ಇದ್ದಕ್ಕಿದ್ದ ಹಾಗೆ ಯಾರು ಊಹಿಸದ ರೀತಿಯಲ್ಲಿ ಸಾಲು ಮರದ ತಿಮ್ಮಕ್ಕಳ ಮನೆಗೆ ನಟ ದರ್ಶನ್ ಭೇಟಿ ಯಾಕೆ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಟ ದರ್ಶನ್ ನಟನೆಗೆ ಮಾತ್ರವಲ್ಲ, ಅವರ ಸಮಾಜ ಮುಖಿ ಕಾರ್ಯದಿಂದಲೂ ಹೆಸರು ಮಾಡಿದ್ದಾರೆ ಸ್ನೇಹಿತರೆ, ಅದರಲ್ಲು ಹಿರಿಯರು, ದೊಡ್ದವರು ಎಂದರೆ ಡಿ ಬಾಸ್ ಗೆ ಎಲ್ಲಿಲ್ಲದ ಪ್ರೀತಿ. ಕನ್ನಡಿಗರ ಮನೆ ಮನಸ್ಸಿನಲ್ಲಿ ನೆಲೆಸಿರುವ ದಾಸ, ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ದೊಡ್ಡ ಫ್ಯಾನ್ ಫಾಲೋವರ್ಸ್ ನ್ನು ಹೊಂದಿದ್ದಾರೆ.

ಇನ್ನು ದರ್ಶನ್ ಅವರ ಖ್ಯಾತಿ ಎಷ್ಟರ ಮಟ್ಟಿಗೆ ಹಬ್ಬಿದೆ ಎಂದರೆ ಪಾಕಿಸ್ತಾನದ ವ್ಯಕ್ತಿಯೊಬ್ಬ ದರ್ಶನ್ ಅಭಿನಯದ ಸಿನಿಮಾ ನೋಡುವುದಕ್ಕಾಗಿಯೇ ಕನ್ನಡ ಕಲಿತು ಯೂಟ್ಯೂಬ್ ಚಾನೆಲ್ ಮೂಲಕ ದರ್ಶನ್ ಸಿನಿಮಾವನ್ನು ವಿಮರ್ಶೆ ಕೂಡ ಮಾಡುತ್ತಾನೆ. ಇನ್ನು ನಟ ದರ್ಶನ್ ಇತರರಿಗೆ ಗೌರವಕೊಡುವ ವಿಚಾರದಲ್ಲಿ ಎಂದಿಗೂ ಹಿಂದೇಟು ಹಾಕಿಲ್ಲ. ಎಲ್ಲರನ್ನೂ ಒಂದೇ ರೀತಿಯಾಗಿ ನೋಡುತ್ತಾರೆ ಡಿ ಬಾಸ್. ಹಾಗಾಗಿ ಅವರ ಸುತ್ತ ಅಭಿಮಾನಿಗಳು ಸಕ್ಕರೆಗೆ ಮುತ್ತಿದ ಇರುವೆಯಂತೆ ಸುತ್ತುತ್ತಲೇ ಇರುತ್ತಾರೆ! ದರ್ಶನ್ ಅತ್ಯಂತ ಸರಳ ವ್ಯಕ್ತಿ. ಹಿರಿಯರ ಬಗ್ಗೆ ಗೌರವ ಅಭಿಮಾನ ಬೆಳೆಸಿಕೊಂಡಿರುವ ದರ್ಶನ್ ಇತ್ತೀಚಿಗೆ ಬಿ ಸರೋಜಾ ದೇವಿಯವರನ್ನು ಭೇಟಿ ಮಾಡಿದ್ದು ಗೊತ್ತೆ ಇದೆ.

ಇದೀಗ ಸಾಲು ಮರದ ತಿಮ್ಮಕ್ಕ ಅವರನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ ನಟ ದರ್ಶನ್. ನೆಲಮಂಗಲದ ಮನೆಯಲ್ಲಿ ವಾಸಿಸುವ ತಿಮ್ಮಕ್ಕ ಇತ್ತೀಚಿಗೆ ಹುಷಾರಿಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಪಾರಿನ್ ನಲ್ಲಿ ಶೂಟಿಂಗ್ ನಲ್ಲಿದ್ದ ಕಾರಣ ದರ್ಶನ್ ಇದೀಗ ತಿಮ್ಮಕ್ಕ ಅವರನ್ನು ಭೇಟಿ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಜೊತೆ ಎಂಜಿ ರಾಮಮೂರ್ತಿ ಹಾಗೂ ಇತರ ಸ್ನೇಹಿತರು ತಿಮ್ಮಕ್ಕ ಅವರನ್ನು ಮಾತನಾಡಿಸಿದರು. ಜೊತೆಗೆ ಸ್ವಲ್ಪ ಸಮಯ ತಿಮ್ಮಕ್ಕನ ಜೊತೆ ಕಾಲ ಕಳೆದ ದರ್ಶನ್ ತಿಮ್ಮಕ್ಕ ಅವರ ಆಶೀರ್ವಾದ ಪಡೆದು ಬಂದಿದ್ದಾರೆ.

Get real time updates directly on you device, subscribe now.