ಕನ್ನಡ ಚಿತ್ರರಂಗದ ಬ್ರಾಂಡ್ ದರ್ಶನ್ ಬಗ್ಗೆ ಕೇಳಿದ್ದಕ್ಕೆ ಗಜ ಚಿತ್ರದ ನಾಯಕಿ ಹೇಳಿದ್ದೆ ಬೇರೆ.ಮಾಧ್ಯಮದವರೇ ಶಾಕ್.

104

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರ ರಂಗಕ್ಕೆ ಪರಭಾಷೆಯಿಂದ ಹಲವಾರು ನಟಿಯರು ಆಗಮಿಸಿ ನಮ್ಮ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ನಮಗೆ ಇಂದಿಗೂ ನೆನಪಾಗುವ ಪರಭಾಷಾ ನಟಿಯರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಯಾಕೆಂದರೆ ಇಂದು ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ನಟಿಯರು ಪರಭಾಷಾ ನಟಿಯರ ಕೊರತೆಯನ್ನು ಸಂಪೂರ್ಣವಾಗಿ ಪೂರ್ತಿ ಮಾಡಿದ್ದಾರೆ. ಇಂದು ನಾವು ಹೇಳಲು ಹೊರಟಿರುವ ನಟಿ ನವ್ಯಾ ನಾಯರ್. ಇವರು ಕನ್ನಡ ಚಿತ್ರರಂಗದ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅದರಲ್ಲಿ ಕೂಡ ಕನ್ನಡ ಚಿತ್ರರಂಗದಲ್ಲಿ ಇವರು ಪಾದರ್ಪಣೆ ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗಜ ಚಿತ್ರದ ಮೂಲಕ. ತಮ್ಮ ಮುಗ್ಧ ಸೌಂದರ್ಯ ಹಾಗೂ ಮುಗ್ಧ ನಟನೆಯ ಮೂಲಕ ಎಲ್ಲರ ಮನಗೆದ್ದಿರುವ ಅಂತಹ ನವ್ಯನಾಯರ್ ಅವರು ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಕ್ರೇಜಿಸ್ಟಾರ್ ರವಿಚಂದ್ರನ್ ಹೀಗೆ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನವ್ಯನಾಯರ್ ಮೂಲತಹ ಮಲಯಾಳಂ ಚಿತ್ರರಂಗದವರಾಗಿದ್ದರು ಕೂಡ ತಮಿಳು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಇಲ್ಲಿನ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರು ಇತ್ತೀಚಿಗೆ ಡಿಬಾಸ್ ಕುರಿತಂತೆ ಒಂದು ವಿಷಯವನ್ನು ಹೇಳಿಕೊಂಡಿದ್ದಾರೆ.

ನವ್ಯ ನಾಯರ್ ಅವರು ಮಲಯಾಳಂನಲ್ಲಿ ಒಂದು ಪುಸ್ತಕವನ್ನು ಬರೆದಿದ್ದು ಅದನ್ನು ಕನ್ನಡಕ್ಕೆ ಅನುವಾದ ಮಾಡಿ ಬಿಡುಗಡೆಮಾಡುವ ಸಮಾರಂಭದಲ್ಲಿ ದರ್ಶನ್ ರವರ ಕುರಿತಂತೆ ಅವರು ನನ್ನ ನೆಚ್ಚಿನ ನಟ ಅವರೊಂದಿಗೆ ನಟನೆ ಮಾಡಲು ನನಗೆ ತುಂಬಾ ಇಷ್ಟ ಎಂಬುದಾಗಿ ಹೇಳಿಕೊಂಡಿದ್ದಾರೆ. ಅವರೊಂದಿಗೆ ನಟನೆ ಮಾಡಿರುವ ಗಜ ಶೌರ್ಯ ಬಾಸ್ ಚಿತ್ರಗಳು ಇಂದಿಗೂ ಕೂಡ ಕನ್ನಡ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬುದಾಗಿಯೂ ಕೂಡ ಹಂಚಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.