ಶ್ರೀದೇವಿ ಹೇಮಮಾಲಿನಿ ಹಾಗೂ ಜೂಹಿಚಾವ್ಲಾ ರವರ ಮಕ್ಕಳ ನಡುವೆ ನಿಮಗೆ ಗೊತ್ತಿಲ್ಲದ ಕನೆಕ್ಷನ್ ಇದೆ ಏನದು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳ ಹೊರಟಿರುವ ವಿಷಯ ಬಾಲಿವುಡ್ನ ಚಿತ್ರರಂಗದ ಖ್ಯಾತ ನಟಿ ತ್ರಯರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರುವುದು ನಟಿಯರಾದಂತಹ ಹೇಮಾಮಾಲಿನಿ ಶ್ರೀದೇವಿ ಹಾಗೂ ಜೂಹಿ ಚಾವ್ಲಾ ಅವರ ಕುರಿತಂತೆ. ಹೌದು ಸ್ನೇಹಿತರೆ ಬಾಲಿವುಡ್ ಚಿತ್ರರಂಗದಲ್ಲಿ ಅವರ ಜಮಾನದಲ್ಲಿ ಟಾಪ್ ನಟಿಯರಾಗಿ ಮಿಂಚಿದ್ದಂತಹ ನಟಿಯ ರಾಗಿದ್ದರು ಇವರು ಮೂವರು. ತಮ್ಮ ಜಮಾನದಲ್ಲಿ ಎಲ್ಲಾ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ ಅಂತಹ ಶ್ರೇಯ ಈ ಮೂವರ ನಟಿಯರಿಗೆ ಕೂಡ ಸಲ್ಲುತ್ತದೆ.

ಇನ್ನು ಇವರು ಮೂವರು ಪರಸ್ಪರ ತಮ್ಮ ಕಷ್ಟಕಾಲಕ್ಕೆ ಒಬ್ಬರಿಗೊಬ್ಬರು ಸಹಾಯವನ್ನು ಕೂಡ ಮಾಡಿದ್ದಾರೆ. ಹೀಗಾಗಿ ಹೇಮಮಾಲಿನಿ ಶ್ರೀದೇವಿ ಹಾಗೂ ಜೂಹಿಚಾವ್ಲಾ ಸಿನಿಮಾಗಿಂತ ಹೊರತಾಗಿಯೂ ಕೂಡ ಸ್ನೇಹಿತರಾಗಿದ್ದರು. ಇನ್ನು ಇವರಲ್ಲಿ ಶ್ರೀದೇವಿ ಅವರು ಅಕಾಲಿಕವಾಗಿ ನಮ್ಮನ್ನೆಲ್ಲಾ ಅಕಾಲಿಕವಾಗಿ ಅಗಲಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ಇನ್ನು ಈ ಸಂದರ್ಭದಲ್ಲಿ ನಟಿ ಜೂಹಿ ಚಾವ್ಲಾ ರವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಶ್ರೀದೇವಿಯವರಿಗೆ ಶ್ರದ್ಧಾಂಜಲಿಯನ್ನು ಕೂಡ ಸಲ್ಲಿಸಿದ್ದರು.

ಇನ್ನು ಜೂಹಿಚಾವ್ಲಾ ರವರು ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಕೂಡ ಹಂಚಿಕೊಂಡಿದ್ದರು. ನಿಮಗೆಲ್ಲ ತಿಳಿದಿರುವಂತೆ ಶ್ರೀದೇವಿಯವರ ದೊಡ್ಡ ಮಗಳ ಹೆಸರು ಜಾಹ್ನವಿ ಕಪೂರ್ ಎಂಬುದಾಗಿ. ಇನ್ನು ಜೂಹಿಚಾವ್ಲಾ ಅವರು ಕೂಡ ತಮ್ಮ ಮಗಳಿಗೆ ಹೆಸರಿಡುವಾಗ ಜಾಹ್ನವಿ ಎಂಬುದಾಗಿ ಇಟ್ಟಿದ್ದರು ಇದನ್ನು ಶ್ರೀದೇವಿಯವರಿಗೆ ಫೋನ್ ಮಾಡಿ ಕೂಡ ತಿಳಿಸಿದರು. ಈ ವಿಚಾರ ಕೇಳಿ ಶ್ರೀದೇವಿ ಅವರು ಕೂಡ ತುಂಬಾ ಸಂತೋಷಪಟ್ಟಿದ್ದರು.

ಇನ್ನು ನಟಿ ಹೇಮಾಮಾಲಿನಿ ಅವರು ಕೂಡ ಒಂದು ಸಂದರ್ಶನದಲ್ಲಿ ಅವರ ಮಗಳ ಆದಂತಹ ಇಶಾ ಡಿಯೋಲ್ ರವರನ್ನು ಸಿನಿಮಾದಲ್ಲಿ ಹೇಗೆ ಲಾಂಚ್ ಮಾಡಬೇಕೆಂಬ ಕುರಿತಂತೆ ಸಾಕಷ್ಟು ಚಿಂತಿತರಾಗಿದ್ದರು. ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದಿದ್ದು ಶ್ರೀದೇವಿ ಹಾಗೂ ಅವರ ಪತಿ ಯಾಗಿರುವ ಬೋನಿಕಪೂರ್ ರವರು. ಹೌದು ಸ್ನೇಹಿತರೆ ಹೇಮಮಾಲಿನಿ ಅವರ ಮಗಳು ಇಶಾ ಡಿಯೋಲ್ ರವರನ್ನು ಲಾಂಚ್ ಮಾಡಿದ್ದು ಶ್ರೀದೇವಿ ಅವರ ಹೋಂ ಪ್ರೊಡಕ್ಷನ್ ನಲ್ಲಿ.

ಇಷ್ಟು ಮಾತ್ರವಲ್ಲದೆ ಈ ಸಂದರ್ಭದಲ್ಲಿ ಶ್ರೀದೇವಿಯವರ ತಮ್ಮ ಎರಡನೇ ಮಗುವಿನ ಗರ್ಭವತಿ ಆಗಿದ್ದರೂ. ಆದರೂ ಕೂಡ ಈ ಸಮಯದಲ್ಲಿ ಇಶಾ ದಿಯೋಲ್ ರವರ ಚಿತ್ರೀಕರಣದ ಸೆಟ್ ಗೆ ತೆರಳಿ ಹೇಮಮಾಲಿನಿ ಅವರಿಗೆ ಹಾಗೂ ಅವಳ ಮಗಳಿಗೆ ಧೈರ್ಯವನ್ನು ತುಂಬುತ್ತಿದ್ದರು ಹಾಗೂ ಚಿಂತೆ ಮಾಡಿದಂತೆ ಆತ್ಮವಿಶ್ವಾಸವನ್ನು ಕೂಡ ತುಂಬುತ್ತಿದ್ದರು. ಇನ್ನು ಹೇಮಮಾಲಿನಿ ಯವರು ಶ್ರೀದೇವಿ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದು ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಿತ್ರದ ಸ್ಕ್ರೀನಿಂಗ್ ಸಮಯದಲ್ಲಿ.

ಈ ಸಮಯದಲ್ಲಿ ಅವರ ಮಗಳು ಜಾನವಿ ಕಪೂರ್ ಅವರ ಮೊದಲ ಚಿತ್ರ ಧಡಕ್ ಬಿಡುಗಡೆಯಾಗುವ ಸನ್ನಿಹಿತವಾಗಿತ್ತು. ಆಗ ಶ್ರೀದೇವಿ ಅವರು ಈ ಕುರಿತಂತೆ ಚಿಂತಿತರಾಗಿದ್ದರು. ಈ ಸಂದರ್ಭದಲ್ಲಿ ಹೇಮಮಾಲಿನಿ ಅವರು ಶ್ರೀದೇವಿಯವರಿಗೆ ಧೈರ್ಯವನ್ನು ತುಂಬುತ್ತಾರೆ. ಇನ್ನು ಶ್ರೀದೇವಿ ಅವರು ಈ ಲೋಕವನ್ನು ತ್ಯಜಿಸಿದ ನಂತರ ಜಾಹ್ನವಿ ಕಪೂರ್ ಅವರ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಹೇಮಮಾಲಿನಿ ಹಾಗೂ ಅವರ ಮಗಳು ಜಾಹ್ನವಿ ಕಪೂರ್ ಅವರ ಬೆಂಬಲಕ್ಕೆ ನಿಂತಿದ್ದರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.