ಚಲಿಸುವ ರೈಲಿನಲ್ಲಿದ್ದಾಗ ಮೊಬೈಲ್ ಬಿದ್ದು ಹೋದರೇ, ಹೀಗೆ ಮಾಡಿದರೆ ವಾಪಸ್ಸು ಸಿಗುತ್ತದೆ ನಿಮ್ಮ ಮೊಬೈಲ್. ಏನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆ ಗೊತ್ತೇ ಭಾರತೀಯ ರೈಲ್ವೆಯನ್ನು ಭಾರತೀಯ ಸಾರಿಗೆ ನಿಗಮದ ಎದೆಬಡಿತ ಎಂದು ಕೂಡ ಕರೆಯಲಾಗುತ್ತದೆ. ಭಾರತದಲ್ಲಿ ಬಹುತೇಕ ಹೆಚ್ಚಿನ ಜನರು ದೂರದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲ್ವೆ ಮಾಧ್ಯಮವನ್ನು ಉಪಯೋಗಿಸುತ್ತಾರೆ. ಇನ್ನು ಬಸ್ಸಿಗೂ ಹಾಗೂ ರೈಲು ಇರುವ ಮುಖ್ಯ ವ್ಯತ್ಯಾಸವೇನೆಂದರೆ, ಬಸ್ಸಿನಲ್ಲಿ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾದರೆ ಶೌಚಾಲಯಕ್ಕಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ರೈಲಿನಲ್ಲಿ ಒಳಗಡೆಯೇ ಇರುತ್ತದೆ. ಇನ್ನು ರೈಲಿನಲ್ಲಿ ನಿದ್ದೆ ಬಂದಾಗ ಸ್ಲೀಪರ್ ನಲ್ಲಿ ಮಲಗಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರೈಲಿನಲ್ಲಿ ಕಿಟಕಿಯ ಬಳಿ ಮೊಬೈಲ್ ನಲ್ಲಿ ಸಾಂಗ್ ಹಾಕಿಕೊಂಡು ಹೆಡ್ ಫೋನ್ ನಲ್ಲಿ ಕೇಳುವ ಮಜಾವೇ ಬೇರೆ ಅಲ್ವಾ. ಇಂತಹ ಅದೆಷ್ಟೋ ನೆನಪುಗಳ ಸರಮಾಲೆಯನ್ನೇ ಕಟ್ಟಿಕೊಡುವಂತಹ ಪ್ರಯಾಣವನ್ನು ರೈಲಿನಲ್ಲಿ ನಾವು ಮಾಡಬಹುದಾಗಿದೆ.

ಆದರೆ ವಿಂಡೋ ಸೀಟ್ ನ ವಿಚಾರದಲ್ಲಿ ಒಂದು ವೇಳೆ ಚಲಿಸುತ್ತಿರುವ ರೈಲಿನಿಂದ ನಿಮ್ಮ ಮೊಬೈಲ್ ಫೋನ್ ಬಿದ್ದುಹೋದರೆ ಹೇಗನಿಸುತ್ತದೆ. ಖಂಡಿತವಾಗಿಯೂ ನೀವು ಮತ್ತೊಮ್ಮೆ ಆ ಮೊಬೈಲನ್ನು ಪಡೆದುಕೊಳ್ಳುವ ಆಸೆನೆ ಬಿಟ್ಟು ಬಿಡುತ್ತೀರಿ. ಸಾವಿರಾರು ರೂಪಾಯಿ ನಷ್ಟ ಆಯ್ತು ಎಂಬ ದುಃಖ ಬೇರೆ ನಿಮಗೆ ಕಾಡುತ್ತದೆ. ಆದರೆ ನಿಮಗೆ ಗೊತ್ತಾ ಗೆಳೆಯರೇ ಇದೆಲ್ಲಾ ಆದ ಮೇಲೆ ಕೂಡ ನಿಮ್ಮ ಮೊಬೈಲನ್ನು ನೀವು ಮತ್ತೊಮ್ಮೆ ಪಡೆದುಕೊಳ್ಳಬಹುದಾಗಿದೆ ಅದು ಹೇಗೆ ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.
ಮೊದಲಿಗೆ ರೈಲ್ವೆ ಟ್ರ್ಯಾಕ್ ನಲ್ಲಿ ಹಲವಾರು ನಂಬರ್ಗಳು ನಿಮಗೆ ಕಾಣಸಿಗುತ್ತವೆ. ಒಂದು ಹೇಳಿ ಮೊಬೈಲ್ ಬಿದ್ದ ತಕ್ಷಣ ನೀವು ಈ ನಂಬರ್ ಗಳಿಗೆ ಕರೆ ಮಾಡಿದರೆ ನಿಮ್ಮ ಸಮಸ್ಯೆ ಬಗೆಹರಿಯಬಹುದಾಗಿದೆ. ಈ ನಂಬರ್ ಗಳನ್ನು ನೀವು ನೆನಪಿನಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ಈ ನಂಬರ್ ಗಳು ಎಲ್ಲಿ ಸಿಕ್ಕಿದರು ಕೂಡ ನೀವು ಮೊದಲೇ ನೋಟ್ ಮಾಡಿಕೊಂಡು ಇಟ್ಟುಕೊಂಡಿರಿ. ಯಾರಿಗೆ ಗೊತ್ತು ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದಲ್ಲವೇ. ಅದಕ್ಕಾಗಿ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಕೊಳ್ಳ ಬೇಕಾಗಿರುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ.
ಎರಡನೆಯದಾಗಿ ಇನ್ನು ಈ ಸಂದರ್ಭದಲ್ಲಿ ನೀವು ನಿಮ್ಮ ಜೊತೆ ಬೇರೆ ಯಾರಾದರೂ ಪ್ರಯಾಣಿಸುತ್ತಿದ್ದರೆ ಅವರ ಮೊಬೈಲನ್ನು ತೆಗೆದುಕೊಂಡು ಆರ್ ಪಿ ಎಫ್ ನ ಹೆಲ್ಪ್ಲೈನ್ ನಂಬರ್ 182 ಕೆ ಕರೆ ಮಾಡಿ ಯಾವ ಟ್ರ್ಯಾಕ್ ಮೇಲೆ ನಿಮ್ಮ ಮೊಬೈಲ್ ಬಿದ್ದಿದೆ ಎಂಬುದಾಗಿ ಅವರಿಗೆ ತಿಳಿಸಿದರೆ ಅವರು ಅದೇ ಜಾಗಕ್ಕೆ ಬಂದು ಮೊಬೈಲ್ ಅನ್ನು ಹುಡುಕಿ ನಿಮಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. ಆದರೆ ಸರಿಯಾದ ಟ್ರ್ಯಾಕ್ ಹಾಗೂ ಸ್ಥಳದ ಮಾಹಿತಿಯನ್ನು ನೀವು ಅವರಿಗೆ ನೀಡಲೇಬೇಕು. ಇದರಿಂದಾಗಿ ಅವರಿಗೆ ಮೊಬೈಲನ್ನು ಹುಡುಕಲು ಸಹಾಯಕಾರಿಯಾಗುತ್ತದೆ.
ಮೂರನೇದಾಗಿ ನೀವು ಆರ್ಪಿಎಫ್ ನಲ್ಲಿ ದೂರು ದಾಖಲಿಸಿದ ಮೇಲೆ ಅವರು ಹತ್ತಿರದ ರೈಲ್ವೆ ಪೊಲೀಸ್ ಸ್ಟೇಷನ್ ಗೆ ಇದರ ಕುರಿತಂತೆ ತಿಳುವಳಿಕೆಯನ್ನು ನೀಡುತ್ತಾರೆ. ಒಂದು ವೇಳೆ ಅವರಿಗೆ ನಿಮ್ಮ ಮೊಬೈಲ್ ಸಿಕ್ಕಿದರೆ ಅತಿಶೀಘ್ರವಾಗಿ ನಿಮಗೆ ಸಂಪರ್ಕವನ್ನು ಮಾಡಲು ಪ್ರಯತ್ನಿಸುತ್ತಾರೆ. ಹೀಗಾಗಿ ನೀವು ದೂರು ನೀಡಬೇಕಾದರೆ ಸರಿಯಾದ ಸ್ಥಳವನ್ನು ಅವರಿಗೆ ಮನದಟ್ಟು ಮಾಡುವುದು ಮುಖ್ಯವಾದ ಅಂಶವಾಗಿರುತ್ತದೆ.

ನಾಲ್ಕನೆಯದಾಗಿ ನೀವು ಜಿ ಆರ್ ಪಿ 1532 ನಂಬರ್ಗೆ ಕೂಡ ಕರೆ ಮಾಡಿ ಸಹಾಯವನ್ನು ಪಡೆದುಕೊಳ್ಳಬಹುದು. ಅಥವಾ ರೈಲ್ವೆಯ 138 ನಂಬರ್ಗೆ ಕೂಡ ಕರೆಮಾಡಿ ಸಹಾಯವನ್ನು ಪಡೆದುಕೊಳ್ಳಬಹುದು. ನಿಮಗೆ ಮತ್ತೊಂದು ವಿಷಯ ಗೊತ್ತಿರಲಿ ಗೆಳೆಯರೇ 138 ನಂಬರಿಗೆ ಕರೆ ಮಾಡಿದರೆ ನಿಮಗೆ ಯಾವ ಸಂದರ್ಭದಲ್ಲಿ ಕೂಡ ಯಾವ ಸಮಸ್ಯೆ ಎದುರಾದರೂ ಕೂಡ ಇಲ್ಲಿಂದ ನಿಮಗೆ ಮಾರ್ಗದರ್ಶನ ಹಾಗೂ ಸಹಾಯದ ನಿರೀಕ್ಷೆಯನ್ನು ಮಾಡಬಹುದಾಗಿದೆ. ಹೀಗಾಗಿ 138 ನಂಬರ್ ರೈಲ್ವೆ ಪ್ರಯಾಣದಲ್ಲಿ ಖಂಡಿತವಾಗಿ ನಿಮಗೆ ಯಾವುದೇ ಸಮಸ್ಯೆ ಎದುರಾದರೂ ಕೂಡ ಸಹಾಯವನ್ನು ಮಾಡುವಂತಹ ನಂಬರ್ ಆಗಿದೆ. ಇಂದು ನಾವು ನಿಮಗೆ ಹೇಳಿರುವ ರೈಲ್ವೆ ಮಾಹಿತಿ ನಿಮಗೆ ರೈಲ್ವೇ ಸಂಚಾರದಲ್ಲಿ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.