನು ಈ ಚಿತ್ರದಲ್ಲಿ ಲಿಪ್ ಲಾಕ್ ಹಾಗೂ ಕೆಲವು ಇಂಟಿಮೇಟ್ ಸೀನ್ ಗಳಲ್ಲಿ ಅಮಲಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇಂಥ ಸೀನ್ ನಲ್ಲಿ ನಟಿಸುವುದಕ್ಕಾಗಿ ತುಸು ಹೆಚ್ಚೇ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರಂತೆ ಅಮಲಾ. ಈಗಾಗಲೇ ‘ಗೋಸ್ಟ್’ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಅಕ್ಕಿನೇನಿ ನಾಗಾರ್ಜುನ ಅವರು ಬಿಗ್ ಬಾಸ್ ಸೀಸನ್ 5ರ ಶೂಟಿಂಗ್ನಲ್ಲಿಯೂ ಬ್ಯುಸಿಯಾಗಿದ್ದಾರೆ. ಅದರಲ್ಲೂ ಕಾಜನ್ ಬದಲು ಬೇರೆ ನಟಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಿಂದಾಗಿ ಗೋಸ್ಟ್ ಚಿತ್ರೀಕರನ ಸ್ವಲ್ಪ ತಡವಾಗಿದೆ. ಆದರೆ ಇನ್ನು ಎರಡು ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಬಹುದು ಎನ್ನ್ನಲಾಗುತ್ತಿದೆ.

Get real time updates directly on you device, subscribe now.