ಜೂನಿಯರ್ ಚಿರುಸರ್ಜ ಬರ್ತಡೆ ಮುಗಿದ ಮರುದಿನವೇ ಸಿಹಿ ಸುದ್ದಿ ನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ, ಅಭಿಮಾನಿಗಳ ಆಸೆ ಕೊನೆಗೆ ಈಡೇರಿತು.

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚೆಗಷ್ಟೇ ನಟಿ ಮೇಘನಾ ರಾಜ್ ರವರು ತಮ್ಮ ಮಗ ಜೂನಿಯರ್ ಚಿರು ಸರ್ಜಾ ಅವರ ಜನ್ಮದಿನವನ್ನು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿದ್ದರು. ಇನ್ನು ನಿಮಗೆಲ್ಲ ತಿಳಿದಿರುವಂತೆ ಚಿರು ಸರ್ಜಾ ರವರು ಕಳೆದ ವರ್ಷದ ಲಾಕ್ ಡೌನ್ ನಲ್ಲಿ ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲಿ ಕೊನೆಯುಸಿರೆಳೆದಿದ್ದರು. ಇನ್ನು ಈ ಸಂದರ್ಭದಲ್ಲಿ ನಟಿ ಮೇಘನರಾಜ್ ರವರು ಸಾಕಷ್ಟು ದುಃಖದಲ್ಲಿ ಮುಳುಗಿದ್ದರು ಹಾಗೂ ಅವರ ಜೀವನಕ್ಕೆ ಬೆಳಕಾಗಿ ಬಂದಿದ್ದು ಅವರ ಮಗ ಜೂನಿಯರ್ ಚಿರು ಸರ್ಜಾ.

ಇನ್ನು ಸಾಕಷ್ಟು ಸಮಯಗಳ ಕಾಲ ಚಿತ್ರರಂಗದಿಂದ ದೂರವಿದ್ದ ಮೇಘನಾ ರಾಜ್ ರವರು ಇತ್ತೀಚಿಗಷ್ಟೇ ಚಿರು ಸರ್ಜಾ ಅವರ ಜನ್ಮದಿನದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರಗಳ ಘೋಷಣೆಯನ್ನು ಮಾಡಿದ್ದಾರೆ. ಇದರ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ಕೂಡ ನೀಡಿದ್ದಾರೆ. ಇನ್ನು ಈಗ ಕೇಳಿಬರುತ್ತಿರುವ ಸುದ್ದಿ ಖಂಡಿತವಾಗಿಯೂ ನಿಮ್ಮನ್ನು ಆಶ್ಚರ್ಯಕ್ಕೆ ತಳ್ಳಬಹುದು. ಹೌದು ಗೆಳೆಯರೇ ಜೂನಿಯರ್ ಚಿರು ಸರ್ಜಾ ರವರ ಜನ್ಮದಿನದ ಸಂಭ್ರಮದ ಒಂದು ದಿನದ ಅಂತರದಲ್ಲಿ ಪ್ರೇರಣ ರವರು ಕೂಡ ಸಂತೋಷದ ಸುದ್ದಿಯನ್ನು ನೀಡಿದ್ದಾರೆ.

ಗೆಳೆಯರೆ ಕೆಲವೊಂದು ಮೂಲಗಳ ಪ್ರಕಾರ ಮೇಘನಾ ರಾಜ್ ರವರೊಂದಿಗೆ ಧ್ರುವ ಸರ್ಜಾ ರವರ ಪತ್ನಿಯಾಗಿರುವ ಪ್ರೇರಣಾ ರವರು ಕೂಡ ನಟಿಸಲಿದ್ದಾರೆ ಎಂಬ ಮಾತುಗಳು ಕೆಲವು ಮೂಲಗಳಿಂದ ಹರಿದು ಬಂದಿದೆ. ಅತಿ ಶೀಘ್ರದಲ್ಲೇ ಮೇಘನರಾಜ ರವರೊಂದಿಗೆ ಪ್ರೇರಣಾ ಶಂಕರ್ ಅವರು ಕೂಡ ನಟಿಸುವುದು ಕನ್ಫರ್ಮ್ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಮಾತು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

Get real time updates directly on you device, subscribe now.