ಮದುವೆಗೂ ಮುನ್ನ ಒಟ್ಟಾಗಿ ಜೀವನ ನಡೆಸಿ, ನಂತರ ಬೇರೆಯವರನ್ನು ಮದುವೆಯಾದ ಬಾಲಿವುಡ್ ನಟಿಯರು ಯಾರ್ಯಾರು ಗೊತ್ತೇ?? ಇವರೆಲ್ಲರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು.

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಚಿತ್ರರಂಗದ ಒಂದು ವಿಶೇಷ ಅಧ್ಯಾಯ ಎಂದು ಹೇಳಿದರು ಕೂಡ ತಪ್ಪಾಗಲಾರದು. ಇಲ್ಲಿನ ಬೆಳವಣಿಗೆಗಳು ಹಾಗೂ ವಿಚಾರ ವಿಮರ್ಶೆಗಳು ಬೇರೆಲ್ಲ ಚಿತ್ರರಂಗಗಳಿಗೆ ಹೋಲಿಸಿದರೆ ಸ್ವಲ್ಪ ವಿಭಿನ್ನವಾದದ್ದು. ಇಲ್ಲಿ ಆಚರಿಸುವ ಪದ್ಧತಿಗಳು ಕೂಡ ಸಾಕಷ್ಟು ವಿಚಿತ್ರವೆನಿಸುವಂತದ್ದು ಬೇರೆ ಚಿತ್ರಗಳನ್ನು ಗಳಿಗೆ ಹೋಲಿಸಿದರೆ. ಇಂದು ನಾವು ಹೇಳುತ್ತಿರುವುದು ಬಾಲಿವುಡ್ ಚಿತ್ರರಂಗದಲ್ಲಿ ಈ 6 ನಟಿಯರು ಮದುವೆಗೂ ಮುನ್ನ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಇದ್ದು ನಂತರ ಬೇರೆ ಮದುವೆಯಾಗಿದ್ದಾರೆ. ಹಾಗಿದ್ದರೆ ಆ ನಟಿಯರು ಯಾರು ಎಂಬ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ.

ಲಾರಾ ದತ್ತ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಲಾರದತ್ತ ಕೆಲಿ ದೋರ್ಜಿ ಜೊತೆಗೆ ಲಿವಿನ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಹಲವಾರು ವರ್ಷಗಳ ಸಂಬಂಧದ ನಂತರ ಇವರಿಬ್ಬರೂ ಕಾರಣಾಂತರದಿಂದ ಬೇರೆ ಆಗಬೇಕಾಗಿ ಬರುತ್ತದೆ. ಇದಾದ ನಂತರ ನಟಿ ಲಾರಾ ದತ್ತ ಅವರು ಖ್ಯಾತ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರನ್ನು ಮದುವೆಯಾಗುತ್ತಾರೆ. ಇನ್ನು ಇವರಿಬ್ಬರೂ ಕೂಡ ಒಂದು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಇಂದಿಗೂ ಕೂಡ ಚಿತ್ರಗಳಲ್ಲಿ ಲಾರಾ ದತ್ತಾ ರವರನ್ನು ನೋಡಲು ಅಭಿಮಾನಿಗಳು ಅಪೇಕ್ಷಿಸುತ್ತಾರೆ.

ಬಿಪಾಶಾ ಬಸು ಮತ್ತೊಬ್ಬ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಬಿಪಾಶಾ ಬಸು ರವರು ಸ್ಟಾರ್ ನಟ ಜಾನ್ ಅಬ್ರಹಾಂ ರವರೊಂದಿಗೆ 9ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿ ಇದ್ದರು. ಆದರೆ 9 ವರ್ಷಗಳ ನಂತರ ಇವರಿಬ್ಬರ ನಡುವೆ ಸಂಬಂಧದಲ್ಲಿ ಬಿರುಕು ಮೂಡಿಬಂದಿದ್ದು ಇಬ್ಬರೂ ಕೂಡ ಬೇರಾಗಿರುತ್ತಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಕೂಡ ಉಂಟುಮಾಡಿತ್ತು. ನಂತರ ನಟಿ ಬಿಪಾಶಾ ಬಸು ರವರು 2014 ರಲ್ಲಿ ನಟ ಕರಣ್ ಸಿಂಗ್ ಗ್ರೋವರ್ ರವರನ್ನು ಮದುವೆಯಾಗಿರುತ್ತಾರೆ.

ದೀಪಿಕಾ ಪಡುಕೋಣೆ ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಹಂತದಲ್ಲಿದ್ದಾರೆ. ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಾಲಿವುಡ್ನಲ್ಲಿ ಕೂಡ ನಟಿಸಿ ಬಂದಿದ್ದಾರೆ. ಇನ್ನು ನಟಿ ದೀಪಿಕಾ ಪಡುಕೋಣೆ ಅವರು ನಟ ರಣಬೀರ್ ಕಪೂರ್ ಅವರೊಂದಿಗೆ ಸಾಕಷ್ಟು ಗಂಭೀರವಾಗಿ ಪ್ರೀತಿಯಲ್ಲಿ ಬಿದ್ದಿದ್ದರೂ ಹಾಗೂ ಜೊತೆಗೆ ಕೂಡ ವಾಸಿಸುತ್ತಿದ್ದರು. ಆದರೆ ನಟ ರಣಬೀರ್ ಕಪೂರ್ ನಟಿ ಕತ್ರಿನಾ ಕೈಫ್ ಅವರಿಗೋಸ್ಕರ ದೀಪಿಕಾ ಪಡುಕೋಣೆ ಅವರಿಗೆ ಮೋಸ ಮಾಡಿರುತ್ತಾರೆ ಎಂಬ ಸುದ್ದಿ ಇದೆ. ಇದಾದನಂತರ ನಟಿ ದೀಪಿಕಾ ಪಡುಕೋಣೆ ಅವರು ನಟ ರಣವೀರ್ ಸಿಂಗ್ ರವರನ್ನು ವಿವಾಹವಾಗುತ್ತಾರೆ.

ಪ್ರಿಯಾಂಕಾ ಚೋಪ್ರಾ ಪ್ರಿಯಾಂಕ ಚೋಪ್ರಾ ರವರು ಬಾಲಿವುಡ್ ನಿಂದ ಹಾಲಿವುಡ್ನ ವರೆಗೂ ಜನಪ್ರಿಯತೆ ಪಡೆದುಕೊಂಡಿರುವ ನಟಿ. ಇನ್ನು ಇವರು ಬಹುತೇಕ ಬಾಲಿವುಡ್ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ಸುದ್ದಿಯಾಗಿದ್ದರು. ಅಕ್ಷಯ್ ಕುಮಾರ್ ಶಾರುಖ್ ಖಾನ್ ಶಾಹಿದ್ ಕಪೂರ್ ಹೀಗೆ ಹಲವಾರು ನಟರೊಂದಿಗೆ ಇವರ ಹೆಸರು ಕೇಳಿಬಂದಿತ್ತು. ಇನ್ನು ನಟ ಶಾಹಿದ್ ಕಪೂರ್ ಅವರೊಂದಿಗೆ ಹಲವಾರು ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಕೂಡ ಇದ್ದರು. ಇನ್ನು ಇವರು ಇದೆಲ್ಲ ಮುಗಿದ ನಂತರ 2018 ರಲ್ಲಿ ಅಮೇರಿಕಾದ ಖ್ಯಾತ ಪಾಪ್ ಗಾಯಕ ನಿಕ್ ಜೋನಸ್ ರವರನ್ನು ಮದುವೆಯಾಗುತ್ತಾರೆ.

ಐಶ್ವರ್ಯ ರೈ 2007 ರಲ್ಲಿ ಅಭಿಷೇಕ್ ಬಚ್ಚನ್ ರವರನ್ನು ಮದುವೆಯಾಗಿ ಸಂಸಾರಿಕ ಜೀವನಕ್ಕೆ ಕಾಲಿಟ್ಟಿರುವ ಐಶ್ವರ್ಯ ರೈ ಬಚ್ಚನ್ ರವರು ಆರಾಧ್ಯ ಎಂಬ ಮಗಳನ್ನು ಕೂಡ ಬಂದಿದ್ದಾರೆ. ಆದರೆ ಈ ಹಿಂದೆ ಇವರು ಸಲ್ಮಾನ್ ಖಾನ್ ರವರೊಂದಿಗೆ ಪ್ರೇಮ ಸಂಬಂಧದಲ್ಲಿ ಇದ್ದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಕರೀನಾ ಕಪೂರ್ ಕರೀನಾ ಕಪೂರ್ ಅವರು ಈಗಾಗಲೇ ನಟ ಸೈಫ್ ಅಲಿಖಾನ್ ಅವರನ್ನು ಮದುವೆಯಾಗಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ಇವರ ಹೆಸರು ಈ ಹಿಂದೆ ಶಾಹಿದ್ ಕಪೂರ್ ಅವರನ್ನು ಕೇಳಿಬಂದಿತ್ತು. ಇವರಿಬ್ಬರು ಮದುವೆ ಕೂಡ ಆಗುತ್ತಾರೆ ಎಂಬ ಹಲವಾರು ಪುಕಾರುಗಳು ಎದ್ದಿದ್ದವು. ಆದರೆ ಹಲವಾರು ಕಾರಣಗಳಿಂದ ಇವರಿಬ್ಬರು ದೂರವಾಗುತ್ತಾರೆ.

Get real time updates directly on you device, subscribe now.